ಫ್ಯಾಕ್ಟ್‌ಚೆಕ್ : ಕೇಂದ್ರ ಸರ್ಕಾರದಿಂದ 3 ತಿಂಗಳ ಉಚಿತ ರೀಚಾರ್ಜ್ ಕೊಡುಗೆ ಎಂಬ ಸಂದೇಶದ ಅಸಲೀಯತ್ತೇನು?

“ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಜನರು ಬಿಜೆಪಿಗೆ ಓಟು ಹಾಕಿ 2024ರಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ. ಅಕ್ಟೋಬರ್ 31 ಕೊನೆಯ ದಿನಾಂಕವಾಗಿದ್ದು, ಉಚಿತ ರೀಚಾರ್ಜ್ ಗಾಗಿ ಈ ಕೆಳಗಿನ ಲಿಂಕ್ ಒತ್ತಿ” ಎಂಬ ಸಂದೇಶವೊಂದು ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಾಗಿದ್ದರೆ ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಸಂದೇಶದಂತೆ ನಿಜವಾಗಿಯೋ BJP ಭಾರತೀಯರೆಲ್ಲರಿಗೂ ಮೂರು ತಿಂಗಳ ಉಚಿತ ರೀಚಾರ್ಜ್ ನೀಡುತ್ತಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ದೇಶಾದ್ಯಂತ ಎಲ್ಲಾ ರಾಜಕೀಯ ಪಕ್ಷಗಳ ಚಟುವಟಿಕೆ ಗರಿಗೆದರಿದ್ದು ಆಮಿಶಗಳ ಮೂಲಕ ಜನರ ಮತಗಳನ್ನು ತಮ್ಮತ್ತ ಸೆಳೆಯಲು ಈಗಾಗಲೇ ಕಾರ್ಯಸನ್ನದ್ದವಾಗಿವೆ. ಅದರಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಭಾರತೀಯರಿಗೆ ಪ್ರಧಾನಿ ಮೋದಿಯವರಿಂದ ಮೂರು ತಿಂಗಳ ಉಚಿತ ರೀಚಾರ್ಜ್ ಕೊಡುಗೆಯನ್ನು ನೀಡಿದ್ದಾರೆ ಎಂಬ ಜಾಹೀರಾತನ್ನು ಬಿಜೆಪಿ ನೀಡುತ್ತಿದೆ ಎಂಬ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ ಇಂದೊಂದು ವಂಚನೆಯ ಜಾಲ ಎಂದು ತಿಳಿದು ಬಂದಿದೆ

 

ಈ ಸುದ್ದಿಯ ಕುರಿತು ಫ್ಯಾಕ್ಟ್‌ ಚೆಕ್‌ ನಡೆಸಿದಾಗ ಮೊಸದ  ಜಾಲ ಬಯಲಾಗಿದೆ  ಸಂದೇಶದಲ್ಲಿ ಕಾಣಿಸುವ ಲಿಂಕ್ ಮೇಲ್ ಕ್ಲಿಕ್ ಮಾಡಿದಾಗ ನಿಮ್ಮ ಮೊಬೈಲ್ ನಂಬರ್ ನಮೂದಿಸಲು ಕೇಳುತ್ತದೆ. ನಂಬರ್ ಹಾಕಿದ ನಂತರ ರೀಚಾರ್ಜ್ ಸಕ್ಸಸ್‌ಫುಲ್ ಎಂದು ಬರುತ್ತದೆ. ಇದನ್ನು ಕನ್ಫರ್ಮ್ ಮಾಡಲು ವಾಟ್ಸಾಪ್‌ನಲ್ಲಿ ಈ ಸಂದೇಶವನ್ನು 10 ಜನರಿಗೆ ಕಳಿಸಬೇಕು ಎಂದು ಕೇಳುತ್ತದೆ ಆದರೆ ಇಷ್ಟಾದರೂ ರೀಚರ್ಜ್‌ ಆಗುವುದಿಲ್ಲ. ಹಾಗಾಗಿ ಇದೊಂದು ವಂಚನೆಯ ಜಾಲ ಎಂಬುದು ಸ್ಪಷ್ಟವಾಗದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತೀಯ ನಾಗರೀಕರಿಗೆ ಮೂರು ತಿಂಗಳ ಉಚಿತ ರೀಚಾರ್ಜ್ ಎಂಬುದು ಬಿಜೆಪಿಯ ಪರವಾಗಿ ಪ್ರಚಾರ ಮಾಡಲು ರೂಪಿಸಿದ ನಕಲಿ ವಂಚನೆಯ ಜಾಲ ಆಗಿದೆಯೇ ಹೊರತು ಇದರಿಂದ ಒಬ್ಬನೇ ಒಬ್ಬ ಭಾರತೀಯನಿಗೂ ಉಚಿತ ರೀಚಾರ್ಜ್ ಸಿಗುವುದಿಲ್ಲ. ಹಾಗಾಗಿ ಈ ಸಂದೇಶಗಳನ್ನು ನಂಬಿ ಇತರರಿಗೆ ಫಾರ್ವಡ್ ಮಾಡಲು ಹೋಗಬೇಡಿ, ಇದರಿಂದ ನಿಮ್ಮ ಅಮೂಲ್ಯ ಸಮಯ ಮತ್ತು ನೆಟ್ವರ್ಕ್ ಡ್ಯಾಟ ವ್ಯರ್ಥವಾಗುತ್ತದೆ ಅಷ್ಟೆ.

ಕೃಪೆ : ಕನ್ನಡ ಫ್ಯಾಕ್ಟ್‌ಚೆಕ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕಾಂಗ್ರೆಸ್‌ಗೆ ಮತ ನೀಡಿ ಎಂದು ಪ್ರಧಾನಿ ಮೋದಿ ಹೇಳುತ್ತಿರುವ ವಿಡಿಯೋ ವೈರಲ್! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights