ಫ್ಯಾಕ್ಟ್‌ಚೆಕ್ : ಸಿಗರೇಟು ಸೇವನೆ ಬಿಟ್ಟ, ಕಾರು ಖರೀದಿಸಿ ಕೆಟ್ಟ ! ಈ ಕಥೆ ನಿಜವೇ ?

ಸಿಗರೇಟ್‌ ಸೇವನೆಯನ್ನು ತ್ಯಜಿಸಿದ ವ್ಯಕ್ತಿಯೊಬ್ಬ ಕೇವಲ 6 ವರ್ಷಗಳಲ್ಲಿ ಸಿಗರೇಟ್‌ ಸೇವನೆಗೆಂದು ಖರ್ಚು ಮಾಡುತ್ತಿದ್ದ ಹಣವನ್ನ ಉಳಿಸಿ ಕಾರನ್ನು ಖರೀದಿಸಿದ್ದಾನೆ ಎಂದು ಪ್ರತಿಪಾದಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಆದರೆ ದುರ್ದೈವ ನೋಡಿ, ಧೂಮಪಾನದಿಂದ ಆರೋಗ್ಯ ಹಾಳಾಗಿ ಸಾವು ಸಂಭವಿಸುತ್ತದೆ ಎಂದು ಸಿಗರೇಟ್ ಸೇದುವುದನ್ನೆ ಬಿಟ್ಟಿದ್ದ ಈತ ಕೊನೆಗೆ ಸಿಗರೇಟ್ ಹಣದಲ್ಲಿ ಕೊಂಡ ಕಾರು ಚಾಲನೆ ವೇಳೆ ಅಪಘಾತದಲ್ಲಿ ನಿಧನಾಗಿದ್ದಾನೆ ಎಂದು ಹೇಳಿಕೊಂಡು ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ  ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.

 

View this post on Instagram

 

A post shared by Current Affairs (@currentaffairspsc)

ಫ್ಯಾಕ್ಟ್‌ಚೆಕ್ : 

ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, 2017 ರಲ್ಲಿ Yemek.com ನಲ್ಲಿ ಪ್ರಕಟವಾದ ಲೇಖನವೊಂದು ಲಭ್ಯವಾಗಿದ್ದು, ಈ ಲೇಖನದ ಪ್ರಕಾರ ಮೆಹ್ಮೆಟ್ ಟೋಕ್ ಎಂಬ ಈ ವ್ಯಕ್ತಿಯು ಟರ್ಕಿ ದೇಶದವನಾಗಿದ್ದಾನೆ ಎಂದು ತಿಳಿದು ಬಂದಿದೆ. ಒಂದು ದಿನ, ಮೆಹ್ಮೆಟ್ ಟೋಕ್ ಗೆ ಎದೆ ಮತ್ತು ತೋಳಿನಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ವೈದ್ಯರ ಬಳಿ ಹೋಗಿದ್ದಾರೆ, ವೈದ್ಯರು ಆರೋಗ್ಯ ತಪಾಸಣೆ ಮಾಡಿದ  ಆಂಜಿಯೋಗ್ರಾಮ್ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ನಂತರ ವೈದ್ಯರ ಸಲಹೆಯಂತೆ ಸಿಗರೇಟ್‌ ಸೇದುವುದನ್ನು ನಿಲ್ಲಿಸಿದ್ದಾರೆ. ಒಂದು ದಿನದಲ್ಲಿ ಎರಡು ಪ್ಯಾಕ್ ಸಿಗರೇಟ್‌ ಸೇದುತ್ತಿದ್ದ ಈತ ಅಂದಿನಿಂದ, ಸಿಗರೇಟ್‌ಗಳಿಗೆ ಖರ್ಚು ಮಾಡುವ ಹಣವನ್ನು ಉಳಿಸಲು ಪ್ರಾರಂಭಿಸಿದ್ದಾನೆ, ಕೇಲವ 6 ವರ್ಷದಲ್ಲಿ ಅವರು ಉಳಿಸಿದ ಹಣದಲ್ಲಿ 2 ಲಘು ವಾಣಿಜ್ಯ ವಾಹನಗಳು ಮತ್ತು 1 ಮೋಟಾರ್ ಸೈಕಲ್ ಖರೀದಿಸಿದ್ದರು ಎಂದು ವರದಿಯಾಗಿದೆ.

2016 ರ ವೀಡಿಯೊದಲ್ಲಿ, ಮೆಹ್ಮೆತ್ ಟೋಕ್ ತನ್ನ ಪಿಗ್ಗಿ ಬ್ಯಾಂಕ್ ಅನ್ನು ತೆರೆಯುತ್ತಿರುವುದನ್ನು ಕಾಣಬಹುದು. ಪೋಸ್ಟ್‌ನಲ್ಲಿರುವ ಚಿತ್ರವು ಈ ವೀಡಿಯೊದಲ್ಲಿಯೂ ಇದೆ.
2016 ರ ವೀಡಿಯೊದಲ್ಲಿ, ಮೆಹ್ಮೆತ್ ಟೋಕ್ ತನ್ನ ಪಿಗ್ಗಿ ಬ್ಯಾಂಕ್ ಅನ್ನು ತೆರೆಯುತ್ತಿರುವುದನ್ನು ಕಾಣಬಹುದು. ಪೋಸ್ಟ್‌ನಲ್ಲಿರುವ ಚಿತ್ರವು ಈ ವೀಡಿಯೊದಲ್ಲಿಯೂ ಇದೆ.

2017 ರಲ್ಲಿ, ಕೆಲವು ಇತರ ಸುದ್ದಿ ವೆಬ್‌ಸೈಟ್‌ಗಳು ಸಹ ಈ ಕಥೆಯನ್ನು ಒಳಗೊಂಡಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಹಳೆಯದಾದರೂ ಮೆಹ್ಮೆತ್ ಟೋಕ್ ಹಣ ಉಳಿಸಿದ ಕಥೆ ನಿಜ. ಅವರು ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೋಸ್ಟ್ ಹೇಳಿಕೊಂಡಿರುವುದರಿಂದ, ಈ ಕುರಿತು ಸುದ್ದಿ ವರದಿಗಳನ್ನು ಪರಿಶೀಲಿಸಿದಾಗ, ಯಾವುದೇ ವಿಶ್ವಾಸಾರ್ಹ ಮಾಹಿತಿ ಕಂಡುಬಂದಿಲ್ಲ. ಟರ್ಕಿಯ ಸುದ್ದಿ ಸಂಸ್ಥೆ ಡೆಮಿರೊರೆನ್ ಅವರ 2020 ರ ಸುದ್ದಿ ವರದಿಯಲ್ಲಿ ಮೆಹ್ಮೆತ್ ಟೋಕ್ ಅವರ ಕಥೆಯನ್ನು ಒಳಗೊಂಡಿದ್ದು, ಅವರು ಕಾರು ಅಪಘಾತದಲ್ಲಿ ತೀರಿಕೊಂಡಿರುವ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ.

ಮೆಹ್ಮೆತ್ ಟೋಕ್ ಅವರ ಫೇಸ್‌ಬುಕ್ ಖಾತೆಯು ಸಕ್ರಿಯವಾಗಿದ್ದು, 18 ಸೆಪ್ಟೆಂಬರ್ 2022 ರಂದು ತಮ್ಮ ಫೇಸ್‌ಬುಕ್ ಮೂಲಕ ಪೋಸ್ಟ್ ಅನ್ನು ಹಂಚಿಕೊಂಡದ್ದಾರೆ. ಮೆಹ್ಮೆತ್ ಟೋಕ್ ಸಿಗರೇಟ್ ಸೇದುವುದನ್ನು ತ್ಯಜಿಸಿದ ನಂತರ ಹಣವನ್ನು ಉಳಿಸಿ, ಅದೇ ಹಣದಲ್ಲಿ ವಾಹನ ಖರೀದಿ ಮಾಡಿರುವುದು ನಿಜವಾಗಿದ್ದರೂ, ಅವರು ಕಾರು ಅಪಘಾತದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂಬುದು ಸುಳ್ಳು ಎಂದು ಈ ವರದಿಗಳಿಂದ ಧೃಡವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಅರ್ಧ ಸತ್ಯದಿಂದ ಕೂಡಿದ್ದು, ಮೆಹ್ಮೆತ್ ಟೋಕ್ ಸಿಗರೇಟ್ ಸೇದುವುದನ್ನು ತ್ಯಜಿಸಿದ ನಂತರ ಹಣವನ್ನು ಉಳಿಸಿ, ಅದೇ ಹಣದಲ್ಲಿ ವಾಹನ ಖರೀದಿ ಮಾಡಿರುವುದು ಸತ್ಯ. ಆದರೆ ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ‘ಪ್ರಾಜೆಕ್ಟ್‌ ಚೀತಾ’ ಕಾರ್ಯಕ್ರಮಕ್ಕಾಗಿ ಮರಗಳನ್ನು ನೆಲಸಮ ಮಾಡಿದ್ದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights