ಹಿರಿಯ ನಟ ನಾಸೀರುದ್ದೀನ್​ ಶಾ ಅವರಿಗೆ ನ್ಯುಮೋನಿಯಾ; ಆಸ್ಪತ್ರೆಗೆ ದಾಖಲು

ಹಿರಿಯ ನಟ ನಾಸೀರುದ್ದೀನ್​ ಶಾ ಅವರ ಶ್ವಾಸಕೋಶದಲ್ಲಿ ನ್ಯುಮೋನಿಯಾ ಸಮಸ್ಯೆ ಕಾಣಿಸಿಕೊಂಡಿದ್ದು, ಮುಂಬೈನ ಹಿಂದೂಜ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಎರಡು ದಿನಗಳ ಕಾಲ ಮೆಡಿಕಲ್​ ಅಬ್ಸರ್ವೇಷನ್​ನಲ್ಲಿ ಇರಬೇಕೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಶಾ ಅವರ ಶ್ವಾಸಕೋಶದಲ್ಲಿ ಒಂದು ಪ್ಯಾಚ್​ ಕಂಡುಬಂದಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕಾಯಿತು. ಅವರ ಆರೋಗ್ಯ ಸ್ಥಿರವಾಗಿದೆ. ಸದ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಚೇತರಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಅವರ ಮ್ಯಾನೇಜರ್​ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ, ನಾಸೀರುದ್ದೀನ್​ ಶಾ ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಆ ಸಮಯದಲ್ಲಿ ಇರ್ಫಾನ್​ ಖಾನ್ ಮತ್ತು ರಿಷಿ ಕಪೂರ್ ಸಾವನ್ನಪ್ಪಿದ್ದರು. ಆ ಬಳಿಕ ಇವರ ಆರೋಗ್ಯ ಕ್ಷೀಣಿಸುತ್ತಿರುವ ಸುದ್ದಿಯೂ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು.

ಇದನ್ನೂ ಓದಿ: 50,000 ರೂ ಪಡೆದು, ಆರೋಪಿಗಳಿಗೆ ಶೂನಿಂದ ಹೊಡೆದು ಪ್ರಕರಣ ಇತ್ಯರ್ಥ ಮಾಡಿಕೊಳ್ಳಿ: ಅತ್ಯಾಚಾರ ಸಂತ್ರಸ್ತೆಗೆ ಪಂಚಾಯತ್‌ ಸೂಚನೆ!

ಬಳಿಕ ನಾಸೀರುದ್ದೀನ್ ಶಾ ಅವರು ಎಲ್ಲಾ ವದಂತಿಗಳಿಗೆ ತೆರೆ ಎಳೆದು, ನಾನು ಆರೋಗ್ಯವಾಗಿದ್ದೇನೆ. ದೇಶವ್ಯಾಪಿ ಲಾಕ್​ಡೌನ್​ ಇರುವುದರಿಂದ ಹೋಂ ಅಬ್ಸರ್ವೇಷನ್​ನಲ್ಲಿದ್ದೇನೆ ಎಂದು ಹೇಳಿದ್ದರು.

ನಾಸೀರುದ್ದೀನ್​ ಶಾ ಖ್ಯಾತ ನಟರಲ್ಲಿ ಒಬ್ಬರು. ಇವರು 1970ರಲ್ಲಿ ನ್ಯಾಷನಲ್​ ಸ್ಕೂಲ್​ ಆಫ್​ ಡ್ರಾಮಾ ಕೋರ್ಸ್​ ಮುಗಿಸಿದರು. ಬಳಿಕ ಟೆಲಿವಿಷನ್​ ಇನ್ಸ್​​ಟಿಟ್ಯೂಟ್​ ಆಫ್​ ಇಂಡಿಯಾದಲ್ಲಿ ಅಭ್ಯಾಸ ಮಾಡಿದರು. ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ತಮ್ಮ 70ನೇ ವಯಸ್ಸಿನಲ್ಲೂ ಷಾ ಅವರು ಅಭಿನಯಿಸುತ್ತಿದ್ದಾರೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ನಿಶಾಂತ್, ಜಾನೆ ಭಿ ದೊ ಯಾರೋ, ಇಜಾಜತ್, ಬಜಾರ್, ಕಥಾ, ಮಸೂಮ್ ಮತ್ತು ಮಿರ್ಚ್​ ಮಸಾಲ ಸಿನಿಮಾಗಳಲ್ಲಿ ನಸೀರುದ್ದೀನ್​ ಷಾ ಅಭಿನಯಿಸಿದ್ದಾರೆ. ಜೊತೆಗೆ ಕಮರ್ಷಿಯಲ್ ಫಿಲ್ಮ್​​ಗಳಾದ ಹೀರೋ ಹಿರಾಲಲ್, ಕರ್ಮ, ತ್ರಿದೇವ್, ವಿಶ್ವಾತ್ಮ , ಚಮತ್ಕಾರ್​ ಮತ್ತು ಮೊಹ್ರಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಂಡಿಶ್​ ಬಂಡಿತ್ಸ್​ ಮತ್ತು ಮೀ ರಕ್ವಾಸಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಯುಎಪಿಎ ಆರೋಪ ಖುಲಾಸೆ; 12 ವರ್ಷಗಳ ಬಳಿಕ ಜೈಲಿಂದ ಬಿಡುಗಡೆಯಾದ ನಿರಪರಾಧಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights