ಬಿಗ್ ಬಾಸ್ ಮನೆಯಲ್ಲಿ ಟೆಲಿಫೋನ್ ಬೂತ್ : ಯಾರು? ಯಾರ ಜೊತೆ ಮಾತನಾಡಿದ್ರು..?
ಬಿಗ್ ಬಾಸ್ ಮನೆಯಲ್ಲಿ ಟೆಲಿಫೋನ್ ಬೂತ್ ನಿರ್ಮಾಣವಾಗಿದ್ದು ಮನೆಯ ಸದಸ್ಯರ ಜೊತೆಗೆ ಬಿಗ್ ಬಾಸ್ ಫೋನ್ ಕಾಲ್ ನಲ್ಲಿ ಮಾತನಾಡುತ್ತಿದ್ದಾರೆ. ಇದರಿಂದಾಗಿ ಮನೆಯ ಸದಸ್ಯರಲ್ಲಿ ಹೊಸ ಹುಮ್ಮಸ್ಸು ಬಂದಂತಾಗಿದೆ.
ಹೌದು.. ಸ್ಪರ್ಧಿಗಳ ಮಧ್ಯೆ ಆಟ ಕಠಿಣವಾಗುತ್ತಿದೆ. ವೈಯಕ್ತಿ ಆಟಗಳು ಹೆಚ್ಚಾಗುತ್ತಿವೆ. ಹೀಗಾಗಿ ಇನ್ಮುಂದೆ ಸದಸ್ಯರು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಇದರ ಮಧ್ಯೆ ಸ್ಪರ್ಧಿಗಳಲ್ಲಿ ಹೊಸ ಉತ್ಸಾಹ ತರಲು ಬಿಗ್ ಬಾಸ್ ಮನೆಯಲ್ಲಿ ಟೆಲಿಫೋನ್ ಬೂತ್ ನಿರ್ಮಾಣವಾಗಿದೆ. ಪ್ರತೀ ಬಾರಿ ಮನೆಯ ಎಲ್ಲಾ ಸದಸ್ಯರಿಗೆ ಕೇಳುವಂತೆ ತೆರೆದ ಧ್ವನಿ ವರ್ದಕಗಳಲ್ಲಿ ಬಿಗ್ ಬಾಸ್ ಧ್ವನಿ ಕೇಳಿ ಬರುತ್ತಿತ್ತು. ಯಾವುದೇ ಪ್ರತಿಕ್ರಿಯೆಗೆ ಅಷ್ಟಾಗಿ ಅವಕಾಶ ಇರಲಿಲ್ಲ.
ಆದರೀಗ ಮನೆಯ ಸದಸ್ಯರೊಂದಿಗೆ ಬಿಗ್ ಬಾಸ್ ಕರೆಯ ಮೂಲಕ ಪ್ರತ್ಯೇಕವಾಗಿ ಮಾತನಾಡುತ್ತಿದ್ದಾರೆ. ಸ್ಪರ್ಧಿಗಳ ಮಾತಿಗೆ ಸ್ಪಂದಿಸುತ್ತಿದ್ದಾರೆ.
ಪ್ರತೀ ಬಾರಿ ಕರೆ ಬಂದಾಗಲೆಲ್ಲಾ ಫೋನ್ ರಿಸೀವ್ ಮಾಡಿದ ಕೆಲ ಸದಸ್ಯರಿಗೆ ಬಿಗ್ ಬಾಸ್ ಒಂದೊಂದು ಕೆಲಸವನ್ನು ನೀಡುತ್ತಿದ್ದಾರೆ. ದಿವ್ಯಾ ಸುರೇಶ್ ಗೆ ನೀಲಿ ಬಣ್ಣದ ಬಟ್ಟೆ ತೊಡಲು, ವೈಷ್ಣವಿಗೆ ಬಿಗ್ ಬಾಸ್ ಗೆ ಸೇರಿದ ಶಬ್ದ ಮಾಡುವ ಸಣ್ಣ ವಸ್ತುವನ್ನು ಹುಡಿಕಿಕೊಡಲು ತಿಳಿಸಿದ್ದರು. ಆದರೆ ಈ ಕೆಲಸ ನಿರ್ವಹಿಸುವಲ್ಲಿ ವೈಷ್ಣವಿ ವಿಫಲವಾದ ಬಳಿಕ ಶುಭಾ ಪೂಂಜಾಗೆ ಇದನ್ನು ನೀಡಿದ್ದಾರೆ. ಶುಭಾ ಕೂಡ ಈ ವಸ್ತುವನ್ನು ಹುಡುಕುವುದು ಕಷ್ಟವೆಂದೆನಿಸುತ್ತದೆ. ಹಾಗಾದ್ರೆ ಕೊಟ್ಟ ಕೆಲಸ ಮಾಡದೇ ಹೋದಲ್ಲಿ ಬಿಗ್ ಬಾಸ್ ಶಿಕ್ಷೆ ನೀಡ್ತಾರಾ? ಅಥವಾ ಮನೆಯಿಂದಲೇ ಹೊರ ಕಳುಹಿಸುತ್ತಾರಾ? ಅನ್ನೋ ಪ್ರಶ್ನೆಗಳು ಮನೆಯ ಸದಸ್ಯರಿಗೆ ಮೂಡಿವೆ.
ಏನೇ ಆಗಲಿ ಬಿಗ್ ಬಾಸ್ ಟೆಲಿಫೋನ್ ಬೂತ್ ನಿಂದ ಮನೆಯ ಸದಸ್ಯರಿಗೆ ಒಳ್ಳೆಯ ಸಂದೇಶಗಳೂ ರವಾನೆಯಾಗಬಹುದು. ಕೊಟ್ಟ ಕೆಲಸ ಮಾಡದವರಿಗೆ ಕೆಟ್ಟ ಸಂದೇಶಗಳೂ ಬರಬಹುದು. ಒಟ್ಟನಲ್ಲಿ ಟೆಲಿಫೋನ್ ಬೂತ್ ಮನೆಯ ಸದಸ್ಯರಿಗೆ ಕುತೂಹಲ ಮೂಡಿಸಿರುವುದು ಮಾತ್ರ ಸುಳ್ಳಲ್ಲ.