ಬಿಗ್ ಬಾಸ್ ಮನೆಯಿಂದ ನಿಧಿ ಸುಬ್ಬಯ್ಯ ಔಟ್ : ಒಂಟಿಯಾದ್ರಾ ಶುಭಾ..?

ಬಿಗ್ ಬಾಸ್ ಮನೆಯಿಂದ ಈ ಬಾರಿ ನಿಧಿ ಸುಬ್ಬಯ್ಯ ಔಟ್ ಆಗಿದ್ದಾರೆ. ಇದರಿಂದ ಸದಾ ಕಾಲ ಜೊತೆಗಿದ್ದ ಶುಭಾ ಪುಂಜಾ ಒಂಟಿಯಾಗಿದ್ದಾರೆ.

ಹೌದು… ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳೆಲ್ಲರೂ ಜೋಡಿ ಜೋಡಿಯಾಗೇ ಕಾಲಕಳೆಯುವುದುಂಟು. ಮಂಜು ಜೊತೆ ದಿವ್ಯ ಸುರೇಶ್, ಅರವಿಂದ್ ಜೊತೆ ದಿವ್ಯ ಉರುಡುಗ, ರಘು ಮತ್ತು ವೈಷ್ಣವಿ, ಚಕ್ರವರ್ತಿ ಜೊತೆ ಪ್ರಶಾಂತ್, ಶಮಂತ್ ಮತ್ತು ಪ್ರಿಯಾಂಕ ಒಂದೆಡೆಯಾದ್ರೆ ಇನ್ನು ಉಳಿದಂತೆ ಶುಭಾ ಮತ್ತು ನಿಧಿ ಜೋಡಿಯಾಗೇ ಇರುತ್ತಾರೆ. ಇಷ್ಟವಿಲ್ಲದೇ ಇದ್ದರೂ ಜಗಳವಾಡಿದರೂ ಇವರಿಬ್ಬರೂ ಜೊತೆಯಾಗೇ ಇರಬೇಕು ಯಾಕಂದ್ರೆ ಮನೆಯ ಇನ್ನುಳಿದ ಸದಸ್ಯರು ಒಬ್ಬೊಬ್ಬರೂ ಇನ್ನೊಬ್ಬರೊಂದಿಗೆ ಬ್ಯೂಸಿ.

ಕಳೆದ ವಾರ ಶುಭ ಪೂಂಜಾ ಜೊತೆ ಜಗಳವಾಡಿದ್ದ ನಿಧಿ ಶುಭಾಗೆ ಕಳಪೆ ಪಟ್ಟ ಕಟ್ಟಿದ್ದರು. ಜೊತೆಗೆ ಅರವಿಂದ್ ಜೊತೆಗೂ ನಿಧಿ ಜಗಳವಾಡಿದ್ದರು. ಇನ್ನೂ ಮನೆಯ ಸದಸ್ಯರಾದ ಪ್ರಶಾಂತ್ ಹಾಗೂ ಚಕ್ರವರ್ತಿಯೊಂದಿಗೆ ನಿಧಿ ಅಷ್ಟಕಷ್ಟೇ. ಬಿಗ್ ಬಾಸ್ ನೀಡುವ ಆಟಗಳಲ್ಲಿಯೂ ನಿಧಿ ಅಷ್ಟಾಗಿ ವಿನ್ ಆಗಿರುವುದು ಕಂಡು ಬಂದಿಲ್ಲ. ಇದಕ್ಕಾಗಿನೇ ಏನೋ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ನಿಧಿ ಮನೆಯಿಂದ ಔಟ್ ಆಗಿರಬಹುದು.

ಆದರೆ ಮನಸ್ತಾಪಗಳ ಮಧ್ಯೆ ಜೊತೆಯಾಗಿರುತ್ತಿದ್ದ ಶುಭಾ, ನಿಧಿ ಬಿಗ್ ಬಾಸ್ ಮನೆಯಿಂದ ಹೊರಹೋದ ಮೇಲೆ ಯಾರ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

 

 

 

Spread the love

Leave a Reply

Your email address will not be published. Required fields are marked *