ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯ ರಕ್ಷಣೆ; ದೃಶ್ಯ ಕ್ಯಾಮೆರಾದಲ್ಲಿ ಸೆರೆ!

ಬಾಲಕಿಯೊಬ್ಬಳು ಮೆಟ್ರೋ ನಿಲ್ದಾಣದ ಮೇಲಿನಿಂದ ಜಿಗಿಯಲು ಯತ್ನಿಸಿದ್ದು, ಆಕೆಯನ್ನು ಕರ್ತವ್ಯದಲ್ಲಿದ್ದ ಕೆಲವು ಅಧಿಕಾರಿಗಳು ರಕ್ಷಿಸಿರುವ ಘಟನೆ ದೆಹಲಿಯ ಫರಿದಾಬಾದ್‌ ಮೆಟ್ರೋ ನಿಲ್ಧಾಣದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

45 ಸೆಕೆಂಡುಗಳ ವಿಡಿಯೋದಲ್ಲಿ, ಫರಿದಾಬಾದ್‌ನ ಸೆಕ್ಟರ್ 28 ಮೆಟ್ರೋ ನಿಲ್ದಾಣದಲ್ಲಿ ಸುರಕ್ಷತೆಯಿಂದ ತೆರಳುವಂತೆ ಭದ್ರತಾ ಸಿಬ್ಬಂದಿ ಹೇಳಿದರೂ, ಅವರ ಮಾತನ್ನು ನಿರ್ಲಕ್ಷಿಸಿ ಬಾಲಕಿ ನಿಲ್ದಾಣದ ಗೋಡೆಯ ಮೇಲೆ ಕುಳಿತಿದ್ದಾಳೆ. ಸಿಐಎಸ್ಎಫ್ ಮತ್ತು ಮೆಟ್ರೋ ಸಿಬ್ಬಂದಿಯ ಗುಂಪೊಂದು ಆಕೆಯನ್ನು ರಕ್ಷಿಸಲು ಮುಂದಾಗಿದ್ದು, ಪೊಲೀಸ್ ಕಾನ್‌ಸ್ಟೆಬಲ್ ಗೋಡೆಯನ್ನು ದಾಟಿ ಸೈಡ್‌ವಾಲ್ ಮೂಲಕ ಆಕೆಯನ್ನು ಸಮೀಪಿಸಿದ್ದಾರೆ. ಆಕೆಯನ್ನು ಸಿಬ್ಬಂದಿ ಮೇಲೆ ಬರುವಂತೆ ಕೇಳಿದರೂ ಆಕೆ ಬಾರದಿದ್ದಾಗ ಮತ್ತೊಬ್ಬ ವ್ಯಕ್ತಿ ಜೊತೆಗೂಡಿ ಆಕೆಯನ್ನು ರಕ್ಷಿಸಿದ್ದಾರೆ.

ಕಾನ್‌ಸ್ಟೆಬಲ್ ಸರ್ಫರಾಜ್ ಅವರು ಧೈರ್ಯವಾಗಿ ಆಕೆಯನ್ನು ರಕ್ಷಿಸಿದ್ದಕ್ಕಾಗಿ ಅವರನ್ನು ಪೊಲೀಸ್ ಆಯುಕ್ತ ಒ.ಪಿ.ಸಿಂಗ್ ಪ್ರಶಂಸಿಸಿದ್ದಾರೆ.

“ಜೀವನವೇ ಒಂದು ಹೋರಾಟವಾಗಿದೆ. ಸಮಸ್ಯೆಗಳಿಗೆ ಹೆದರಿ ಓಡಿಹೋಗಬಾರದು ಮತ್ತು ಈ ರೀತಿ ದುಡುಕಿ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳಲು ಪ್ರಯತ್ನಿಸಬಾದರು” ಎಂದು ಸಿಂಗ್ ಹೇಳಿದ್ದಾರೆ.

ಆಕೆಯನ್ನು ವಿಚಾರಣೆ ಒಳಪಡಿಸಿದ್ದು, ಕೆಲಸಕ್ಕೆ ಸಂಬಂಧಿಸಿದ ಒತ್ತಡಗಳಿಂದಾಗಿ ಆತ್ಮಹತ್ಯೆಗೆ ಮುಂದಾಗಿದ್ದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.

ನಂತರ ಬಾಲಕಿಗೆ ಸಲಹೆ ನೀಡಿ, ಆಕೆಯ ಕುಟುಂಬಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಮಗನ ಚಿಕಿತ್ಸೆಗಾಗಿ ಪ್ರತಿ ತಿಂಗಳು 400 ಕಿ.ಮೀ ಸೈಕಲ್‌ ತುಳಿಯುತ್ತಿದ್ದ ತಂದೆ; ಕೊನೆಗೂ ಸಿಕ್ಕಿತು ಸಹಾಯಾಸ್ತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights