Bigg Boss : ಡಿಯುಗೆ ‘ನಿನ್ನ ರಾಜಾ ನಾನು ನನ್ನ ರಾಣಿ ನೀನು’ ಎಂದ ಅವಿ..!

ಬಿಗ್ ಬಾಸ್ ಕನ್ನಡ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸ್ಪರ್ಧಿಗಳು ಸಕತ್ ಪೈಪೋಟಿಗಿಳಿದಿದ್ದಾರೆ. ಸದಾ ಕಾಲ ಜೊತೆ ಜೊತೆಯಾಗಿ ಇರುತ್ತಿದ್ದ ಸ್ಪರ್ಧಿಗಳು ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕೊಂಚ ಮಟ್ಟಿಗೆ ದೂರ ಉಳಿಯಲು ಆರಂಭಿಸಿದ್ದಾರೆ. ಜೋಡಿಗಳ ಮಧ್ಯೆಯೇ ಮನಸ್ತಾಪ, ಜಗಳ, ಬೇಸರ ಶುರುವಾಗಿದೆ. ಆದರೂ ಮಧ್ಯೆ ಬಿಗ್ ಬಾಸ್ ಕೊಡುವ ಟಾಸ್ಕ್ ಗಳು ಮತ್ತೆ ಸ್ಪರ್ಧಿಗಳನ್ನು ಜೋಡಿಯಾಗಿ ಟಿವಿ ಸ್ಕ್ರೀನ್ ಮೇಲೆ ನೋಡುವಂತೆ ಮಾಡುತ್ತೆ.

ಹೌದು… ನಿನ್ನೆ ಬಿಗ್ ಬಾಸ್ ಮನೆಯಲ್ಲಿ ದಿವ್ಯ ಉರುಡುಗ ಮತ್ತು ಅರವಿಂದ್ ಕೆಪಿ ಜೋಡಿಯಾಗಿ ನೃತ್ಯ ಮಾಡಿದ್ದಾರೆ. ಸೀತಾರಾಮ ಕಲ್ಯಾಣ ಚಿತ್ರದ ‘ನಿನ್ನ ರಾಜಾ ನಾನು ನನ್ನ ರಾಣಿ ನೀನು’  ಹಾಡಿಗೆ ಡಿಯು ಮತ್ತು ಅವಿ (ದಿವ್ಯ ಉರುಡುಗ ಮತ್ತು ಅರವಿಂದ್ ಕೆಪಿ) ಸಕತ್ ಸ್ಟೆಪ್ ಹಾಕಿದ್ದಾರೆ. ಈ ನೃತ್ಯಕ್ಕೆ ಮನೆ ಮಂದಿ ಮಾತ್ರವಲ್ಲ ಬಿಗ್ ಬಾಸ್ ಪ್ರೇಕ್ಷಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ದಿವ್ಯ ಉರುಡುಗ ಮತ್ತು ಅರವಿಂದ್ ಕೆಪಿ ಈ ಡ್ಯಾನ್ಸ್ ಮಾಡಲು ಒಂದು ಕಾರಣ ಕೂಡ ಇದೆ. ಡಿಯು ಕಪ್ ಒಡೆದ ಪರಿಣಾಮ ಬಿಗ್ ಬಾಸ್ ಡಿಯುಗೆ ಅವಿ ಜೊತೆ ನೃತ್ಯ ಮಾಡಲು ತಿಳಿಸಿದ್ದರು. ಬಿಗ್ ಬಾಸ್ ಆದೇಶದಂತೆ ಇವರಿಬ್ಬರು ನೃತ್ಯ ಮಾಡಿದ್ದಾರೆ. ನೃತ್ಯದಲ್ಲಿ ಅವಿ ಡಿಯುಳನ್ನು ಲಿಫ್ಟ್ ಮಾಡಿ ಇನ್ನುಳಿದ ಸ್ಪರ್ಧಿಗಳ ಚಪ್ಪಾಳೆ ಗಿಟ್ಟಿ ಎಂಜಾಯ್ ಮಾಡಿದ್ದಾರೆ.

ಟಾಸ್ಕ್ ವಿಚಾರದಲ್ಲಿ ಅರವಿಂದ್ ಕೆಪಿ ನಿಧಿ ಸುಬ್ಬಯ್ಯ ಅವರಿಗೆ (ಬಾಯಿ ಮುಚ್ಕೋ) ಹೇಳಿದ ಮಾತನ್ನು ದಿವ್ಯ ಉರುಡುಗ ತಿರಸ್ಕರಿಸಿದ್ದರು. ಇದರಿಂದ ಬೇಸರವಾಗಿದ್ದ ಅರವಿಂದ್ ಗಳಗಳನೆ ಅತ್ತಿದ್ದರು. ಇದರಿಂದ ಇವರಿಬ್ಬರ ನಡುವೆ ಕೊಂಚ ಬೇಸರ ಇತ್ತಾದರೂ ನೃತ್ಯ ಮಾಡುವ ಮೂಲಕ ಇಬ್ಬರೂ ಬೇಸರದಿಂದ ಹೊರಬಂದಂತೆ ಕಾಣುತ್ತಿದೆ.

ಆದರೆ ಬಿಗ್ ಬಾಸ್ ಡಿಯು ಮಾಡಿದ ತಪ್ಪಿಗೆ ಅರವಿಂದ್ ಜೊತೆನೇ ನೃತ್ಯ ಮಾಡಲು ಯಾಕೆ ಹೇಳಿದರು? ಇದಕ್ಕೆ ಬಿಗ್ ಬಾಸ್ ಉತ್ತರ ಕೊಡಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights