ಚಿದಾನಂದ ಸವದಿ ಕಾರು ಅಪಘಾತಕ್ಕೆ ಬಿಗ್ ಟ್ವಿಸ್ಟ್ : ಪ್ರತ್ಯಕ್ಷದರ್ಶಿ ಹೇಳಿದ್ದೇನು..?

ಚಿದಾನಂದ ಸವದಿ ಕಾರು ಅಪಘಾತ ಪ್ರಕರಣ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಡಿಸಿಎಂ ಲಕ್ಷ್ಮಣ್ ಸವದಿ ಅವರ ಪುತ್ರ ಚಿದಾನಂದ್ ಸವದಿ ಕಾರು ಅಪಘಾತದಲ್ಲಿ ಓರ್ವ ಬೈಕ್ ಸವಾರ ಮೃತಪಟ್ಟಿದ್ದಾನೆ. ಆದರೆ ಚಿದಾನಂದ ಸವದಿ ಮಾತ್ರ ತಮ್ಮ ಕಾರಿನಲ್ಲಿ ತಾವು ಇರಲಿಲ್ಲ ಮುಂದಿನ ತಮ್ಮ ಗೆಳೆಯರ ಕಾರಿನಲ್ಲಿ ಇದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಪ್ರತ್ಯಕ್ಷದರ್ಶಿಯೊಬ್ಬರು ಚಿದಾನಂದ ಸವದಿಯವರೇ ಕಾರು ಚಲಾಯಿಸುತ್ತಿದ್ದರು ಎಂದು ಹೇಳಿದ್ದಾರೆ.

ಹೌದು… ಕೊಡಲೆಪ್ಪ ಅಪಘಾತಕ್ಕೀಡಾದ ಮೃತ ದುರ್ದೈವಿ. ನಿನ್ನೆ ದೇವಲಾಪುರ ಕ್ರಾಸ್ ಬಳಿ ಸಂಜೆ 6-7 ಗಂಟೆಗೆ ಈ ಘಟನೆ ನಡೆದಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ‘ಚಿದಾನಂದ ಸವದಿ ಇದ್ದಂತ ಕಾರು ಅಪಘಾತ ಆಗಿಲ್ಲ. ಮಂತ್ರಿ ಮಗ ಅಂದ ಕೂಡಲೇ ಇಂತಹ ಊಹಾಪೋಹಗಳು ಸಹಜ. ಚಿದಾನಂದ ಹಲವಾರು ದಿನಗಳಿಂದ ಕಿಟ್ ವಿತರಣೆ ಮಾಡುತ್ತಿದ್ದಾನೆ. ಕೊಪ್ಪಳದ ಆಂಜನೇಯ ದೇವಸ್ಥಾನಕ್ಕೆ ಚಿದಾನಂದ ತೆಳೆದಿದ್ದರು. ವಾಪಾಸ್ ಆಗುವಾಗ ಚಿದಾನಂದ್ ಮುಂದಿನ ಕಾರಿನಲ್ಲಿದ್ದನು. ಹಿಂದಿರುವ ಆತನ ಕಾರು ಅಪಘಾತವಾಗಿದೆ. ಅಪಘಾತದ ಬಳಿಕ ವಾಪಸ್ ಹೋಗಿ ಚಿದಾನಂದನೇ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಿದ್ದಾನೆ. ಚಿದಾನಂದ್ ಇದ್ದರೆ ಆತನೇ ಇದ್ದ ಅಂತ ಹೇಳುವುದರಲ್ಲಿ ಏನಿದೆ’ ಎಂದು ಹೇಳಿದ್ದಾರೆ.

ಜೊತೆಗೆ ಚಿದಾನಂದ್ ಸವದಿ ಮಾತನಾಡಿ, “ ನಾನು ಅಪಘಾತವಾದ ಕಾರಿನಲ್ಲಿ ಇರಲಿಲ್ಲ. ನಾನು ತೆರಳುತ್ತಿದ್ದ ಕಾರು 30 ಕಿ.ಮೀ ದೂರವಿತ್ತು. ನನ್ನ ಕಾರನ್ನು ಚಾಲಕ ಚಲಾಯಿಸುತ್ತಿದ್ದ. ನನ್ನೊಂದಿಗೆ ಮೂವರು ಸ್ನೇಹಿತರಿದ್ದರು. ಅಪಘಾತವಾದಾಗ ಸ್ಥಳದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ನನಗೆ ನನ್ನ ಕಾರು ಚಲಾಯಿಸುತ್ತಿದ್ದ ಚಾಲಕ ಹನುಮಂತ ಕರೆ ಮಾಡಿದ. ವಾಪಸ್ ಹೋಗಿ ನಾನೇ ಸ್ವತ: ಆಸ್ಪತ್ರೆಗೆ ಸಾಗಿಸಿದ್ದೇನೆ. ಆಂಬುಲೆನ್ಸ್ ನಲ್ಲಿ ಸಾಗಿಸುವಾಗ ಜನ ಸ್ಥಳಕ್ಕೆ ಆಗಮಿಸಿದ್ದಾರೆ” ಎಂದಿದ್ದಾರೆ.

ಆದರೆ ಚಿದಾನಂದ ಸವದಿ ಚಾಲಕನ ಸೀಟ್ ನಲ್ಲಿ ಕುಳಿತಿರುವುದನ್ನ ನಾನು ನೋಡಿದ್ದೇನೆ ಎಂದು ಪ್ರತ್ಯಾಕ್ಷದರ್ಶಿ ಹನುಮಂತರೆಡ್ಡಿ ಹೇಳಿದ್ದಾರೆ. ನಂಬರ್ ಪ್ಲೇಟ್ ಮುರಿದು ಕಾರಿನೊಳಗೆ ಹಾಕಿದರು. ನಾನು ಲಕ್ಷ್ಮಣ್ ಸವದಿ ಮಗ ಎಂದು ಅವಾಜ್ ಹಾಕಿದರು. ನಾವೇ ಅಂಬ್ಯುಲೆನ್ಸ್ ಕಳುಹಿಸಿದ್ದೇವೆ. ಪೊಲೀಸ್ ಠಾಣೆಗೆ ಕರೆ ಮಾಡಿದ್ದೇವೆ ಎಂದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights