Bigg Boss: ಹುಡುಗಿಯರ ಕೈ ಹೇಗೆ ಹಿಡಿಯಬೇಕು? ಮಂಜುಗೆ ಪಾಠ ಮಾಡಿದ ಶುಭಾ…

ಬಿಗ್ ಬಾಸ್ ಮನೆಯಲ್ಲಿ ಯಾರು ಏನೇ ಮಾಡಿದ್ರೂ ಕಾಮಿಡಿಯಾಗೇ ಇರುತ್ತೆ ಅಂತ ಕೇಳಿದ್ರೆ ಮೊದಲ ಹೆಸರು ಬರೋದು ಶುಭಾ ಪೂಂಜಾ ಅವರದ್ದು. ಶುಭಾ ಪೂಂಜಾ ಕಾಮಿಡಿಯನ್ ಅಲ್ಲ. ಆದರೂ ಅವರ ಮಾತು ವೀಕ್ಷಕರಿಗೆ ನಗು ತರಿಸುತ್ತೆ. ಮನೆಯ ಸದಸ್ಯರಿಗೆ ಏನಾದರು ಹೇಳ್ಬೇಕು ಅಂದರೆ ಶುಭಾ ಗಂಭೀರವಾಗೂ ಹೇಳ್ತಾರೆ, ಕಾಮಿಡಿಯಾಗೂ ಹೇಳ್ತಾರೆ. ಇದರಲ್ಲಿ ಶುಭಾ ಎತ್ತಿದ ಕೈ. ಹೀಗೆ ಹುಡ್ಗಿರ ಕೈ ಹೇಗೆ ಹಿಡಿಯಬೇಕು? ಅನ್ನೋದರ ಬಗ್ಗೆ ಶುಭಾ ಮಂಜುಗೆ ಪಾಠ ಮಾಡಿದ್ದಾರೆ.

ಹೌದು… ಮಂಜುಗೆ ಹುಡುಗಿಯರ ಕೈ ಹಿಡಿಯೋದು ಗೊತ್ತಿಲ್ಲ. ಅವನು ಕೈ ಹಿಡಿದರೆ ಕೈ ನೋವಾಗುತ್ತೆ. ಕೈಗಳಿಗೆ ಹೊಡೆದು ಮಂಜು ನೋವು ಮಾಡ್ತಾರೆ ಅನ್ನೋದು ಶುಭಾರ ಆರೋಪ. ಹೀಗಾಗಿ ಮಂಜು ಹುಡ್ಗಿರ ಕೈ ಹೇಗೆ ಹಿಡಿಯೋದು ಕಲಿಸಿಕೊಡು ಎಂದು ಕೇಳುತ್ತಾರೆ. ಅದಕ್ಕೆ ಶುಭಾ ಬೇಸಿಕ್ ಪಾಠ ಹೇಳಿಕೊಟ್ಟು, ಪ್ರಯೋಗ ಕೂಡ ಮಾಡ್ತಾರೆ.

ಹುಡ್ಗಿರ ಕೈ ತುಂಬಾ ಸ್ಮೂತ್. ಹಾರ್ಡ್ ಇರೋದಿಲ್ಲ. ಹೊಡೆದರೆ, ಗಟ್ಟಿಯಾಗಿ ಹಿಡಿದರೆ ನೋವಾಗುತ್ತೆ. ನಿಧಾನವಾಗಿ ಹಿಡಿಯಬೇಕು ಎಂದು ಶುಭಾ ಮಂಜುಗೆ ಪಾಠ ಮಾಡ್ತಾರೆ. ಜೊತೆಗೆ ಹೇಗೆ ಹಿಡಿಯಬೇಕು ಅಂತ ಕೈ ಹಿಡಿದು ತೋರಿಸುತ್ತಾರೆ. ಪಾಠ ಕಲಿತ ಮಂಜು ದಿವ್ಯ ಸುರೇಶ್ ಕೈ ಹಿಡಿದು ಪ್ರಯೋಗ ಮಾಡ್ತಾರೆ. ಪ್ರಯೋಗ ಸರಿ ಇರುವ ಬಗ್ಗೆ ದಿವ್ಯ ಉರುಡುಗ ಅವರನ್ನು ಕೇಳುತ್ತಾರೆ.

ಇನ್ನೂ ಮಂಜು ಮೊದಲೇ ಕಾಮಿಡಿಯನ್. ಶುಭಾ ಕಲಿಸಿದ ಪಾಠಕ್ಕಿಂತ ಹೆಚ್ಚು ಕಲಿತು ಪ್ರಯೋಗಿಸಲು ಹೋಗಿ ಮೂವರು ಹುಡುಗೀಯರ ನಗೆಪಾಟಲಿಗೆ ಸಿಕ್ಕಿಗೊಂಡ್ರು.

ಒಟ್ಟಿನಲ್ಲಿ ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರ್ ಕೈ ಹಿಡಿದುಕೊಳ್ಳುವುದು ಹೇಗೆ ಎನ್ನುವ ಶುಭಾ ಪಾಠ ಕೇವಲ ಮಂಜುಗೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಿಗೆ ಬಿಗ್ ಬಾಸ್ ನೋಡುವ ಪ್ರತೀಯೊಬ್ಬ ಹುಡುಗರಿಗೂ ಪಾಠವಾಗಿತ್ತು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights