ಫ್ಯಾಕ್ಟ್‌ಚೆಕ್ : ಚೀನಾದ ರೈಲು ಸೇತುವೆಯನ್ನು ಭಾರತದ್ದು ಎಂದು ತಪ್ಪಾಗಿ ಹಂಚಿಕೊಂಡ BJP ವಕ್ತಾರ!
ಭಾರತದ ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಗೆ ನಿರ್ಮಿಸಲಾಗಿರುವ ಸೇತುವೆಯು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಹಳಿ ನಿರ್ಮಾಣ ಹಂತದಲ್ಲಿದೆ. 21, ಮಾರ್ಚ್ 2023 ರಂದು ಸಣ್ಣ ರೈಲನ್ನು ಪರೀಕ್ಷಾರ್ಥವಾಗಿ ಟ್ರ್ಯಾಕ್‌ನಲ್ಲಿ ಓಡಿಸಲಾಗಿದೆ ಎಂದು ಹೇಳಲಾಗಿದೆ.
Congratulations India !!!
Successful small train test run was conducted on 21 March on world's highest railway track under construction on Udhampur-Srinagar-Baramulla rail link on Chenab river in Reasi District(Jammu) of Jammu & Kashmir Union Territory ⬇️#ModiHaiTohMumkinHai pic.twitter.com/MUAPoAw9cr
— RP Singh National Spokesperson BJP (@rpsinghkhalsa) March 25, 2023
ಇದರ ಬೆನ್ನಲ್ಲೆ BJP ನಾಯಕರು, ಕಣಿವೆಯಲ್ಲಿನ ಸೇತುವೆಯ ಮೇಲೆ ರೈಲು ಓಡುತ್ತಿರುವ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ, ಇದು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲು ಹಳಿಯಲ್ಲಿ ಇತ್ತೀಚೆಗೆ ನಡೆಸಿದ ಯಶಸ್ವಿ ಸಣ್ಣ ರೈಲು ಪರೀಕ್ಷಾರ್ಥವಾಗಿ ಓಡಿಸಲಾದ ವಿಡಿಯೋವಾಗಿದೆ. ಬಿಜೆಪಿ ವಕ್ತಾರ ಆರ್‌ಪಿ ಸಿಂಗ್ ಅವರೂ ಇದೇ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ವಾಸ್ತವವೇನು?
BJP ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ವಿಡಿಯೋ ಪೋಸ್ಟ್‌ಅನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೀಡಿಯೊದಲ್ಲಿ ಸೇತುವೆಯ ಸ್ಥಳವನ್ನು ಚೀನಾದ ಬೈಪಾನ್ ನದಿಯ ಶುಬಾಯ್ ಸೇತುವೆ ಎಂದು ಗುರುತಿಸಲಾಗಿದೆ. ವೈರಲ್ ವೀಡಿಯೋವನ್ನು ಜೂನ್ 27, 2022 ರಂದು ಆಂಡನ್ ಅವರ ಫೇಸ್‌ಬುಕ್ ಪುಟದಲ್ಲಿ ‘ಬೀಪಾನ್ ರಿವರ್ ಬ್ರಿಡ್ಜ್, ಗೈಝೌ’ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ.
2017 ರಲ್ಲಿ ‘ಕಾಶ್ಮೀರದ ಚೆನಾಬ್ ನದಿಯಲ್ಲಿ ಭಾರತೀಯ ರೈಲ್ವೆ ನಿರ್ಮಿಸಿದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ’ ಎಂಬ ಶೀರ್ಷಿಕೆಯೊಂದಿಗೆ ಆಜ್ ತಕ್ ಯುಟ್ಯೂಬ್ ಚಾನೆಲ್ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ಈ ಸೇತುವೆಯ ಚಿತ್ರ ಕಂಡುಬರುತ್ತದೆ. ಆದರೆ ಸೇತುವೆಯ ಈ ನಿರ್ದಿಷ್ಟ ಚಿತ್ರವನ್ನು ಚೀನಾದಲ್ಲಿ 275 ಮೀಟರ್ ಎತ್ತರದ ‘ಶುಬಾಯ್ ರೈಲ್ವೆ ಸೇತುವೆ’ ಎಂದು ಉಲ್ಲೇಖಿಸಲಾಗಿದೆ ಮತ್ತು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂದು ಉಲ್ಲೇಖಿಸಲಾಗಿದೆ.
ಭಾರತದ ಚೆನಾಬ್ ಸೇತುವೆಯ ನಿರ್ಮಾಣದ ಕುರಿತು ಡಾ. ಜಿತೇಂದ್ರ ಸಿಂಗ್ ಅವರ ದೃಢೀಕೃತ ಫೇಸ್‌ಬುಕ್ ಖಾತೆಯಿಂದ ಆಗಸ್ಟ್ 2020 ರಲ್ಲಿ ಪೋಸ್ಟ್ ಮಾಡಲಾದ ವೀಡಿಯೊವು ಬೈಪಾನ್ ನದಿಯ ಶುಬಾಯ್ ಸೇತುವೆಯ ಚಿತ್ರವನ್ನು ಸಹ ಹೊಂದಿದೆ, ಈ ಚೀನಾದ ಸೇತುವೆಯು ಪ್ರಸ್ತುತ 275 ಮೀ ಎತ್ತರದಲ್ಲಿದೆ ಎಂದು ಉಲ್ಲೇಖಿಸುತ್ತದೆ. ಇದೇ ವೀಡಿಯೊವನ್ನು ದೂರದರ್ಶನ ನ್ಯಾಷನಲ್ (DD1) ಫೇಸ್‌ಬುಕ್ ಪುಟದಲ್ಲಿ ಜನವರಿ 2020 ರಲ್ಲಿ ಪೋಸ್ಟ್ ಮಾಡಲಾಗಿದೆ
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ BJP ವಕ್ತಾರರು ಹಂಚಿಕೊಂಡಿರುವ ಭಾರತದ ಚೆನಾಬ್ ನದಿಯ ಸೇತುವೆ ಎಂದು ಹೇಳಲಾದ ವೀಡಿಯೊ ಸುಳ್ಳು ಎಂಬುದು ಸ್ಪಷ್ಟವಾಗಿದೆ. ವೀಡಿಯೊ ಹಳೆಯದು ಮತ್ತು ಮೂಲತಃ ಚೀನಾದ ಬೀಪಾನ್ ನದಿಯ ಶುಬಾಯ್ ಸೇತುವೆ ಎಂದು ದೃಢಪಟ್ಟಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಯಡಿಯೂರಪ್ಪ ನೀಡಿದ ಹೂಗುಚ್ಚವನ್ನು ಅಮಿತ್ ಶಾ ನಿರಾಕರಿಸುವ ಮೂಲಕ ಅವಮಾನಿಸಿದರೆ?

