ಫ್ಯಾಕ್ಟ್‌ಚೆಕ್: ವಸತಿ ಯೋಜನೆಗಾಗಿ ಅಮಿತ್ ಶಾ ಹಂಚಿಕೊಂಡ ಫೋಟೋ ಯಾವುದು ಗೊತ್ತೆ? ಈ ಸ್ಟೋರಿ ಓದಿ

ಆರ್ಥಿಕವಾಗಿ ದುರ್ಬಲವಿರುವ (ಇಡಬ್ಲ್ಯುಎಸ್) ಕೊಳೆಗೇರಿಗಳಲ್ಲಿ ವಾಸಿಸುವ ಜನರಿಗೆ ಪುನರ್ವಸತಿ ಕಲ್ಪಿಸಲು ದೆಹಲಿಯಲ್ಲಿ  ಹೊಸದಾಗಿ ನಿರ್ಮಿಸಲಾದ 3024 ಮನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಹಲವಾರು ಪ್ರಮುಖ ಬಿಜೆಪಿ ನಾಯಕರು ಟ್ವಿಟರ್‌ನಲ್ಲಿ ಪ್ರಕಟಣೆಯನ್ನು ಪೋಸ್ಟ್ ಮಾಡಿದ್ದು, ಕಾರ್ಯಕ್ರಮದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ಕೊಳೆಗೇರಿ ಪುನರ್ವಸತಿ ಕಾರ್ಯಕ್ರಮದ ಭಾಗವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೊಗಳು ಈಗ ಚರ್ಚೆಗೆ ಗ್ರಾಸವಾಗಿದೆ. ಈಗ ಸ್ಲಮ್ ಗುಡಿಸಲಿ ಬದಲಿಗೆ ಕಾಂಕ್ರೀಟ್ ಮನೆ, ಕೇಂದ್ರ ಸರ್ಕಾರದಿಂದ ದೆಹಲಿಯ ಜನರಿಗೆ ಒಂದು ದೊಡ್ಡ ಕೊಡುಗೆ. ಹೊಸದಾಗಿ ನಿರ್ಮಿಸಲಾದ 3024 ಇಡಬ್ಲ್ಯೂಎಸ್ ಮನೆಗಳನ್ನು ಉದ್ಘಾಟಿಸಲಾಗುವುದು ಮತ್ತು ಫಲಾನುಭವಿಗಳಿಗೆ ಕೀಗಳನ್ನು ಹಸ್ತಾಂತರಿಸಲಾಗುವುದು. ಎಂದು ಹೇಳಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ  ಟ್ವೀಟ್ ಮಾಡಿದ್ದು ‘ಮೋದಿ ಸರ್ಕಾರವು ಕೇವಲ ಭರವಸೆಗಳನ್ನು ನೀಡುವುದಿಲ್ಲ. ಅದನ್ನು ಈಡೇರಿಸುತ್ತದೆ. ದೆಹಲಿಯ ಕೊಳೆಗೇರಿ ನಿವಾಸಿಗಳಿಗೆ ಸಂತೋಷದ ಕೀಲಿಕೈಗಳನ್ನು ಪ್ರಧಾನಿ ನರೇಂದ್ರ ಮೋದಿ ಹಸ್ತಾಂತರಿಸಲಿದ್ದಾರೆ. ದೆಹಲಿಯಲ್ಲಿ 3024 EWS ಫ್ಲಾಟ್‌ಗಳನ್ನು ಮೋದಿಜಿ ಹಸ್ತಾಂತರಿಸಲಿದ್ದಾರೆ. ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ ದೆಹಲಿ ರಾಜ್ಯದ ಅಧಿಕೃತ ಖಾತೆಯು ಟ್ವೀಟ್‌ನಲ್ಲಿ ಅದೇ ಪೋಸ್ಟರ್ ಅನ್ನು ಹಂಚಿಕೊಂಡಿದೆ, ಇದು ಸರಿಸುಮಾರು ಇಂಗ್ಲಿಷ್‌ಗೆ ಅನುವಾದಿಸುತ್ತದೆ ‘ದೆಹಲಿಯಲ್ಲಿ ಸಾವಿರಾರು ಭೂರಹಿತ ಕೊಳೆಗೇರಿ ನಿವಾಸಿಗಳು ಕಾಂಕ್ರೀಟ್ ಮನೆಯ ಉಡುಗೊರೆಯನ್ನು ಸ್ವೀಕರಿಸುತ್ತಾರೆ. ಇಂದು, ಪ್ರಧಾನಿ ನರೇಂದ್ರ ಮೋದಿ ಅವರು 3024 ಇಡಬ್ಲ್ಯೂಎಸ್ ಮನೆಗಳ ಕೀಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುತ್ತಿದ್ದಂತೆ, ಅವರ ಕನಸು ನನಸಾಗಲಿದೆ.


ಸಂಸದ  Hardwar Dubey,, ಬಿಜೆಪಿ ರಾಜಸ್ಥಾನದ ರಾಜ್ಯ ಉಪಾಧ್ಯಕ್ಷ Chandrakanta Meghwal,, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಡಾ Dr Ramesh Pokhriyal Nishank ತಮ್ಮ ಟ್ವೀಟ್‌ಗಳಲ್ಲಿ ಅಮಿತ್ ಶಾ ಅವರ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್ ಹೊಂದಿರುವ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳು ಇಲ್ಲಿವೆ.

ವಸತಿ ಸಮುಚ್ಚಯಗಳನ್ನು ಕೊಳಗೇರಿ ನಿವಾಸಿಗಳಿಗೆ ಹಸ್ತಾಂತರಿಸಲು ಸಿದ್ದತೆ ನಡೆಸಿರುವ ಹಿನ್ನಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಟೋಗಳನ್ನು ಹಂಚಿಕೊಳ್ಳಲಾಗಿದ್ದು ಸಮುಚ್ಚಯಗಳ ಚಿತ್ರದೊಂದಿಗೆ ಹಂಚಿಕೊಳ್ಳಲಾದ ಫೋಟೋಗಳ ಬಗ್ಗೆ ಚರ್ಚೆಯಾಗುತ್ತಿದ್ದು ಫೋಟೋದಲ್ಲಿ ಕಾಣಿಸಿಕೊಂಡಿರುವ ಜನರು ಕೊಳಚೆ ನಿವಾಸಿಗಳದ್ದೆ ಅಥವಾ ಬೇರೆಯವರೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫೋಟೊ ಫ್ಯಾಕ್ಟ್‌ಚೆಕ್:.

ಪೋಸ್ಟರ್‌ನಲ್ಲಿ ಬಳಸಲಾದ ಚಿತ್ರವು ದೆಹಲಿಯ ಕೊಳೆಗೇರಿ ನಿವಾಸಿಗಳದ್ದಲ್ಲ, ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ವೈರಲ್ ಫೋಟೋದಲ್ಲಿರುವ ಜನರನ್ನು ಸರೂ ಬ್ರಿಯರ್ಲಿ ಮತ್ತು ಅವರ ಕುಟುಂಬದವರು ಎಂದು ತಿಳಿದು ಬಂದಿದೆ. ಸರೂ ಬ್ರಿಯರ್ಲಿ ಮಧ್ಯಪ್ರದೇಶದ ಖಾಂಡ್ವಾದಲ್ಲಿ ಜನಿಸಿ, ತಮ್ಮ 5ನೇ ವಯಸ್ಸಿನಲ್ಲಿ ತಮ್ಮ ಕುಟುಂಬವರಿಂದ ದೂರವಾಗಿ ಸುಮಾರು 25 ವರ್ಷದ ಬಳಿಕ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದರು.  25 ವರ್ಷಗಳನ್ನು ಹೋಬಾರ್ಟ್‌ನಲ್ಲಿ ನೆಲೆಸಿದ್ದರ ಅವರು,  ಗೂಗಲ್ ನಕ್ಷೆಗಳನ್ನು ಬಳಸಿಕೊಂಡು ಅವರ ಜನ್ಮಸ್ಥಳವನ್ನು ಪತ್ತೆಹಚ್ಚಿ ಭಾರತಕ್ಕೆ ಹಿಂದಿರುಗಿದ್ದರು. 2012 ರಲ್ಲಿ ಅವರ ಕುಟುಂಬವನ್ನು ಮತ್ತೆ ಸೇರಿಕೊಂಡರು.

ಪೋಸ್ಟರ್‌ನಲ್ಲಿ ಕಂಡುಬರುವ ಕುಟುಂಬದ ಚಿತ್ರವನ್ನು ಹೊತ್ತಿರುವ ಲೈವ್‌ಮಿಂಟ್‌ನ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಫೋಟೋವನ್ನು ‘ಪೆಂಗ್ವಿನ್ ಬುಕ್ಸ್ ಇಂಡಿಯಾ’ದಲ್ಲಿ ಪ್ರಕಟಗೊಂಡಿದೆ. ದೇವ್ ಪಟೇಲ್ ನಟಿಸಿದ ಆಸ್ಟ್ರೇಲಿಯನ್ ಚಲನಚಿತ್ರ ‘ಲಯನ್’ ನಂತರ ಬ್ರೈರ್ಲಿ ಅವರ ಕಥೆಯು ಪ್ರಪಂಚದಾದ್ಯಂತ ಪ್ರಸಿದ್ಧವಾಯಿತು. ‘ಎ ಲಾಂಗ್ ವೇ ಹೋಮ್’ ಎಂಬ ಆತ್ಮಚರಿತ್ರೆಯ ಖಾತೆಯನ್ನು ಒಳಗೊಂಡಂತೆ ಬ್ರೈರ್ಲಿ ಕುರಿತು ಹಲವಾರು ಕಥೆಗಳನ್ನು ವರ್ಷಗಳಲ್ಲಿ ಬರೆಯಲಾಗಿದೆ [12345  ].

 

ವೈರಲ್ ಫೋಟೊದ ಹಿನ್ನಲೆ

1989ರಲ್ಲಿ, ಮಧ್ಯಪ್ರದೇಶದ ಖಾಂಡ್ವಾದಲ್ಲಿ, ರೈಲಿನಲ್ಲಿ ಭಿಕ್ಷೆ ಬೇಡುತ್ತಾ ಬದುಕುತ್ತಿದ್ದ 6 ವರ್ಷದ ಸರೂ ಎಂಬ ಬಾಲಕನೊಬ್ಬ, ತೀರಾ ಆಕಸ್ಮಿಕವಾಗಿ ಕೋಲ್ಕತ್ತಾ ತಲುಪಿದ್ದಾನೆ. ಒಂದು ವರ್ಷದ ನಂತರ ವಿದೇಶಿ ದಂಪತಿಗಳ ದಯೆಯಿಂದ ಆಸ್ಟ್ರೇಲಿಯಾಕ್ಕೆ ಹಾರಿದ್ದಾನೆ. ಅಲ್ಲಿ ಈ ಹುಡುಗನ ಹೆಸರು, ಬದುಕು, ಭವಿಷ್ಯ ಮತ್ತು ರಾಷ್ಟ್ರೀಯತೆ ಬದಲಾಗಿ ಹೋಗಿದೆ. ಇಷ್ಟೆಲ್ಲಾ ಬದಲಾವಣೆಗಳ ಮಧ್ಯೆ 23 ವರ್ಷಗಳು ಕಳೆದು ಹೋಗಿವೆ. ಬುದ್ಧಿ ತಿಳಿದಾಗಿನಿಂದಲೂ ತಾಯ್ನೆಲ ಹಾಗೂ ಹೆತ್ತಮ್ಮನ ಕನವರಿಕೆಯಲ್ಲೇ ಇದ್ದ ಸರೂಗೆ, ಹಳೆಯ ಬದುಕು ಒಂದು ಅಸ್ಪಷ್ಟ ಚಿತ್ರವಾಗಿ ಮಾತ್ರ ನೆನಪಿನಲ್ಲಿದ್ದ ದಿನಗಳವು.

ಇಂಥ ಸಂದರ್ಭದಲ್ಲಿಯೇ ಗೂಗಲ್ ಅಂತರ್ಜಾಲ ತಾಣದ ನೆರವಿನಿಂದ ಆಸ್ಟ್ರೇಲಿಯಾದಲ್ಲಿ ಕೂತೇ ತನ್ನ ಹುಟ್ಟೂರು ಮತ್ತು ಮನೆಯನ್ನು ಕಂಡು ಹಿಡಿದಿದ್ದಾನೆ. ಸಣ್ಣ ಅನುಮಾನವನ್ನು ಅಂಗೈಲಿ ಹಿಡಿದುಕೊಂಡೇ ಆಸ್ಟ್ರೇಲಿಯಾದಿಂದ ಮಧ್ಯಪ್ರದೇಶಕ್ಕೆ ಹಾರಿಬಂದಿದ್ದಾನೆ. ಗೂಗಲ್ ಮ್ಯಾಪ್‌ನಲ್ಲಿ ಕಾಣಿಸಿದ ನಕ್ಷೆಯನ್ನು ಕೈಲಿ ಹಿಡಿದುಕೊಂಡೇ ಹೆಜ್ಜೆ ಹಾಕಿದ್ದಾನೆ. ಕಡೆಗೆ, ಒಂದು ಗುಡಿಸಲಿನ ಮುಂದೆ ನಿಂತು ಅಮ್ಮಾ ಎಂದಿದ್ದಾನೆ ನಂತರ ನಡೆದಿದೆಲ್ಲವೂ ಪವಾಡದಂತೆ ಕಾಣಸಿದೆ. ಸರೂ ಅವರ ತಾಯಿ ಕಮಲಾ ಅವರಮಡಿಲು ಸೇರಿದ್ದಾನೆ. ಇದು ನಡೆದಿದ್ದಿ 2012ರಲ್ಲಿ, ಸರೂ ತನ್ನ ಕುಟುಂಬದೊಂದಿಗೆ ಸೇರಿಕೊಂಡ ಚಿತ್ರವನ್ನು ಬಳಸಿ ಕೊಳಗೇರಿ ನಿವಾಸಿಗಳು ಎಂದು ಫೋಟೊವನ್ನು ಹಂಚಿಕೊಳ್ಳಲಾಗಿದೆ.

ಚಿತ್ರವನ್ನು ಅದೇ ಹೆಸರಿನ ವಿಡಂಬನೆ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ.

ಟ್ವಿಟರ್ ಬಳಕೆದಾರ ಪ್ರದೀಪ್ ಪಾಂಡೆ, ಪತ್ರಕರ್ತ, ಸರೂ ಮತ್ತು ಅವರ ಕುಟುಂಬದ ಚಿತ್ರವನ್ನು ಪೋಸ್ಟರ್‌ನಲ್ಲಿ ಅನುಚಿತವಾಗಿ ಬಳಸಲಾಗಿದೆ ಎಂದು ಗಮನಸೆಳೆದಿದ್ದಾರೆ.

Image

ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿ ಕೊಳೆಗೇರಿ ನಿವಾಸಿಗಳಿಗೆ ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು ಹಸ್ತಾಂತರಿಸಲಾಗುತ್ತಿರುವ ಕಾರ್ಯಕ್ರಮಕ್ಕೆ ಡಿಸೈನ್ ಮಾಡಲಾದ ಪೋಸ್ಟ್‌ಗಳಲ್ಲಿ ಬಳಕೆ ಮಾಡಲಾಗಿರುವ ಪೋಟೊ ಪೋಸ್ಟರ್ ಸರೂ ಬ್ರೈರ್ಲಿ ಅವರ ಕುಟುಂಬದ್ದು. ಇವರಾರೂ ಕೂಡ ಈ ಯೋಜನೆಯ ಫಲಾನುಭವಿಗಳಲ್ಲ ಮತ್ತು ಈ ರೀತಿ ಸಬಂಧವಿಲ್ಲದ ಫೋಟೊವನ್ನು ಗೂಗಲ್‌ನಿಂದ ಕದ್ದು ಪೋಸ್ಟ್‌ರ್ ಮಾಡುವ ಅವಶ್ಯಕತೆ ಕೇಂದ್ರಸರ್ಕಾರಕ್ಕೆ ಇತ್ತೆ? ನಿಜವಾದ ಫಲಾನುಭವಿಗಳ ಫೋಟೊವನ್ನೆ ಹಾಕಬಹುದಿತ್ತಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನೆಮಾಡಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರವೇ ಉತ್ತರ ನೀಡುತ್ತದೆಯೇ ಕಾದು ನೋಡಬೇಕಿದೆ.

ಕೃಪೆ: ಆಲ್ಟ್‌ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆಯ ಮೇಲಿನ ನಿರ್ಬಂಧ ತೆಗೆಯಲಾಗಿದೆಯೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights