ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗಿಂತ ಬಿಗ್ಗೆಸ್ಟ್ ವೀಕ್ ಶುಭಾ ಪೂಂಜಾ..!

ಬಿಗ್ ಬಾಸ್ ಮನೆಯಲ್ಲಿ ರಿಯಲ್ ಆಟ ಶುರುವಾಗಿದೆ. ಸ್ಪರ್ಧಿಗಳ ಮಧ್ಯೆ ಭಾರೀ ಪೈಪೋಟಿ ನಡೆದಿದೆ. ಆದರೆ ಮನೆಯ ಎಲ್ಲಾ ಸ್ಪರ್ಧಿಗಳಿಗಿಂತ ತುಂಬಾನೇ ವೀಕ್ ಆಗಿರೋದು ಶುಭಾ ಪೂಂಜಾ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದು ಈ ಹೇಳಿಕೆಗೆ ಕಾರಣವೇನು ಎನ್ನುವ ಪ್ರಶ್ನೆ ಮೂಡಿದೆ.

ಹೌದು… ಪ್ರಶಾಂತ್ ಹೇಳಿದ ‘ಶುಭಾ ವೀಕ್’ ಅನ್ನೋ ಮಾತು ಭಾರೀ ಚರ್ಚೆಗೆ ಗ್ರಾಸವಾಗಿದೆ. ಶುಭಾ ಪೂಂಜಾ ಬಿಗ್ ಬಾಸ್ ಮನೆಯಲ್ಲಿ ತುಂಬಾ ವೀಕ್ ಕ್ಯಾಂಡಿಡೇಟ್. ಆಕೆಯನ್ನು ಸುಲಭವಾಗಿ ಸೋಲಿಸಬಹುದು. ಹೀಗಾಗಿ ಆಕೆಗೆ ಕ್ಯಾಪ್ಟನ್ ದಿವ್ಯಾ ಉರುಡುಗ ನಾಮಿನೇಟ್ ಆದ ಸದಸ್ಯರಿಂದ ಸೇವ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ನಿನ್ನೆ ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದರು. ಹೀಗಾಗಿ ಬಿಗ್ ಬಾಸ್ ಕ್ಯಾಪ್ಟನ್ ದಿವ್ಯ ಉರುಡುಗ ಅವರಿಗೆ ನಾಮಿನೇಟ್ ಆದ ಮನೆಯ ಎಲ್ಲಾ ಸದಸ್ಯರ ಪೈಕಿ ಒಬ್ಬರನ್ನು ನಾಮಿನೇಟ್ ನಿಂದ ಸೇವ್ ಮಾಡಲು ಬಿಗ್ ಬಾಸ್ ತಿಳಿಸಿದ್ರು. ಕ್ಯಾಪ್ಟನ್ ದಿವ್ಯ ಉರುಡುಗ ನಾಮಿನೇಷನ್ ನಿಂದ ಶುಭಾ ಪೂಂಜಾ ಅವರನ್ನು ಸೇವ್ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ಮಾಡುತ್ತಿದ್ದ ಚಕ್ರವರ್ತಿ ಪ್ರಶಾಂತ್ ಗೆ ದಿವ್ಯಾ ಶುಭಾಳನ್ನು ಸೇಫ್ ಮಾಡಲು ಏನ್ ಕಾರಣ ಇರಬಹುದು ಎಂದು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್, ಶುಭಾ ಪೂಂಜಾ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗಿಂತ ಬಿಗ್ಗೆಸ್ಟ್ ವೀಕ್ ಕ್ಯಾಂಡಿಡೇಟ್. ಶುಭಾಳನ್ನ ಆಯ್ಕೆ ಮಾಡಿದರೆ ನಾಳೆ ಆಕೆಯನ್ನ ಸುಲಭವಾಗಿ ಸೋಲಿಸಬಹುದು. ಹೀಗಾಗಿ ದಿವ್ಯ ಶುಭಾಳನ್ನು ಸೇವ್ ಮಾಡಿದ್ದಾಳೆ ಎಂದಿದ್ದಾರೆ.

ಒಂದು ವೇಳೆ ದಿವ್ಯ ಪ್ರಶಾಂತ್ ಹೇಳಿದ ಉದ್ದೇಶದಂತೆ ಶುಭಾ ಅವರನ್ನು ಸೇವ್ ಮಾಡಿದ್ದರೆ ಮುಂದಿನ ದಿನದಲ್ಲಿ ಪ್ರಶಾಂತ್ ಹಾಗೂ ಚಕ್ರವರ್ತಿ ಮಾತುಗಳು ಜೋರಾಗುವದರಲ್ಲಿ ಡೌಟೇ ಇಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights