ಬಂಡೆಯಿಂದ ತಳ್ಳಿ ಪತ್ನಿಯನ್ನು ಕೊಂದ ಪತಿ : ಆರೋಪಿಯ ಹಿಂದಿತ್ತು ಆರೋಪಗಳ ದೊಡ್ಡ ಪಟ್ಟಿ!

ಕಳೆದ ತಿಂಗಳು ಉತ್ತರಾಖಂಡದ ನೈನಿತಾಲ್‌ನಲ್ಲಿ ತನ್ನ ಹೆಂಡತಿಯನ್ನು ಬಂಡೆಯಿಂದ ತಳ್ಳಿದ ಆರೋಪದ ಮೇಲೆ 24 ವರ್ಷದ ಸೇಲ್ಸ್‌ಮ್ಯಾನ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯಲ್ಲಿ ವಾಸಿಸುವ ಆರೋಪಿ ರಾಜೇಶ್ ರೈ 29 ವರ್ಷದ ಬಬಿತಾ ಅವರನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ಕಳೆದ ವರ್ಷ ಜೂನ್‌ನಲ್ಲಿ ಬಬಿತಾ ದೂರು ನೀಡಿದ್ದರು. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಕಳೆದ ವರ್ಷ ಆಗಸ್ಟ್‌ನಲ್ಲಿ ರಾಜೇಶ್ ರೈ ಅವರನ್ನು ಬಂಧಿಸಿದ್ದರು.

ಆತನನ್ನು ಮದುವೆಯಾಗಲು ಬಯಸಿದ ಬಬಿತಾ ತನ್ನ ದೂರನ್ನು ಹಿಂತೆಗೆದುಕೊಂಡಿದ್ದಾಳೆ. ಹೀಗಾಗಿ ಆರೋಪಿಯನ್ನು ಅಕ್ಟೋಬರ್‌ನಲ್ಲಿ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ನಂತರ ಇಬ್ಬರು ವಿವಾಹವಾದರು.

ಮದುವೆ ಬಳಿಕವೂ ದೈಹಿಕವಾಗಿ ಕಿರುಕುಳಕ್ಕೊಳಗಾಗುತ್ತಿದ್ದ ಬಬಿತಾರೊಂದಿಗೆ ಆಗಾಗ್ಗೆ ರೈ ಜಗಳವಾಡುತ್ತಿದ್ದನು. ಬೇಸತ್ತ ಬಬಿತಾ ತನ್ನ ತಾಯಿ ಮನೆಗೆ ಹೋಗಿದ್ದರು. ಆದರೆ ರೈ ಬಬಿತಾಳನ್ನು ಮನವೊಲಿಸಿ ಜೂನ್ 11 ರಂದು ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ತಮ್ಮ ಹಳ್ಳಿಗೆ ರೈ ಕರೆದೊಯ್ದಿದ್ದಾನೆ. ಇದರ ನಂತರ ಬಬಿತಾ ಅವರ ಫೋನ್ ಸ್ವಿಚ್ ಆಫ್ ಆಗಿದ್ದು, ದೆಹಲಿಯಲ್ಲಿರುವ ಬಬಿತಾ ಅವರ ಕುಟುಂಬ ಗಾಬರಿಗೊಂಡಿದೆ.

ಕಾಲ್ ಮಾಡಿದಾಗಲೆಲ್ಲಾ ಬಬಿತಾ ಫೋನ್ ಸ್ವಿಚ್ ಆಫ್ ಬಂದಿದ್ದರಿಂದ ಕುಟುಂಬ ಭಯದಲ್ಲಿ ಪೊಲೀಸರ ಸಹಾಯ ಪಡೆದುಕೊಂಡಿದೆ. ದೆಹಲಿ ಪೊಲೀಸರು ಆಕೆಯ ಗಂಡನನ್ನು ಪತ್ತೆ ಹಚ್ಚಿ ಬಂಧಿಸಿ ಪ್ರಶ್ನಿಸಿದಾಗ, ಅವನು ತನ್ನ ಹೆಂಡತಿಯನ್ನು ನೈನಿತಾಲ್ಗೆ ಕರೆದೊಯ್ದು ಬಂಡೆಯಿಂದ ತಳ್ಳಿದನೆಂದು ಒಪ್ಪಿಕೊಂಡಿದ್ದಾನೆ.

ಪೊಲೀಸರು ಈಗ ಆಕೆಯ ದೇಹವನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಆರೋಪಿ ರೈ ವಿರುದ್ಧ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights