‘ಪ್ರಶಾಂತ್ ನನ್ನ ಸ್ನೇಹಿತ ಅಲ್ಲ, ಅವನ್ನೊಬ್ಬ ಬ್ರೋಕರ್’ – ಚಕ್ರವರ್ತಿ ಯೂಟರ್ನ್!

ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ನಡುವೆ ಒಳಜಗಳ ಶುರುವಾಗಿದೆ. ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗೋದ್ರಲ್ಲಿ ನೋ ಡೌಟ್.

ಹೌದು.. ಇಷ್ಟು ದಿನ ಒಳ್ಳೆ ಸ್ನೇಹಿತರು ಎಂದು ಹೇಳಿಕೊಳ್ಳುತ್ತಿದ್ದ ಪ್ರಶಾಂತ್ ಹಾಗೂ ಚಕ್ರವರ್ತಿ ಇಬ್ಬರು ಈಗ ವಿರೋಧಿಗಳಾಗಿದ್ದಾರೆ. ಇವರಿಬ್ಬರು ಹೀಗೆ ವಿರೋಧಿಗಳಾಗಲು ಒಂದು ಗಂಭೀರವಾದ ಕಾರಣ ಕೂಡ ಇದೆ. ಪ್ರಶಾಂತ್ ಮನೆಯ ಎಲ್ಲಾ ಸದಸ್ಯರ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ಮನೆಯ ಸದಸ್ಯರು ಪ್ರಶಾಂತ್ ಸಂಬರಗಿ ಹಿಂದೆ ಮಾತನಾಡಿಕೊಳ್ಳುತ್ತಾರೆ. ಯಾರೂ ಕೂಡ ಅವರ ಮಾತು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ನೀನು ಬೇರೆವರ ಬಗ್ಗೆ ಮಾತನಾಡಬೇಡ ಎನ್ನುವ ಬುದ್ದಿ ಮಾತನ್ನ ಚಕ್ರವರ್ತಿ ಚಂದ್ರಚೂಡ್ ಪ್ರಶಾಂತ್ ಸಂಬರಗಿ ಅವರಿಗೆ ಹೇಳಿದರು.

ಹೀಗಾಗಿ ಪ್ರಶಾಂತ್ ಯಾರು ನನ್ನ ಹಿಂದೆ ನನ್ನ ಬಗ್ಗೆ ಮಾತನಾಡುತ್ತಾರೆಂದು ಚಕ್ರವರ್ತಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಚಕ್ರವರ್ತಿ, ವೈಷ್ಣವಿಗೆ ನೀನು ಟಾಸ್ಕ್ ವಿಚಾರದಲ್ಲಿ ಹೇಳಿದ ಮಾತನ್ನ ಗಂಭೀರವಾಗಿ ತೆಗೆದುಕೋಳ್ಳದೇ ಅವಳು ಎಲ್ಲರ ಮುಂದೆ ನಗಾಡಿದಳು ಎಂದು ಚಕ್ರವರ್ತಿ ಪ್ರಶಾಂತ್ ಗೆ ಹೇಳಿದರು.

ಪ್ರಶಾಂತ್ ಗೆ ‘ಟಾಸ್ಕ್ ವಿಚಾರದಲ್ಲಿ ಪ್ರಶಾಂತ್ ಹೇಳಿದ ಮಾತನ್ನ ಬಿಟ್ಟು ಬೇರೆ ಎಲ್ಲಾ ಸದಸ್ಯರು ಹೇಳಿದ ಮಾತನ್ನ ನಾನು ಕೇಳಿದೆ ಎಂದು ವೈಷ್ಣವಿ ಎಲ್ಲರ ಮುಂದೆ ನಕ್ಕಳು’ ಎನ್ನುವ ಮಾತು ಹೇಳಿದ್ದರು ಚಕ್ರವರ್ತಿ.

ಈ ಬಗ್ಗೆ ವೈಷ್ಣವಿ ಬಳಿ ಪ್ರಶಾಂತ್ ಕ್ಲಾರಿಟಿ ಪಡೆದರು. ಆಗ ವೈಷ್ಣವಿ ತಾವು ಚಕ್ರವರ್ತಿ ಹೇಳಿದಂತೆ ಹೇಳಿಲ್ಲ ಎಂದು ಹೇಳಿದರು. ಈ ವೇಳೆ ಸ್ಪೋಟಗೊಂಡ ಚಕ್ರವರ್ತಿ ಪ್ರಶಾಂತ್ ಅವರಿಗೆ ಕೆಟ್ಟ ಶಬ್ದಗಳಿಂದ ಬೈದರು.

ಇದಾದ ನಂತರ ಚಕ್ರವರ್ತಿ ತಾವು ಪ್ರಶಾಂತ್ ಸ್ನೇಹಿತ ಅವ್ವೇ ಅಲ್ಲ. ಪ್ರಶಾಂತ್ ಒಬ್ಬ ಬ್ರೋಕರ್. ಅವನೇನು ಅನ್ನೋದು ನನಗೆ ಸಂಪೂರ್ಣ ಗೊತ್ತಿದೆ ಎಂದು  ಅರವಿಂದ್ ಮುಂದೆ ಹೇಳಿದ್ದಾರೆ.

ಈ ಘಟನೆ ನಡೆದ ಬಳಿಕ ಚಕ್ರವರ್ತಿ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಸದಾ ಕಾಲ ಪ್ರಶಾಂತ್ ಜೊತೆ ಜೊತೆಯಾಗಿ ಗೆಳೆಯ ಗೆಳೆಯ ಅಂತ ಇರುತ್ತಿದ್ದ ಚಕ್ರವರ್ತಿ ಈಗ ಉಲ್ಟಾ ಹೊಡೆದಿದ್ದಾರೆ. ಪ್ರಶಾಂತ್ ಜೊತೆ ಮಾತು ಬಿಟ್ಟು ಅವರ ಹಿಂದೆ ಮಾತನಾಡಲು ಶುರು ಮಾಡಿದ್ದಾರೆ.

ಅಷ್ಟಕ್ಕೂ ಪ್ರಶಾಂತ್ ಗೆ ಚಕ್ರವರ್ತಿ ಹೇಳಿದ್ದು ನಿಜನಾ? ವೈಷ್ಣವಿ ಚಕ್ರವರ್ತಿ ಮುಂದೆ ಹೇಳಿದ್ದು ನಿಜನಾ? ಅನ್ನೋದು ಬಿಗ್ ಬಾಸೇ ಹೇಳಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights