ಫ್ಯಾಕ್ಟ್‌ಚೆಕ್ : ಇಬ್ಬರು ಸೈನಿಕರನ್ನು ಜೀವಂತವಾಗಿ ಸುಟ್ಟುಹಾಕುವ ಭಯಾನಕ ವಿಡಿಯೋ ಎಲ್ಲಿಯದು ಗೊತ್ತೇ?

ಹೃದಯ ವಿದ್ರಾವಕ ಘಟನೆ ಎಂದರೆ ಇದಕ್ಕಿಂತ ಭೀಕರ ಇರಲು ಸಾಧ್ಯ ಇದೆಯೇ, ಇಸ್ರೇಲಿನ ಯುದ್ಧ ಖೈದಿಗಳನ್ನು ಚಿತ್ರ ಹಿಂಸೆ ನೀಡಿ ಜೀವಂತ ಸುಡುತ್ತಿರುವ ಮನ ಕಲಕುವ ದೃಶ್ಯ. ಯುದ್ಧ ಸಂದರ್ಭದಲ್ಲಿ ಶತ್ರು ದೇಶದ ಸೈನಿಕರನ್ನು ಬಂದಿಸಲ್ಪಟ್ಟರೆ ಯುದ್ಧ ನಿಯಮದಂತೆ ಅವರನ್ನು ಯಾವ ರೀತಿ ನಡೆಸಿಕೊಳ್ಳಬೇಂಬ ನಿಬಂಧನೆ ಇರುತ್ತದೆ,ಆದರೆ ಈ ರೀತಿಯ ಪೈಶಾಚಿಕ ಕೃತ್ಯವನ್ನು ದೇವರು ಕೂಡ ಕ್ಷಮಿಸಲಾರ, ಇದು ಹಮಾಸ್ ಉಗ್ರರ ಅಟ್ಟಹಾಸ ಎಂಬ ಹೇಳಿಕೆಯೊಂದಿಗೆ ಇಬ್ಬರು ಯೋಧರನ್ನು ಜೀವಂತವಾಗಿ ದಹಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಇಬ್ಬರು ಸಮವಸ್ತ್ರದಲ್ಲಿರುವ ವ್ಯಕ್ತಿಗಳನ್ನು ಸರಪಳಿಯಿಂದ ಕಟ್ಟಿಹಾಕಿ ಜೀವಂತ ಸುಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗ ಪ್ರಸಾರವಾಗುತ್ತಿದ್ದು, ಹಮಾಸ್ ಉಗ್ರರು ಇಸ್ರೇಲ್‌ನ ಸೈನಿಕರನ್ನು ಅತೀ ಕ್ರೂರವಾಗಿ ಸುಟ್ಟುಹಾಕಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂ ವಾಟ್ಸಾಪ್ ಗೆ ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ ಈ ಭಯಾನಕ ಘಟನೆ ಹಮಾಸ್ ಗುಂಪಿನ ಕೃತ್ಯವೆ ಎಂದು  ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್ 2016 ರಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಗುಂಪು ಬಿಡುಗಡೆ ಮಾಡಿದ ಸುಮಾರು ಏಳು ವರ್ಷಗಳ ಹಳೆಯ ಕ್ಲಿಪ್‌ ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರು ಟರ್ಕಿಶ್ ಸೈನಿಕರನ್ನು ಜೀವಂತವಾಗಿ ಸುಡುತ್ತಿರುವ ದೃಶ್ಯಗಳು ಎಂದು ವರದಿಗಳು ಲಭ್ಯವಗಿವೆ.

ಈ ಭಯಾನಕ ವೀಡಿಯೊವನ್ನು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪು (ISIS) , ಉತ್ತರ ಸಿರಿಯಾದ “ಅಲೆಪ್ಪೊ ಪ್ರಾಂತ್ಯ” ದಲ್ಲಿ ಚಿತ್ರೀಕರಿಸಿ ಬಿಡುಗಡೆ ಮಾಡಿದೆ (2016) ಎಂದು ವರದಿಯಾಗಿದೆ. ಹಾಗಾಗಿ ಈ ದೃಶ್ಯಗಳು ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷಕ್ಕೆ ಸಂಬಂಧಿಸಿಲ್ಲ.

 

ಒಟ್ಟಾರೆಯಾಗಿ ಹೇಳುವುದಾದರೆ, 2016ರಲ್ಲಿ  ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪು (ISIS) ಇಬ್ಬರು ಟರ್ಕಿಶ್ ಸೈನಿಕರನ್ನು ಒತ್ತೆಯಾಳುಗಳಾಗಿ ಸೆರೆಹಿಡಿದು ನಂತರ ಜೀವಂತವಾಗಿ ಸುಟ್ಟುಹಾಕಿರುವ ಘಟನೆಯ ವಿಡಿಯೋ ದೃಶ್ಯಾವಳಿಗಳನ್ನು, ಹಮಾಸ್ ಗುಂಪು ಇಸ್ರೇಲ್ ಸೈನಿಕರನ್ನು ಜೀವಂತವಾಗಿ ಸುಟ್ಟುಹಾಕಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕೇಂದ್ರ ಸರ್ಕಾರದಿಂದ 3 ತಿಂಗಳ ಉಚಿತ ರೀಚಾರ್ಜ್ ಕೊಡುಗೆ ಎಂಬ ಸಂದೇಶದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights