ಇರಾಕ್ನ ನಾಸಿರಿಯಾ ಕೋವಿಡ್ ವಾರ್ಡ್ನಲ್ಲಿ ಅಗ್ನಿ ಅವಘಡ : 50 ಕ್ಕೂ ಹೆಚ್ಚು ಜನ ಸಾವು!
ಇರಾಕ್ನ ನಾಸಿರಿಯಾ ಕೋವಿಡ್ ವಾರ್ಡ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು 50 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ದಕ್ಷಿಣ ನಗರವಾದ ನಾಸಿರಿಯಾದ ಅಲ್-ಹುಸೇನ್ ಆಸ್ಪತ್ರೆಯ ಕೊರೋನವೈರಸ್ ಐಸೊಲೇಷನ್ ವಾರ್ಡ್ನಲ್ಲಿ ಸೋಮವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡು 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
“ನಾನು ಕರೋನವೈರಸ್ ವಾರ್ಡ್ಗಳ ಒಳಗೆ ದೊಡ್ಡ ಸ್ಫೋಟವನ್ನು ಕೇಳಿದೆ ಮತ್ತು ನಂತರ ಬೆಂಕಿ ಬೇಗನೆ ಸ್ಫೋಟಗೊಂಡಿದೆ” ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಸುದ್ದಿಗಾರರಿಗೆ ಹೇಳಿಕೊಂಡಿದ್ದಾರೆ.
ಬೆಂಕಿಯ ಕಾರಣ ಸ್ಪಷ್ಟವಾಗಿಲ್ಲ, ಆದರೆ ಆಮ್ಲಜನಕ ಟ್ಯಾಂಕ್ ಸ್ಫೋಟಗೊಂಡಿರುವ ಸಾಧ್ಯತೆಗಳು ಇವೆ ಎಂದು ಆರಂಭಿಕ ವರದಿಗಳು ಸೂಚಿಸುತ್ತವೆ.ರೋಗಿಗಳ ಸಂಬಂಧಿಕರು ಕಟ್ಟಡದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು, ಘಟನೆಯಲ್ಲಿ ಆಸ್ಪತ್ರೆಯ ಮುಖ್ಯಸ್ಥರನ್ನು ಬಂಧಿಸುವಂತೆ ಇರಾಕಿ ಪ್ರಧಾನಿ ಮುಸ್ತಫಾ ಅಲ್-ಕಡೆಮಿ ಆದೇಶಿಸಿದ್ದಾರೆ.
ರೋಗಿಗಳ ಸಂಬಂಧಿಕರ ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ಘರ್ಷಣೆ ಮತ್ತು ಎರಡು ಪೊಲೀಸ್ ವಾಹನಗಳು ಬೆಂಕಿಗೆ ಆಹುತಿಯಾಗಿದೆ.

