ಡ್ಯಾನಿಶ್‌ ಸಿದ್ದಿಕಿ ಸಾವಿನ ಬಗ್ಗೆ ಕೇಂದ್ರವಾಗಲೀ, ಮೋದಿಯಾಗಲೀ ಏನನ್ನೂ ಹೇಳಲ್ಲ; ಯಾಕೆಂದರೆ……..!

ರಾಯ್ಟರ್ಸ್‌ನ ಖ್ಯಾತ ಛಾಯಾಗ್ರಾಹಕ ಪತ್ರಕರ್ತ ಭಾರತದ ಡ್ಯಾನಿಶ್‌ ಸಿದ್ದಿಕಿ ಅವರು ಅಫ್ಘಾನಿಸ್ಥಾನದಲ್ಲಿ ನಡೆಯುತ್ತಿರುವ ಸೇನೆ ಮತ್ತು ತಾಲಿಬಾನ್‌ ಘರ್ಷಣೆಯಲ್ಲಿ ಮೃತಪಟ್ಟಿದ್ದಾರೆ. ಅವರ ಸಾವಿನ ಬಗ್ಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರವಾಗಲೀ, ಪ್ರಧಾನಿ ಮೋದಿಯಾಗಲೀ ಸಂತಾಪ ಸೂಚಿಸಿಲ್ಲ. ಕೇಂದ್ರದ ಈ ನಡೆಯ ವಿರುದ್ದ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ ಅವರು, “ಡ್ಯಾನಿಶ್‌ ಸಿದ್ದಿಕಿಯ ದುರಂತ ಮೃತ್ಯು ಹಾಗೂ ಹೆಚ್ಚುತ್ತಿರುವ ಹಣದುಬ್ಬರ ಈ ಎರಡು ವಿಷಯಗಳ ಕುರಿತು ಬಿಜೆಪಿ-ಎನ್‌ಡಿಎ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಏಕೆಂದರೆ ಈ ಎರಡೂ ವಿಷಯಗಳು ಅವರ ಸುಳ್ಳು ಹೇಳಿಕೆಗಳಾದ ʼನಮ್ಮಲ್ಲಿ ರಕ್ಷಣಾ ವ್ಯವಸ್ಥೆಯಿದೆ, ಅಭಿವೃದ್ಧಿಯಿದೆ ಮತ್ತು ಕ್ಷೇಮವಿದೆʼ ಎಂಬ ಹೇಳಿಕೆಗೆ ಅನ್ವಯಿಸುವುದಿಲ್ಲ” ಎಂದು ಟೀಕಿಸಿದ್ದಾರೆ.

ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್‌ ದಾನಿಶ್‌ ಸಿದ್ದೀಕಿ ಶುಕ್ರವಾರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿನ ಕಂದಹಾರ್‌ ಪ್ರಾಂತ್ಯದ ಬೊಡ್ಲಾಕ್ ಜಿಲ್ಲೆಯಲ್ಲಿ ಅಫ್ಘಾನ್‌ ಭದ್ರತಾ ಪಡೆಗಳ ಮತ್ತು ತಾಲಿಬಾನ್‌ ನಡುವಿನ ಘರ್ಷಣೆಯ ಸಂದರ್ಭದಲ್ಲಿ ಕೊಲ್ಲಲ್ಪಟ್ಟಿದ್ದರು ಎಂದು ವರದಿಗಳು ತಿಳಿಸಿದ್ದವು.

ಇದನ್ನೂ ಓದಿ: ಉತ್ತರ ಪ್ರದೇಶ ಸಿ-ವೋಟರ್ ಸಮೀಕ್ಷೆ: ಮತ್ತೆ ಅಧಿಕಾರ ಹಿಡಿಯಲಿದೆ ಬಿಜೆಪಿ; ಕಾಂಗ್ರೆಸ್‌ ಕಳಪೆ ಪ್ರದರ್ಶನ ಸಾಧ್ಯತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights