ಕೋವಿಡ್‌ ವ್ಯಾಕ್ಸಿನ್‌ ಹಾಕಿಸಿಕೊಂಡವರಿಗೆ ರಾಂಚಿಯ ಅಂಗಡಿಗಳಲ್ಲಿ ಶೇ.60 ರವರೆಗೆ ರಿಯಾಯಿತಿ!

ದೇಶದ ನಾನಾ ಭಾಗಗಳಲ್ಲಿ ಜನರು ಕೊರೊನಾ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಹಿಂದೆಸರಿಯುತ್ತಿದ್ದಾರೆ. ಹೀಗಾಗಿ, ಜನರನ್ನು ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಪ್ರೇರೇಪಿಸುವ ಉದ್ಧೇಶದಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿನ ಅಂಗಡಗಳು ವ್ಯಾಕ್ಸಿನ್‌ ಹಾಕಿಸಿಕೊಂಡ ಜನರಿಗೆ 60% ರವರೆಗೆ ರಿಯಾಯಿತಿ ನೀಡುವುದಾಗಿ ಘೋಷಿಸಿವೆ.

ರಾಂಚಿಯ ಜಿಲ್ಲಾಡಳಿತ ಕೋವಿಡ್‌ ವ್ಯಾಕ್ಸಿನ್‌ ಹಾಕಿಸಿಕೊಳ್ಳುವಂತೆ ಜನರನ್ನು ಪ್ರೇರೇಪಿಸಲು ವ್ಯಾಪಾರ – ವಾಣಿಜ್ಯದಾರಿಗೆ ಮನವಿ ಮಾಡಿತ್ತು. ಜಿಲ್ಲಾಡಳಿತದ ಮನವಿಯ ಮೇರೆಗೆ ಅಂಗಡಿಯವರು ಸ್ವಯಂಪ್ರೇರಣೆಯಿಂದ ರಿಯಾಯಿತಿ ನೀಡುತ್ತಿದ್ದಾರೆ ಎಂದು ಜಾರ್ಖಂಡ್ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್ ತಿಳಿಸಿದ್ದಾರೆ.

ಇಲ್ಲಿಯವರೆಗೆ, 26 ಅಂಗಡಿಯವರು ಆಯ್ದ ವಸ್ತುಗಳ ಮೇಲೆ ಶೇಕಡಾ 45 ರವರೆಗೆ ರಿಯಾಯಿತಿಯನ್ನು ನೀಡುತ್ತಿದ್ದರು, ಕೆಲವು ವಸ್ತುಗಳ ಮೇಲೆ ಅವರು ಶೇಕಡಾ 60 ರಷ್ಟು ರಿಯಾಯಿತಿಯನ್ನು ನೀಡಲು ಮುಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

“ಈಗಾಗಲೇ ಲಸಿಕೆ ಪಡೆದ ಜನರಿಗೆ ರಿಯಾಯಿತಿಯನ್ನು ನೀಡುತ್ತಿರುವ ಅಂಗಡಿಯವರ ಪಟ್ಟಿಯನ್ನು ಜಿಲ್ಲಾಡಳಿತ ನಮ್ಮನ್ನು ಕೇಳಿದೆ. ನಾವು ಅಂಗಡಿಯವರನ್ನು ಸಂಪರ್ಕಿಸಿದಾಗ, ಅವರಲ್ಲಿ ಹಲವರು ಆಯ್ದ ವಸ್ತುಗಳ ಮೇಲೆ ಶೇಕಡಾ 5 ರಿಂದ 60 ರವರೆಗೆ ರಿಯಾಯಿತಿಯನ್ನು ನೀಡುತ್ತಿದ್ದಾರೆ” ಎಂದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ. ಅಲ್ಲದೆ, ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ನೀಡಿರುವುದಾಗಿಯೂ ತಿಳಿಸಿದ್ದಾರೆ.

“ನಂತರ, ಅಂಗಡಿಯವರ ಪಟ್ಟಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಯಿತು” ಎಂದು ಜೈನ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆಬರುವಂತೆ ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬತ್ತಿಹೋದ ಸರಸ್ವತಿ ನದಿಯ ಹುಡುಕಾಟಕ್ಕೆ ಹರಿಯುತ್ತಿದೆ ಹಣದ ಹೊಳೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights