‘ಅಂಬರೀಶ್ ಸ್ಮಾರಕ ಕುಮಾರಸ್ವಾಮಿಯಿಂದ ಆಗಿಲ್ಲ’ – ಹೆಚ್ಡಿಕೆ ವಿರುದ್ಧ ಸುಮಲತಾ ಆಕ್ರೋಶ!

ಮಂಡ್ಯ ಜಿಲ್ಲೆ ದಳಪತಿಗಳ ವಿರುದ್ಧ ಸುಮಲತಾ ಕಿಡಿ ಕಾರಿದ್ದಾರೆ. ಅಂಬರೀಶ್ ನಿಧನದ ಬಗ್ಗೆ ಕುಮಾರಸ್ವಾಮಿ ಮಾತನಾಡುತ್ತಿರುವುದಕ್ಕೆ ಸುಮಲತಾ ಕೆಂಡ ಕಾರಿದ್ದಾರೆ. ಕುಮಾರಸ್ವಾಮಿ ಹೇಳಿಕೆಗಳಿಗೆ ರಾಕ್ ಲೈನ್ ವೆಂಕಟೇಶ್ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸುಮಲತಾ, ‘ಅಂಬರೀಶ್ ಸ್ಮಾರಕ ಕುಮಾರಸ್ವಾಮಿ ಮಾಡಿದ್ದಲ್ಲ. ಯಾರೇ ಸಿಎಂ ಆಗಿದ್ದರೂ ಅಂಬರೀಶ್ ಸ್ಮಾರಕ ಮಾಡ್ತಾಯಿದ್ರು. ಅದು ಅವರ ಕರ್ತವ್ಯ. ಅಂಬರಿಶ್ ಸ್ಮಾರಕ ನಿರ್ಮಾಣ ಮಾಡಲು ಸಂಪೂರ್ಣವಾದ ಸಹಕಾರ ಯಡಿಯೂರಪ್ಪ ಅವರು ಕೊಟ್ಟಿದ್ದಾರೆ. ಇವರು ಏನ್ ಮಾಡಿದ್ದಾರೆ..? ಏನು ಮಾಡಿಲ್ಲ.’ ಎಂದು ಸುಮಲತಾ ಗರಂ ಆದ್ರು.

ಅಂಬರೀಶ್ ಹೆಸರೇಳಿ ರಾಜಕೀಯ ಮಾಡ್ತಾಯಿದ್ದಾರೆಂದು ನಮಗೆ ಹೇಳುವ ನೀವು ಅಂಬರೀಶ್ ದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಿರುವ ಬಗ್ಗೆ ಯಾಕೆ ಮಾತಾಡ್ತೀರಿ ಎಂದು ಸುಮಲತಾ ಪ್ರಶ್ನಿಸಿದ್ದಾರೆ.

ನನ್ನ ಫೋನ್ ಟ್ಯಾಪ್ ಮಾಡಿದ್ದಾರೆ. ಇದನ್ನ ಅವರು ಒಪ್ಪಿಕೊಳ್ಳುತ್ತಿಲ್ಲ. ಕಳ್ಳ ಯಾವತ್ತೂ ಕಳ್ಳ ಅಂತ ಒಪ್ಪಿಕೊಳ್ಳುವುದಿಲ್ಲ. ಪೊಲೀಸರನ್ನೇ ಕಳ್ಳ ಅಂತ ಹೇಳ್ತಾನೆ. ನಿಮ್ಮ ಫೋನ್ ಟ್ಯಾಪ್ ಆಗಿದೆ ಎಂದು ಸಿಬಿಐ ಅಧಿಕಾರಿಗಳೇ ಹೇಳಿದ್ದಾರೆ ಎಂದು ಸಂಸದೆ ಸುಮಲತಾ ವಾಗ್ದಾಳಿ ಮಾಡಿದ್ದಾರೆ.

‘ಅಂಬರೀಶ್ ಸ್ಮಾರಕ ನಿರ್ಮಾಣ ಮಾಡಲು ದೊಡ್ಡಣ್ಣ ಫೈಲ್ ಕೊಟ್ಟರೆ ಕುಮಾರಸ್ವಾಮಿ ಫೈಲ್ ಮುಖದ ಮೇಲೆ ಬಿಸಾಕಿದ್ರು. ‘ಅಂಬರೀಶ್ ಏನ್ ಮಾಡಿದ್ರು ಅಂತ ಸ್ಮಾರಕ ನಿರ್ಮಾಣ ಮಾಡ್ಬೇಕು?’ ಅಂತ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು. ಅವಮಾನ ಸಹಿಸಲಾಗದೆ ದೊಡ್ಡಣ್ಣ ವಿಧಾನಸೌಧದಿಂದ ಕಣ್ಣೀರು ಹಾಕ್ತಾ ಬಂದಿದ್ದರು’ ಎಂದು ರಾಕ್ ಲೈನ್ ವೆಂಕಟೇಶ್ ಕುಮಾರಸ್ವಾಮಿ ವಿರುದ್ಧ ಗರಂ ಆದ್ರು.

 

 

Spread the love

Leave a Reply

Your email address will not be published. Required fields are marked *