ನವಿರೇಳಿಸುತ್ತಿವೆ ಮೋಡಗಳ ಜಲಪಾತ; ವಿಡಿಯೋ ನೋಡಿ ನೆಟ್ಟಿಗರು ಫಿದಾ!

ಮಿಜೋರಾಂನ ಐಜಾಲ್ನಲ್ಲಿ ಮೋಡಗಳು ಪರ್ವತಗಳ ಕೆಳಗೆ ಬೀಳುತ್ತವೆ, ಇದು ಮೋಡಿಮಾಡುವ ‘ಮೋಡದ ಜಲಪಾತ’ವನ್ನು ಸೃಷ್ಟಿಸುತ್ತದೆ!

ಈ ವೈರಲ್ ವಿದ್ಯಮಾನವು ಆಕಾರವನ್ನು ಪಡೆಯಲು ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳ ಅಗತ್ಯವಿರುತ್ತದೆ, ಇದು ನೋಡುವ ಅಪರೂಪದ ದೃಶ್ಯವಾಗಿದೆ.

ಪ್ರಕೃತಯ ಸೊಬಗಿನ ಮುಂದೆ ಮಾನವನ ಎಲ್ಲಾ ಪ್ರಯತ್ನಗಳೂ ಅಲ್ಪವೇ…. ಪ್ರಕೃತಿ ಸೃಷ್ಟಿಸುವ ಬೆಡ್ಡ, ಗುಡ್ಡ, ಪರ್ತವ, ನದಿ, ತೊರೆ, ಜಲಪಾತ, ಕಡಲು, ಹಸಿರಿನ ಒಡಲು ಇವೆಲ್ಲವೂ ಸ್ವಾಭಾವಿಕವಾಗಿ ಮೂಡಿಬರುವ ಅತ್ಯಾಕರ್ಷಿತ ರಚನೆಗಳು.. ಮನುಷ್ಯ ಇವೆಲ್ಲವನ್ನೂ ನಾಶ ಮಾಡಬಲ್ಲನೇ ಹೊರತು ಸೃಷ್ಟಿಸಲಾರ…

ಮನುಷ್ಯದ ದುರಾಸೆಗೆ ನೈಸರ್ಗಿಕ ಸಂಪತ್ತು ಬರಿದಾಗುತ್ತಿದೆ, ವಾತವರಣ ಬದಲಾಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ಪ್ರಕೃತಿ ಪ್ರೇಮಿಗಳ ಕಣ್ಣುನ್ನು ನಿಬ್ಬೆರಗುಗೊಳಿಸಿದ್ದು ಮಿಜೋರಾಂನ ಐಜಾಲ್‌ನಲ್ಲಿ ಪರ್ವತಗಳಿಂದ ಕೆಳಗೆ ಬೀಳುತ್ತಾ ‘ಮೋಡದ ಜಲಪಾತ’ವನ್ನೇ ಸೃಷ್ಟಿಸಿದ್ದ ಮೋಡಗಳು.

ಈ ರೀತಿಯ ಮೋಡದ ಜಲಪಾತ ಯಾವಾಗಲೂ ಕಾಣಸಿಗುವುದಲ್ಲ. ಅದು ನಿರ್ದಿಷ್ಟ ಹವಾಮಾನ ಪರಿಸ್ಥಿತಿಯಲ್ಲಿ ರಚನೆಯಾಗುತ್ತವೆ. ಅಂತಹ ಅಪರೂಪದ ಗಳಿಗೆಯನ್ನು ಸೈಮನ್ ಜೇಗರ್ ಎಂಬುವವರು ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘

ಈ ವಿಡಿಯೋವನ್ನು ಉದ್ಯಮಿ ಹರ್ಷ್ ಗೋಯೆಂಕಾ, ದಿ ಬೆಟರ್‌ ಇಂಡಿಯಾ ಸೇರಿದಂತೆ ಹಲವರು ಹಂಚಿಕೊಂಡಿದ್ದಾರೆ.

ಪರ್ವತ ಪ್ರದೇಶಗಳಲ್ಲಿನ ತಾಪನದಿಂದಾಗಿ ಇದು ಸಂಭವಿಸುತ್ತದೆ ಮತ್ತು ಅದು ಗಾಳಿಯ ದ್ರವ್ಯರಾಶಿಯಲ್ಲಿ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಅದು ಗಾಳಿಯ ದ್ರವ್ಯರಾಶಿಯಲ್ಲಿ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಪರಿಣಾಮವಾಗಿ, ತಂಪಾದ ಗಾಳಿ ಅಥವಾ ಮಂಜು ಮೋಡವು ಕೆಳಭಾಗದಲ್ಲಿ ಹೋಗುತ್ತದೆ ಮತ್ತು ಬಿಸಿ ಗಾಳಿಯು ಮೇಲಕ್ಕೆ ಬರುತ್ತದೆ ಎಂದು ಈ ಬಗ್ಗೆ ತಿಳಿದಿರುವ ವ್ಯಕ್ತಿಯಪಬ್ಬರು ವಿವರಿಸಿದ್ದಾರೆ.

ಪ್ರಕೃತಿಯ ಗಾರ್ಜಿಯಸ್‌ ಫೋಟೋಗಳನ್ನು ಸಹ ಕೆಲ ಸಾಮಾಜಿಕ ಬಳಕೆದಾರರು ಕಮೆಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಆಂಧ್ರಪ್ರದೇಶದ ವೈಜಾಗ್‌ನ ಬೀಚ್‌ನಲ್ಲಿ ಮೇಘ ತುಂಬಿಕೊಂಡಿರುವ ಚಿಕ್ಕ ವಿಡಿಯೋ ಕ್ಲಿಪ್‌ ಅನ್ನು ಮತ್ತೊಬ್ಬರು ಹಂಚಿಕೊಂಡಿದ್ದರು. ಅಲ್ಲದೆ, ಉತ್ತರಾಖಂಡ ಮತ್ತು ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳ ಮೋಡಗಳ ಹಾಗೂ ಪ್ರಕೃತಿ ವಿಸ್ಮಯದ ಫೋಟೋಗಳು ಸಹ ಶೇರ್‌ ಮಾಡಿಕೊಂಡಿದ್ದಾರೆ.

ಈಶಾನ್ಯ ಭಾರತವು ಪ್ರವಾಸಿಗರಿಗೆ ಹೇಗೆ ಉತ್ತಮ ಸ್ಥಳವಾಗಿದೆ ಎಂದು ಒಬ್ಬ ವ್ಯಕ್ತಿಯು ಮಿಜೋರಾಂನ ಮೇಘಗಳ ಜಲಪಾತದ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾನೆ. ಪ್ರವಾಸೋದ್ಯಮವನ್ನು ಎಲ್ಲಾ ಹಂತದಲ್ಲೂ ನಿಭಾಯಿಸುವ ಸಾಮರ್ಥ್ಯವಿರುವಂತೆ ದೇಶದ ಆ ಭಾಗವನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಬಿಜೆಪಿ-ಸೇನಾ ಮರು ಮೈತ್ರಿ; ಠಾಕ್ರೆ-ಫಡ್ನವೀಸ್‌ ಜೊತೆಗೂಡುವ ಸಾಧ್ಯತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights