ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಟಿಎಂಸಿಗೆ ಸೇರ್ಪಡೆ!

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಅವರು ಕಾಂಗ್ರೆಸ್‌ ಪಕ್ಷವನ್ನು ತೊರೆದು ಪಶ್ಚಿಮ ಬಂಗಾಳದಲ್ಲಿ ಸೋಮವಾರ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

“ನಾನು ಇಂದು ಟಿಎಂಸಿ ಸದಸ್ಯನಾಗಿ ಆ ಪಕ್ಷವನ್ನು ಸೇರುತ್ತಿರುವೆ. ನಾನು ಕಾಂಗ್ರೆಸ್ ನಿಂದ ಬಂದು, ತೃಣಮೂಲ ಕಾಂಗ್ರೆಸ್ ಗೆ ಸೇರುತ್ತಿರುವೆ. ಕಾಂಗ್ರೆಸ್ ನನಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಹೀಗಾಗಿ ನಾನು ಟಿಎಂಸಿಗೆ ಸೇರಿದ್ದೇನೆ. ನಾನು ಸೈನಿಕನಂತೆ ಕೆಲಸ ಮಾಡುತ್ತೇನೆ. ಕೊಟ್ಟ ಜವಾಬ್ದಾರಿಯನ್ನು ಕ್ರಮಬದ್ಧವಾಗಿ ನಿರ್ವಹಿಸುವೆ” ಎಂದು ಅಭಿಜಿತ್ ಹೇಳಿದ್ದಾರೆ.

“ಮಮತಾ ಬ್ಯಾನರ್ಜಿ ಬಿಜೆಪಿಯ ಇತ್ತೀಚಿನ ಕೋಮು ಅಲೆಯನ್ನು ತಡೆದ ರೀತಿಯಿಂದ ಭವಿಷ್ಯದಲ್ಲಿ ಇತರರ ಬೆಂಬಲದೊಂದಿಗೆ ಅವರು ಇಡೀ ದೇಶದಲ್ಲಿಯೂ ಸಹ ಅದೇ ರೀತಿ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ” ಎಂದು ತೃಣಮೂಲಕ್ಕೆ ಸೇರ್ಪಡೆಗೊಂಡ ನಂತರ ತಮ್ಮ ಮೊದಲ ಹೇಳಿಕೆಯಲ್ಲಿ ಅಭಿಜಿತ್ ಮುಖರ್ಜಿ ಅಭಿಪ್ರಾಯಪಟ್ಟರು.
ಜಂಗೀಪುರದ ಮಾಜಿ ಕಾಂಗ್ರೆಸ್ ಸಂಸದ ಮುಖರ್ಜಿ ಅವರಿಗೆ ಜಂಗೀಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ನೀಡಬಹುದು. ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಈ ಕ್ಷೇತ್ರದ ಅಭ್ಯರ್ಥಿ ನಿಧನರಾದ ಕಾರಣ ಉಪಚುನಾವಣೆ ನಡೆಯಲಿಕ್ಕಿದೆ.

ಅಭಿಜಿತ್ ಮುಖರ್ಜಿ ಅವರ ತಂದೆ ಪ್ರಣಬ್ ಮುಖರ್ಜಿ ಅವರು ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಂಗೀಪುರ ಸಂಸದೀಯ ಕ್ಷೇತ್ರವನ್ನು ಕಾಂಗ್ರೆಸ್ ಸಂಸದರಾಗಿ ಎರಡು ಬಾರಿ ಪ್ರತಿನಿಧಿಸಿದ್ದರು.

ಇದನ್ನೂ ಓದಿ: ಸಂತರನ್ನು ಕೊಂದು – ಸೈತಾನರನ್ನು ಆಯ್ಕೆ ಮಾಡುತ್ತಿರುವ ದೇಶದಲ್ಲಿ ಹೇಳುವುದು ಸಾಕಷ್ಟಿದೆ: ಶಿವಸುಂದರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights