ಫ್ಯಾಕ್ಟ್‌ಚೆಕ್: ‘ಜೊತೆಯಲ್ಲಿ ನಡೆ’ ಎಂಬ ಹೊಸ ಸೇವೆಯನ್ನು Uber ಪ್ರಾರಂಭಿಸಿದೆಯೇ?
ಕೆಲ ವರ್ಷಗಳ ಹಿಂದೆ ಆಟೋದಲ್ಲಿ ಬಸ್ ನಿಲ್ದಾಣಕ್ಕೊ, ಮಾರ್ಕೆಟ್‌ಗೊ ಹೋಗಬೇಕೆಂದು ಬಯಸಿದರೆ ಮನೆಯಿಂದ ಹೊರ ಬಂದು ರಸ್ತೆಯಲ್ಲಿ ಯಾವುದಾದರೂ ಆಟೋ ರಿಕ್ಷಾ ಬರುತ್ತಿದ್ದೆಯೇ ಎಂದು ರಸ್ತೆಯ ಎರಡೂ ಬದಿಯಲ್ಲಿ ನೋಡುತ್ತಾ ನಿಲ್ಲಬೇಕಾಗಿತ್ತು, ಅದೃಷ್ಟಕ್ಕೆ ಖಾಲಿ ಆಟೋ ಬಂದರೆ ಪುಣ್ಯ ಎಂದುಕೊಂಡು ಆಟೋ ಹತ್ತಿ ಹೋಗುವ ಇಲ್ಲದಿದ್ದರೆ ಮನೆಯಿಂದ ಅರ್ಧ, ಮುಕ್ಕಾಲು ಕಿ.ಮಿ ದೂರ ಇರುವ ಆಟೋ ನಿಲ್ದಾಣಕ್ಕೆ ಹೋಗಿ ಸೇವೆ ಪಡೆಯಬೇಕಾಗಿತ್ತು.
ಆದರೆ ಇಂದು ತಂತ್ರಜ್ಞಾನ ಬೆಳೆದಂತೆಲ್ಲ ಅಂಗೈಯಲ್ಲೆ ಎಲ್ಲಾ ಸೇವೆಗಳು ದೊರೆಯುತ್ತಿವೆ. ಹಾಗೆಯೇ ಅದಕ್ಕೆ ತಕ್ಕಂತೆ ಸೇವೆಗೆ ಕೊಡುವ ದರಗಳಲ್ಲಿಯೂ ತುಸು ಹೆಚ್ಚಿನದ್ದನ್ನು ಜೇಬಿನಿಂದ ಖರ್ಚು ಮಾಡಬೇಕಾಗುತ್ತದೆ. ಸೇವೆಗಳಂತೂ ಮನೆಯ ಬಾಗಿಲಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ Uber ತಮ್ಮ ಸೇವೆಗಳಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ ಎಂಬ ಹೇಳಿಕೆಯಿರುವ ಪೋಸ್ಟ್‌ವೊಂದು ವೈರಲ್ ಆಗಿದೆ.
Uber CEO: How do we turn a profit?
Intern: Imagine Uber but no car… pic.twitter.com/ysoMbxBsLR
— John Pompliano (@JohnPompliano) October 19, 2022
ವೈರಲ್ ಪೋಸ್ಟ್‌ನಲ್ಲಿ ಊಬರ್ ರೈಡಿಂಗ್ ಆಯ್ಕೆಗಳ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ‘ವಾಕಿಂಗ್ ಗೆಳೆಯ’ ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದೆ. ಇದನ್ನು ಕೆಲವರು ವ್ಯಂಗ್ಯ ಮಾಡಿ ಕಮೆಂಟ್‌ಗಳನ್ನು ಮಾಡಿದರೆ ಇನ್ನು ಕೆಲವರು ಗಂಭೀರವಾಗಿ ತೆಗೆದುಕೊಂಡಂತೆ ತೋರುತ್ತಿದೆ. ” ರಾತ್ರಿ ವೇಳೆ ಮನೆಗೆ ಒಂಟಿಯಾಗಿ ಹೋಗಲು ಸುರಕ್ಷಿತವಲ್ಲ ಎಂದು ಭಾವಿಸುವ ಹುಡುಗಿಯರು ಈ ಸೇವೆಯನ್ನು ಬಳಸಬಹುದು, ಇದರಿಂದ ಊಬರ್‌ಗೆ ಹೆಚ್ಚಿನ ಲಾಭವಾಗಲಿದೆ.” ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ.
ಹಾಗಿದ್ದರೆ ಉಬರ್ ಇಂತಹ ಸೇವೆಯನ್ನು ನೀಡಲು ಮುಂದಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೊಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ರಾಯಿಟರ್ಸ್‌ನಲ್ಲಿ ಉಬರ್‌ನಿಂದ ಮಾಡಿದ ಅಧಿಕೃತ ಟ್ವೀಟ್ ಲಭ್ಯವಾಗಿದೆ. ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ” ಸ್ಕ್ರೀನ್‌ಶಾಟ್ ನಿಜವಲ್ಲ ಎಂದು ಉಬರ್ ವಕ್ತಾರರು ದೃಢಪಡಿಸಿದ್ದಾರೆ ಮತ್ತು ಉಬರ್ ತಮ್ಮ ಸೇವೆಗಳಿಗೆ ವಾಕಿಂಗ್ ಸ್ನೇಹಿತ ಎಂಬ ಹೊಸದನ್ನು ಸೇರಿಸಿಲ್ಲ” ಎಂದು ಉಬರ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Uber is not offering a “walking buddy" option to its customers, contrary to claims online. An alleged screenshot showing this feature is fake, a spokesperson for the company told Reuters https://t.co/SdtP5YPk4I pic.twitter.com/XkXXzxoS3c
— Reuters Fact Check (@ReutersFacts) October 22, 2022
ಇದಲ್ಲದೆ, Uber ನ ಅಧಿಕೃತ ವೆಬ್‌ಸೈಟ್‌ನಲ್ಲಿ ರೈಡ್ ಆಯ್ಕೆಗಳನ್ನು ಸರ್ಚ್ ಮಾಡಿದಾಗ ”ವಾಕಿಂಗ್ ಬಡ್ಡಿ” ಆಯ್ಕೆಯನ್ನು ಪ್ರಾರಂಭಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
2020 ರಲ್ಲಿ ಪ್ರಕಟಗೊಂಡ ಹಿಂದೂಸ್ತಾನ್ ಟೈಮ್ಸ್‌ನಲ್ಲಿನ ವರದಿಯೊಂದು ಲಭ್ಯವಾಗಿದ್ದು ಇದೊಂದು ನಕಲಿ ಪೋಸ್ಟ್ ಎಂದು ಖಚಿತವಾಗಿದೆ ಮತ್ತು ದೃಢೀಕರಿಸುತ್ತದೆ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಫೋಟೋದಲ್ಲಿರುವ ಸ್ಥಳವು ಲಾಗಾರ್ಡಿಯಾ ವಿಮಾನ ನಿಲ್ದಾಣವಾಗಿದೆ, ಇದು ನ್ಯೂಯಾರ್ಕ್ ನಗರದಲ್ಲಿದೆ. ಉಬರ್‌ನ ವೆಬ್‌ಸೈಟ್‌ನಲ್ಲಿ ಕಾರುಗಳ ಸೇವೆಗೆ ಸಂಬಂಧಿಸಿದಂತೆ ಲಭ್ಯತೆಗಳನ್ನು ಹೊಂದಿದೆಯೇ ಹೊರತು ‘ವಾಕಿಂಗ್ ಬಡ್ಡಿ’ ಎಂಬ ಯಾವುದೇ ಆಯ್ಕೆಯಾಗಲಿ, ಸೇವೆಯಾಗಲಿ ಹೊಂದಿಲ್ಲ ಎಂದು ವರದಿ ಸ್ಪಷ್ಟಪಡಿಸುತ್ತದೆ.
https://twitter.com/Uber/status/1217161741735321601?ref_src=twsrc%5Etfw%7Ctwcamp%5Etweetembed%7Ctwterm%5E1217161741735321601%7Ctwgr%5E6290b11395d242b0292de3493ce7aaeef6163742%7Ctwcon%5Es1_&ref_url=https%3A%2F%2Fnewsmeter.in%2Ffact-check%2Fis-uber-adding-walking-buddy-feature-for-safe-riding-703034
ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಟ್ರೆಂಡ್ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ, ಟ್ವಿಟರ್‌ನಲ್ಲಿ ಇದೇ ಪೋಸ್ಟ್‌ಅನ್ನು ಹಿಂದೆಯೂ ಹಂಚಿಕೊಳ್ಳಲಾಗಿತ್ತು. ನಂತರ ಉಬರ್ ಕಂಪನಿಯು 2020 ರಲ್ಲಿ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೋ ನಕಲಿ ಆಗಿದ್ದು, ಉಬರ್ ತನ್ನ ರೈಡಿಂಗ್ ಸೇವೆಗಳಲ್ಲಿ “ವಾಕಿಂಗ್ ಗೆಳೆಯ” ನಂತಹ ಸೇವೆಯನ್ನು ನೀಡಿಲ್ಲ. ಇದು ಸುಳ್ಳು ಎಂದು ಸ್ವತಃ ಉಬರ್ ಕಂಪನಿಯೇ ದೃಢಪಡಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗುಲ್ಬರ್ಗದ ಗರುಡ ಆಕಾರದ ದೇವಸ್ಥಾನವನ್ನು ಇಂಡೋನೇಷ್ಯಾದ್ದು ಎಂದು ತಪ್ಪಾಗಿ ಹಂಚಿಕೆ

