ಯುಎಸ್, ಬ್ರೆಜಿಲ್ ನಂತರ 4 ಲಕ್ಷ ಕೋವಿಡ್ ಸಾವುಗಳನ್ನು ದಾಟಿದ ಭಾರತ!

ಯುಎಸ್, ಬ್ರೆಜಿಲ್ ನಂತರ 4 ಲಕ್ಷ ಕೋವಿಡ್ -19 ಸಾವುಗಳನ್ನು ದಾಟಿದ ಭಾರತ ಮೂರನೇ ದೇಶವಾಗಿದೆ.

ಭಾರತ ಕಳೆದ 24 ಗಂಟೆಗಳಲ್ಲಿ 853 ಸಾವುಗಳೊಂದಿಗೆ ಒಟ್ಟು 4 ಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಸಾಕ್ಷಿಯಾದ ವಿಶ್ವದ ಮೂರನೇ ರಾಷ್ಟ್ರವಾಗಿದೆ. ಯುಎಸ್ಎ ಮತ್ತು ಬ್ರೆಜಿಲ್ ನಂತರ ಭಾರತ ಅತೀ ಹೆಚ್ಚು ಕೊರೊನಾ ಸಾವುಗಳು ಸಂಭವಿಸಿದ ದೇಶವಾಗಿದೆ. ಯುಎಸ್ಎಯ 6.05 ಲಕ್ಷ ಮತ್ತು ಬ್ರೆಜಿಲ್ನ 5.2 ಲಕ್ಷ ಸಾವಿನ ಸಂಖ್ಯೆಯಾಗಿದ್ದರೆ ಭಾರತ ಈವರೆಗೆ ಒಟ್ಟು 4,00,312 ಕೊರೊನಾ ಸಾವಿನ ಸಂಖ್ಯೆ ದಾಖಲಿಸಿದೆ.

ಭಾರತವು ಕಳೆದ 24 ಗಂಟೆಗಳಲ್ಲಿ 46,617 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು ಒಟ್ಟು 59,384 ರೋಗಿಗಳು ಚೇತರಿಸಿಕೊಂಡಿದ್ದಾರೆ.

ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಲ್ಲಿ ಕೇರಳದಲ್ಲಿ 12,868 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 9,195 ಪ್ರಕರಣಗಳು, 4,481 ತಮಿಳುನಾಡು, ಆಂಧ್ರಪ್ರದೇಶ 3,841 ಪ್ರಕರಣಗಳು ಮತ್ತು ಕರ್ನಾಟಕದಲ್ಲಿ 3,203 ಪ್ರಕರಣಗಳು ದಾಖಲಾಗಿವೆ.

ಭಾರತದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,04,58,251 ಕ್ಕೆ ಏರಿದೆ.ಕಳೆದ 24 ಗಂಟೆಗಳಲ್ಲಿ, ಮಹಾರಾಷ್ಟ್ರದಲ್ಲಿ (252) ಗರಿಷ್ಠ ಸಾವುನೋವುಗಳು ವರದಿಯಾಗಿದ್ದು, ಕೇರಳದಲ್ಲಿ 124 ಸಾವುಗಳು ಸಂಭವಿಸಿವೆ.ಕಳೆದ 24 ಗಂಟೆಗಳಲ್ಲಿ ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 13,620 ರಷ್ಟು ಕಡಿಮೆಯಾಗಿದೆ. ಇದು ಪ್ರಸ್ತುತ 5,09,637 ರಷ್ಟಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 42,64,123 ಡೋಸ್‌ಗಳನ್ನು ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights