Bigg Boss: ಡಿಯು ಮೇಲೆ ಮುನಿಸಿಕೊಂಡು ಮಾತು ಬಿಟ್ಟ ಅವಿ..!
ಬಿಗ್ ಬಾಸ್ ಮನೆಯಲ್ಲಿ ಸದಾಕಾಲ ಜೊತೆಜೊತೆಯಾಗೇ ಇರುವ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಇಬ್ಬರು ಮುನಿಸಿಕೊಂಡಿದ್ದಾರೆ.
ಹೌದು.. ಬಿಗ್ ಬಾಸ್ ಮನೆಯಲ್ಲಿ ತುಂಬಾ ಹೈಲೆಟ್ ಆದ ಜೋಡಿ ಅಂದ್ರೆ ಅದು ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ. ಈ ಬಾರಿ ವಿಜೇತರಾಗುವ ಲಿಸ್ಟ್ ನಲ್ಲಿ ಇವರಿಬ್ಬರ ಹೆಸರು ಟಾಪ್ ನಲ್ಲಿ ಕೇಳಿ ಬರುತ್ತಿದೆ. ಆದರೆ ಕಳೆದ ಬಾರಿ ಟಾಸ್ಕ್ ವಿಚಾರದಲ್ಲಿ ದಿವ್ಯಾ ಉರುಡುಗಾ ಅವರಿಗೆ ಕೈಗೆ ಗಾಯಗಳಾಗಿದ್ದು ಆಟಗಳನ್ನ ಸರಿಯಾಗಿ ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಿವ್ಯಾ ಆಟಗಳನ್ನು ಸೋಲುತ್ತಿರುವುದು, ಆಟಗಳನ್ನು ಬಿಟ್ಟುಕೊಡುವ ಸಂದರ್ಭಗಳು ಬರುತ್ತಿವೆ.
ಆದರೆ ದಿವ್ಯಾ ಆಡುವ ಉತ್ಸಾಹ ಮಾತ್ರ ಕಳೆದುಕೊಂಡಿಲ್ಲ. ನಿನ್ನೆ ಟಾಸ್ಕ್ ವಿಚಾರದಲ್ಲಿ ತಾವು ಒಂದು ಆಟವನ್ನು ಬಿಟ್ಟುಕೊಟ್ಟರು. ಮತ್ತೊಂದು ಆಟದಲ್ಲಿ ತಾವು ಆಟ ಬಿಟ್ಟುಕೊಡಲು ಒಪ್ಪಲಿಲ್ಲ. ಈ ಆಟದಲ್ಲಿ ಬಜರ್ ನಂತರ ಮೊದಲು ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳುವ ಮೂವರು ಸದಸ್ಯರು ಕೆಸರಿನಲ್ಲಿ ಮುತ್ತು ಹುಡುಕಬೇಕು. ಆದರೆ ದಿವ್ಯಾ, ಶುಭಾ ಹಾಗೂ ವೈಷ್ಣವಿ ಬಜರ್ ಆಗುವ ಮುನ್ನವೇ ನಿಂತು ಬಜರ್ ಆಗುವುದನ್ನ ಕಾಯುತ್ತಿದ್ದರು.
ಇದಕ್ಕೆ ಕೋಪಗೊಂಡ ಅರವಿಂದ್ ಬಜರ್ ಮುಂಚೆ ಹೋಗಿ ಅಲ್ಲಿ ನಿಂತು ಕಾಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಜರ್ ಮುಂಚೆ ಅಲ್ಲಿ ನಿಂತು ಕಾದರೆ ಉಳಿದವರು ಆಟದಿಂದ ವಂಚಿತರಾಗುತ್ತಾರೆಂದು ಅರವಿಂದ್ ವಾದವಾಗಿತ್ತು. ಇದಕ್ಕೆ ದಿವ್ಯಾ ಏರು ಧ್ವನಿಯಲ್ಲಿ ತಾವು ಅಲ್ಲೇ ನಿಂತು ಕಾಯುವುದಾಗಿ ಹೇಳಿದರು.
ಇದರಿಂದ ಕೋಪಗೊಂಡ ಅರವಿಂದ್ ಫೇರ್-ಅನ್ ಫೇರ್ ಅಂತ ಮಾತನಾಡುವಾಗ ನಾನು ಮಾತನಾಡುತ್ತೇನೆ ಈಗ ಮಾತನಾಡುವುದಿಲ್ಲ ಎಂದು ಸುಮ್ಮನಾದರು.
ಈ ಮುನಿಸು ಇವರಿಬ್ಬರ ಮಧ್ಯೆ ಮುಂದುರೆದಿದ್ದು, ರಾತ್ರಿ ದಿವ್ಯಾ ಮಾತನಾಡಿದಾಗಲೂ ಅರವಿಂದ್ ಮಾತನಾಡಲಿಲ್ಲ. ಇದರಿಂದ ಮುಂದಿನ ಆಟದಲ್ಲಿ ಇವರಿಬ್ಬರೂ ಸೇರಿ ಆಡುತ್ತಾರೆ? ವಿರೋಧಿಗಳಾಗುತ್ತಾರಾ ಅನ್ನೋ ಅನುಮಾನ ಶುರುವಾಗಿದೆ.