ಟೋಕಿಯೊ ಒಲಿಂಪಿಕ್ ವಿಲೇಜ್ ನಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲು..!
ಟೋಕಿಯೊ ಒಲಿಂಪಿಕ್ ವಿಲೇಜ್ ನಲ್ಲಿ ಮೊದಲ ಕೋವಿಡ್-19 ಪ್ರಕರಣ ದಾಖಲಾಗಿದ್ದು ಆತಂಕವನ್ನು ಹೆಚ್ಚಿಸಿದೆ.
ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟವನ್ನು ತೆರೆಯುವ ಆರು ದಿನಗಳ ಮೊದಲು ಒಲಿಂಪಿಕ್ ಗ್ರಾಮದಲ್ಲಿ ಮೊದಲ ಕೋವಿಡ್ -19 ಪ್ರಕರಣ ದಾಖಲಿಸಿದೆ ಎಂದು ಸಂಘಟಕರು ಶನಿವಾರ ತಿಳಿಸಿದ್ದಾರೆ.
“ಗ್ರಾಮದಲ್ಲಿ ಒಬ್ಬ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ” ಎಂದು ಟೋಕಿಯೊ ಸಂಘಟನಾ ಸಮಿತಿಯ ವಕ್ತಾರ ಮಾಸಾ ಟಕಯಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕ್ರೀಡಾಕೂಟದಲ್ಲಿ ಸಾವಿರಾರು ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ವಾಸಿಸುತ್ತಾರೆ. ಹೀಗಾಗಿ ಸೋಂಕಿತ ವ್ಯಕ್ತಿಯನ್ನು ಹಳ್ಳಿಯಿಂದ ಹೊರಪ್ರದೇಶದ ಹೊಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ.
ಟೋಕಿಯೋ 2020 ಕ್ರೀಡಾಕೂಟದ ಮುಖ್ಯ ಸಂಘಟಕರಾದ ಸೈಕೊ ಹಶಿಮೊಟೊ ಮಾತನಾಡಿ, “ಕೋವಿಡ್ ಏಕಾಏಕಿ ಹರಡುವುದನ್ನು ತಡೆಗಟ್ಟಲು ನಾವು ಎಲ್ಲವನ್ನೂ ಮಾಡುತ್ತಿದ್ದೇವೆ. ಏಕಾಏಕಿ ಕೊರೊನಾ ಕಂಡುಬಂದರೆ ಅದನ್ನು ತಡೆಯಲು ನಾವು ವ್ಯವಸ್ಥೆ ಮಾಡಿಕೊಂಡಿದ್ದೇವೆ” ಎಂದರು.
ಸಾಂಕ್ರಾಮಿಕ ರೋಗದಿಂದಾಗಿ ಈಗಾಗಲೇ ಒಂದು ವರ್ಷ ಮುಂದೂಡಲ್ಪಟ್ಟ ಒಲಿಂಪಿಕ್ಸ್‌ನಲ್ಲಿ, ಗ್ರಾಮದಲ್ಲಿ ಕೊರೋನವೈರಸ್ ಸೋಂಕನ್ನು ತಪ್ಪಿಸಲು ಸಂಘಟಕರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ.