Bigg Boss: ಚಕ್ರವರ್ತಿ ಚಂದ್ರಚೂಡ್ ಹಾಗೂ ದಿವ್ಯಾ ಉರಡುಗಗೆ ಕಿಚ್ಚನ ಬುದ್ದಿಮಾತು!

ಬಿಗ್ ಬಾಸ್ ಮನೆಯಲ್ಲಿ ನಿನ್ನೆ ವಾರದ ಕಥೆ ಕಿಚ್ಚನ ಜೊತೆಗೆ ಜೋರಾಗಿತ್ತು. ವಾರವಿಡಿ ಮನೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಕಿಚ್ಚ ನಿನ್ನೆ ಮನೆಯ ಸದಸ್ಯರಿಗೆ ಪ್ರಶ್ನಿಸಿದರು. ಜೊತೆಗೆ ಮನೆಯಲ್ಲಿ ನಡೆದ ತಪ್ಪುಗಳಿಂದಾಗುವ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಚಕ್ರವರ್ತಿ ಚಂದ್ರಚೂಡ್ ಹಾಗೂ ದಿವ್ಯಾ ಉರುಡುಗಗೆ ಕಿಚ್ಚ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ದಿವ್ಯಾ ಉರುಡುಗ ಈ ಬಾರಿ ಬಿಗ್ ಬಾಸ್ ಮನೆಯ ಮಹಿಳಾ ಕ್ಯಾಪ್ಟನ್ ಆಗಿ ಮಾಡಿದ ತಪ್ಪುಗಳನ್ನ ಕಿಚ್ಚ ಸುದೀಪ್ ಪ್ರಶ್ನಿಸಿದ್ದಾರೆ. ಮನೆಯ ಎಲ್ಲಾ ಸದಸ್ಯರಿಗೂ ತಪ್ಪು ಕಂಡುಬಂದಲ್ಲಿ ನೇರವಾಗಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ದಿವ್ಯ ಟಾಸ್ಕ್ ವೊಂದರಲ್ಲಿ ಅರವಿಂದ್ ಕೆಪಿ ತಪ್ಪು ಮಾಡಿದರೂ ಮಾತನಾಡದೆ ಸೈಲೆಂಟ್ ಆಗಿದ್ರು. ಈ ಬಗ್ಗೆ ಕಿಚ್ಚ ಕೇಳುವ ಪ್ರಶ್ನೆಗೆ ದಿವ್ಯಾರ ಬಳಿ ಉತ್ತರವೇ ಇರಲಿಲ್ಲ.

ಇನ್ನೂ ಮಂಜು ಹಾಗೂ ಪ್ರಶಾಂತ್ ಸಂಬರಗಿ ಆಡುವಾಗ ದಿವ್ಯ ಗಮನಕ್ಕೆ ಬಾರದೇ ನಡೆದ ಘಟನೆಯನ್ನು ಇನ್ನೂ ಉತ್ತಮ ರೀತಿಯಲ್ಲಿ ನಿಭಾಯಿಸಬಹುದಿತ್ತು ಎಂದು ಸುದೀಪ್ ಮನವರಿಕೆ ಮಾಡಿದರು.

ಇನ್ನೂ ಚಕ್ರವರ್ತಿ ಮಾತನಾಡುವ ಎಲ್ಲಾ ವಿಚಾರಗಳು ಮತ್ತೊಬ್ಬರನ್ನ ಟ್ರಿಗರ್ ಮಾಡುವ ನಿಟ್ಟಿನಲ್ಲೇ ಇರುತ್ತವೆ ಎನ್ನುವ ವಿಚಾರ ನಿನ್ನೆಯ ಎಪಿಸೋಡ್ ನಿಂದ ಮತ್ತಷ್ಟು ಸ್ಪಷ್ಟವಾಗಿದೆ. ವೈಷ್ಣವಿ ಹಾಗೂ ಪ್ರಶಾಂತ್ ಮಧ್ಯೆ ಕೆಲ ವಿಚಾರಗಳನ್ನು ಹೇಳಿದ್ದು, ಅರವಿಂದ್ ಕೆಪಿ ಮುಂದೆ ಪ್ರಶಾಂತ್ ಅವರ ಬಗ್ಗೆ ವೈಯಕ್ತಿವಾಗಿ ಮಾತನಾಡಿರುವುದು. ಇವೆಲ್ಲವನ್ನ ನೆನಪಿಸಿ ಕಿಚ್ಚ ಚಕ್ರವರ್ತಿಯನ್ನ ಲಾಕ್ ಮಾಡಿದ್ರು.

ಮತ್ತೊಂದು ವಿಚಾರ ಅಂದ್ರೆ ಮನೆಯಲ್ಲಿ ದಿವ್ಯ ಫೇವರ್ ಆಗಿ ಮಾತನಾಡುವ ಅರವಿಂದ್ ಗೂ ಕಿಚ್ಚ ಕೆಲ ಮಾತುಗಳನ್ನ ಗಮನಕ್ಕೆ ತಂದಿದ್ದಾರೆ. ಪ್ರಶಾಂತ್ ಮತ್ತು ದಿವ್ಯಾ ಮಾತನಾಡುವಾಗ ನಡುವೆ ಪ್ರವೇಶಿದ ಅರವಿಂದ್ ಗೂ ಪ್ರಶಾಂತ್ ಗೂ ಮನೆಯಲ್ಲಿ ದೊಡ್ಡ ಜಗಳವೇ ನಡೆಯಿತು. ಆದರೆ ಇದೇ ಅರವಿಂದ್, ಪ್ರಶಾಂತ್ ಬಗ್ಗೆ ಚಕ್ರವರ್ತಿ ವೈಯಕ್ತಿಕ ವಿಚಾರಗಳನ್ನು ಮಾತನಾಡುವಾಗ ಧ್ವನಿ ಎತ್ತಲಿಲ್ಲ. ಅರವಿಂದ್ ಪ್ರಶಾಂತ್ ವಿರುದ್ಧ ಧ್ವನಿ ಎತ್ತಲು ಟ್ರಿಗರ್ ಮಾಡಿದ್ದು ಚಕ್ರವರ್ತಿ ಅವರ ಮಾತುಗಳೇ ಅನ್ನೋದು ಸ್ಪಷ್ಟವಾಗಿದೆ.

ಒಟ್ಟಿನಲ್ಲಿ ಪ್ರಶಾಂತ್ ಆಡುವ ಮಾತುಗಳಲ್ಲಿ ಸತ್ಯ ಇರುತ್ತೆ, ಆದರೆ ಅವರು ಮಾತನಾಡುವ ಶೈಲಿ ಕೋಪ ಸತ್ಯವನ್ನು ಮರೆ ಮಾಚಿಬಿಡುತ್ತಿದೆ ಅನ್ನೋದನ್ನ ಮನೆಯ ಸದಸ್ಯರು ಒಪ್ಪಿಕೊಂಡರೇ ವಿನ: ತಪ್ಪು ಕಂಡುಬಂದಾಗ ಧ್ವನಿ ಎತ್ತುವ ಅಥವಾ ಪ್ರಶ್ನಿಸುವ ಧೈರ್ಯ ಯಾರೂ ಕೂಡ ಮಾಡುತ್ತಿಲ್ಲ ಅನ್ನೋದು ಮಾತ್ರ ಇದರಿಂದ ಸ್ಪಷ್ಟವಾಗುತ್ತಿದೆ.

Spread the love

Leave a Reply

Your email address will not be published. Required fields are marked *