15 ಕೋಟಿ ರೂ ವಂಚನೆ; ಮಾಸ್‌ ಇನ್ಫ್ರಾ ಅಧ್ಯಕ್ಷರ ಬಂಧನ!

ಒಡಿಶಾದಲ್ಲಿ ಹೂಡಿಕೆದಾರರಿಗೆ 15 ಕೋಟಿ ರೂ. ಮೋಸ ಮಾಡಿದ ಆರೋಪದ ಮೇಲೆ ಕೊಲ್ಕತ್ತಾದ ನ್ಯೂ ಗರಿಯಾ ಪ್ರದೇಶದ ಮಾಸ್ ಇನ್ಫ್ರಾ ರಿಯಾಲ್ಟಿ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರತಾಪ್ ಕುಮಾರ್ ಬಿಸ್ವಾಲ್ ಅವರನ್ನು ಅಪರಾಧ ವಿಭಾಗದ ಆರ್ಥಿಕ ಅಪರಾಧ ಶಾಖೆ  (EOW) ಬಂಧಿಸಿದೆ.

ಬಿಸ್ವಾಲ್ ಅವರನ್ನು ಭಾನುವಾರ ಬಂಧಿಸಲಾಗಿದೆ. ಅವರನ್ನು ದಕ್ಷಿಣ 24 ಪರಗಣಗಳಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಸೋಮವಾರ ಒಡಿಶಾಗೆ ಸ್ಥಳಾಂತರಿಸಲಾಯಿತು. ಒಡಿಶಾ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಆಫ್ ಡಿಪಾಸಿಟರ್ಸ್ (ಹಣಕಾಸು ಸಂಸ್ಥೆಗಳಲ್ಲಿ) ಕಾಯ್ದೆಯಡಿ ಆರೋಪಿಯನ್ನು ಬಾಲಸೋರ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಬಾಲಸೋರ್ ಜಿಲ್ಲೆಯ ಸೊರೊದ ಸುಕದೇವ್ ಹೊಟಾ ಅವರ ದೂರಿನ ಆಧಾರದ ಮೇಲೆ ಆಗಸ್ಟ್ 30, 2019 ರಂದು ಬಿಸ್ವಾಲ್ ಮತ್ತು ಕಂಪನಿಯ ಇತರ ಆರು ನಿರ್ದೇಶಕರ ವಿರುದ್ಧ ಇಒಡಬ್ಲ್ಯೂ ಪ್ರಕರಣ ದಾಖಲಿಸಿದೆ. ಕಂಪನಿಯ ವಿವಿಧ ಯೋಜನೆಗಳ ಅಡಿಯಲ್ಲಿ ಹೆಚ್ಚಿನ ಆದಾಯವನ್ನು ನೀಡುವ ಭರವಸೆ ನೀಡಿ ಆರೋಪಿಗಳು ಹಲವು ಕೋಟಿ ರೂಪಾಯಿಗಳನ್ನು ಜನರಿಂದ ಸಂಗ್ರಹಿಸಿದ್ದಾರೆ ಎಂದು ಹೋಟಾ ಆರೋಪಿಸಿದ್ದರು.

ಮಾಸ್ ಇನ್ಫ್ರಾವನ್ನು ಸೆಪ್ಟೆಂಬರ್ 2010 ರಲ್ಲಿ ಕೋಲ್ಕತ್ತಾದ ಕಂಪೆನಿಗಳ ರಿಜಿಸ್ಟ್ರಾರ್‌ನಲ್ಲಿ ನೋಂದಾಯಿಸಲಾಗಿದೆ. ಅದು ಪಶ್ಚಿಮ ಬಂಗಾಳದ ಬಾರಸತ್ ಪೊಲೀಸ್ ಮಿತಿಯಲ್ಲಿ ತನ್ನ ನೋಂದಾಯಿತ ಕಚೇರಿಯನ್ನು ಹೊಂದಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

2012 ರಲ್ಲಿ, ಸಂಸ್ಥೆಯ ಹೆಸರನ್ನು ಹ್ಯೂಮನ್ ವೆಲ್ಫೇರ್ ಕ್ರೆಡಿಟ್ ಮತ್ತು ಥ್ರಿಫ್ಟ್‌ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಎಂದು ಬದಲಾಯಿಸಲಾಯಿತು. ಹ್ಯೂಮನ್ ವೆಲ್ಫೇರ್ ಕ್ರೆಡಿಟ್ ನ ನೋಂದಾಯಿತ ಕಚೇರಿ ದೆಹಲಿಯ ಲಕ್ಷ್ಮಿ ನಗರದಲ್ಲಿತ್ತು ಮತ್ತು ಬಿಸ್ವಾಲ್ ಅದರ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ: ಬಿಹಾರ ಎನ್‌ಡಿಎಯಲ್ಲಿ ಬಿರುಕು? ಶಾಸಕಾಂಗ ಸಭೆ ಬಹಿಷ್ಕರಿಸಿದ ವಿಐಪಿ ಮುಖ್ಯಸ್ಥ ಮುಖೇಶ್ ಸಾಹ್ನಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights