IPL ಪಂದ್ಯಗಳಿಂದ T-20 ವರ್ಲ್ಡ್‌ ಕಪ್‌ಗೆ ತೊಂದರೆಯಾಗುತ್ತೆ; ಬೌಚರ್

ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತುಹೋಗಿದ್ದ ಐಪಿಎಲ್‌-2021 ಪಂದ್ಯಾವಳಿಗಳು ಸೆಪ್ಟೆಂಬರ್‌ ತಿಂಗಳಿನಲ್ಲಿ ಅರಬ್ ಸಂಯುಕ್ತ ರಾಷ್ಟ್ರ (UAE)ಯಲ್ಲಿ ಮುಂದುವರೆಯಲಿವೆ. ಅದೇ ಯುಎಯಿಯಲ್ಲಿಯೇ ಆಕ್ಟೋಬರ್‌ನಲ್ಲಿ ಟಿ-20 ವರ್ಲ್ಡ್ ಕಪ್‌ ನಡೆಯಲಿದ್ದು, ಯುಎಇಯ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಐಪಿಪಿ ನಡೆಯುವುದು ವರ್ಲ್ಡ್‌ ಕಪ್‌ಗೆ ತೊಂದರೆಯಾಗಲಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ತರಬೇತುದಾರ ಮಾರ್ಕ್‌ ಬೌಚರ್ ಅಭಿಪ್ರಾಯಪಟ್ಟಿದ್ದಾರೆ.

ಯುಎಇಯ ಸ್ಟೇಡಿಯಂಗಳಲ್ಲಿ ಐಪಿಎಲ್ ಪಂದ್ಯ ನಡೆಸಿದರೆ ಅಲ್ಲಿನ ಪಿಚ್‍ಗಳು ಹಾಳಾಗಿ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಪಿನ್ನರ್‌ಗಳಿಗೆ ಲಾಭವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

2021ರ ಸೆ.19ರಿಂದ ಅಕ್ಟೋಬರ್ 15ರವರೆಗೆ ಐಪಿಎಲ್ ಪಂದ್ಯಗಳು ನಡೆಯಲಿವೆ. ನಂತರ, ಅಕ್ಟೋಬರ್ 17 ರಿಂದ ಟಿ20 ವಿಶ್ವಕಪ್ ಪಂದ್ಯಾವಳಿಗಳು ಆರಂಭವಾಗಲಿದೆ.

ಐಪಿಲ್ ಪಂದ್ಯಗಳ ನಂತರ ಪಿಚ್ ಹಾಳಾಗುವುದರಿಂದ ವಿಶ್ವಕಪ್ ಪಂದ್ಯಗಳಲ್ಲಿ ಸ್ಪಿನ್ನರ್‍ಗಳಿಗೆ ಲಾಭವಾಗುವುದರಿಂದ ಅತ್ಯಕ ರನ್ ಪೇರಿಸಲು ಯಾವುದೆ ತಂಡಗಳಿಗೆ ಸಾಧ್ಯವಾಗುವುದಿಲ್ಲ ಎಂದು ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಮಹಿಳಾ ಕ್ರಿಕೆಟ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಮಿಥಾಲಿ ರಾಜ್..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights