ಟೋಕಿಯೋ ಒಲಿಂಪಿಕ್ಸ್‌: ಆರಂಭಿಕ ಹಾಕಿ ಆಟದಲ್ಲಿ ಭಾರತಕ್ಕೆ ಭರ್ಜರಿ ಗೆಲುವು!

ಟೋಕಿಯೋ ಒಲಿಂಪಿಕ್ಸ್‌ ಶುಕ್ರವಾರದಿಂದ ಆರಂಭವಾಗಿದೆ. ಒಲಿಂಪಿಕ್ಸ್‌ನ ಹಾಕಿ ವಿಭಾಗದಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು ಆರಂಭಿಕ ಆಟವನ್ನು ಆಡಿದ್ದು, ಭಾರತ ತಂಡ 3-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ.

ಮನ್‌ಪ್ರೀತ್ ಸಿಂಗ್‌ ನೇತೃತ್ವದ ಭಾರತ ಹಾಕಿ ತಂಡದ ಹರ್ಮನ್‌ಪ್ರೀತ್ ಸಿಂಗ್ ಅವರು ಎರಡು ಗೋಲು ಬಾರಿಸಿದ್ದರು. ಅಲ್ಲದೆ ಗೋಲ್‌ ಕೀಪರ್ ಪಿ.ಆರ್. ಶ್ರೀಜೇಶ್ ಮನೋಜ್ಞ ಅವರು ಉತ್ತಮ ಪ್ರದರ್ಶನವನ್ನು ನೀಡಿದ್ದರು ಇದರಿಂದಾಗಿ ಭಾರತ ತಂಡ ಸರಾಯಾಸವಾಗಿ ಗೆಲುವು ಸಾಧಿಸಿದೆ.

ಪಂದ್ಯ ಆರಂಭವಾದ ಆರನೇ ನಿಮಿಷದಲ್ಲಿ ನ್ಯೂಜಿಲೆಂಡ್‌ನ ಕೇನ್‌ ರಸೆಲ್ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಇದು ವಿಕ್ಷಕರ ಮತ್ತು ಹಾಕಿ ಅಭಿಮಾನಿಗಳಿಗೆ ಅಚ್ಚರಿಯನ್ನು ತರಿಸಿತು.

ಅವರ ಈ ಆಟದಿಂದಾಗಿ ಕ್ರೀಡೆಯ ಆರಂಭದಲ್ಲಿ 1-0 ಅಂಕಗಳೊಂದಿಗೆ ನ್ಯೂಜಿಲೆಂಡ್‌ ಮುನ್ನಡೆ ಸಾಧಿಸಿತ್ತು. ಆದರೆ, ನಂತರದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿ, ಗೆಲುವು ಸಾಧಿಸಿದೆ.

ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್: ಕರ್ನಾಟಕದಿಂದ ಮೂವರಿಗೆ ಅವಕಾಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights