ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ ಸಿಎಂ : ಇಂದೇ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್?
ರಾಜ್ಯದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಪಟ್ಟಕ್ಕೇರಿ ಐದು ದಿನಗಳಾದರೂ ಇನ್ನೂ ಕೂಡ ಸಚಿವ ಸಂಪುಟ ರಚನೆಯಾಗಿಲ್ಲ. ಇಂದು ಅಥವಾ ನಾಳೆ ಸಂಪುಟ ರಚನೆಯಾಗುವ ಸಾಧ್ಯತೆ ಇದ್ದು ಸಚಿವರ ಸಂಭಾವ್ಯ ಪಟ್ಟಿಯೊಂದಿಗೆ ಸಿಎಂ ದೆಹಲಿಗೆ ಹಾರಿದ್ದಾರೆ. ಜೊತೆಗೆ ಇಂದೇ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ ಆಗುವ ಸಾಧ್ಯತೆ ಇದೆ.
ಹೌದು.. ಬಸವರಾಜ್ ಬೊಮ್ಮಾಯಿ ಸಿಎಂ ಸ್ಥಾನ ಅಲಂಕರಿಸಿದ ಬಳಿಕ ಎರಡನೇ ಬಾರಿಗೆ ದೆಹಲಿಗೆ ಹಾರಿದ್ದಾರೆ. ಸಂಪುಟ ರಚನೆಗೆ ಹೈಕಮಾಂಡ್ ಒಪ್ಪಿಗೆ ಪಡೆಯಲು ಸಿಎಂ ದೆಹಲಿಗೆ ತೆರಳಿದ್ದು ಒಂದು ವೇಳೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ಇಂದೇ ನೂತನ ಸಚಿವರ ಪಟ್ಟಿಯೊಂದಿಗೆ ಸಿಎಂ ರಾಜ್ಯಕ್ಕೆ ಆಗಮಿಸಲಿದ್ದಾರೆ. ಇಂದು ಅಥವಾ ನಾಳೆ ಸಚಿವ ಸಂಪುಟ ರಸವೆಯಾಗುವ ಸಾಧ್ಯತೆ ಇದೆ.
ಇದರ ಮಧ್ಯೆ ಸಚಿವಾಕಾಂಕ್ಷಿಗಳು ಮಂತ್ರಿಗಿರಿಗೆ ಕೊನೆ ಹಂತದ ಕಸರತ್ತು ಮಾಡುತ್ತಿದ್ದಾರೆ. ಪ್ರಬಲ ಸಚಿವಾಕಾಂಕ್ಷಿಗಳು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದು, ಆದರೆ ಮಂತ್ರಿ ಮಂಡಲಕ್ಕೆ ಆಯ್ಕೆಯಾಗುವವರಿಗೆ ಮಾನದಂಡಗಳೇನು ಎನ್ನುವುದು ಮಾತ್ರ ಯಾರಿಗೂ ಗೊತ್ತಿಲ್ಲ. ಇನ್ನೂ ಸಚಿವಾಂಕ್ಷಿಗಳ ಸಾಂಭಾವ್ಯ ಪಟ್ಟಿಯಲ್ಲಿ ಮೂಲ ಬಿಜೆಪಿಗರ ಜೊತೆಗೆ ಕೆಲ ವಲಸೆ ಬಿಜೆಪಿಗರ ಹೆಸರುಗಳು ಇವೆ ಎನ್ನಲಾಗುತ್ತಿದೆ. ಮಾತ್ರವಲ್ಲದೇ ಬಿಎಸ್ ವೈ ಕೋಟಾದಡಿ ಸಚಿವ ಸ್ಥಾನ ಸಿಗುತ್ತೆ ಎನ್ನಲಾಗುತ್ತಿದೆ. ಆದರೆ ಹೈಕಮಾಂಡ್ ಬಿಎಸ್ ವೈ ಕೋಟಾದಡಿ ಬಂದವರಿಗೆ ಮಂತ್ರಿಗಿರಿ ಕೊಡುತ್ತಾ ಅಥವಾ ಕೈ ಬಿಡುತ್ತಾ ಅನ್ನೋದು ಕುತೂಹಲ ಮೂಡಿಸಿದೆ.
ಮೂಲಗಳ ಪ್ರಕಾರ, 2 ಹಂತಗಳಲ್ಲಿ ಸಂಪುಟ ರಚನೆಯಾಗುವ ಸಂಭವ ಇದೆ. ಮೊದಲ ಹಂತದಲ್ಲಿ 20ರಿಂದ 25 ಮಂದಿ ಸಂಪುಟ ಸೇರುವ ಸಾಧ್ಯತೆಗಳಿವೆ. 10ರಿಂದ 12 ಸಚಿವರನ್ನು ಕೈಬಿಡಲಿದ್ದು, ಇದರಲ್ಲಿ ಇಬ್ಬರಿಂದ ಮೂವರು ವಲಸಿಗರು ಇರಲಿದ್ದಾರೆ ಎನ್ನಲಾಗಿದೆ.
ಸಮುದಾಯವಾರು ಪ್ರಾತಿನಿದ್ಯಕ್ಕೆ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.8+7+7+7+4 =33 ಸೂತ್ರದಡಿ ಸಚಿವ ಸ್ಥಾನಕ್ಕೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ಲಿಂಗಾಯತರಿಗೆ-8, ಒಕ್ಕಲಿಗರಿಗೆ-7, ದಲಿತರಿಗೆ-7,
ಹಿಂದುಳಿದವರ್ಗದ ಶಾಸಕರಿಗೆ -7 ಸ್ಥಾನ ಹಾಗೂ ಜೈನ, ದೇವಾಂಗ ಸೇರಿ ಉಳಿದವರಿಗೆ 4 ಸ್ಥಾನ ನೀಡುವ ಲೆಕ್ಕಾಚಾರದ ಹರಿದಾಡುತ್ತಿದೆ. ಈ ಪಂಚ ಸೂತ್ರದಡಿ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಒಂದೆಡೆ ರಾಜ್ಯದಲ್ಲಿ ಪ್ರವಾಹ ಪರಿಹಾರ ಕಾರ್ಯಗಳು ಆಗಬೇಕಾಗಿದೆ. ಮತ್ತೊಂದೆಡೆ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಆತಂಕ ಕೂಡ ಎದುರಾಗಿದೆ. ಹೀಗಾಗಿ ರಾಜ್ಯ ಸಚಿವ ಸಂಪುಟ ಶೀಘ್ರ ರಚನೆ ಆಗಲೇಬೇಕಾಗಿದೆ.
# ಸಮುದಯವಾರು ಹರಿದಾಡುತ್ತಿರುವ ಹೆಸರು:
ಲಿಂಗಾಯತ ಸಮುದಾಯ:
ಅರವಿಂದ ಬೆಲ್ಲದ್
ಬಸನಗೌಡ ಪಾಟೀಲ್ ಯತ್ನಾಳ್
ತಿಪ್ಪಾರೆಡ್ಡಿ
ಮುರುಗೇಶ್ ನಿರಾಣಿ
ಉಮೇಶ್ ಕತ್ತಿ
ಲಕ್ಷ್ಮಣ ಸವದಿ/ಆನಂದ ಮಾಮನಿ
ಜೆ.ಸಿ.ಮಾಧುಸ್ವಾಮಿ/ವೀರಣ್ಣ ಚರಂತಿಮಠ
ಎಸ್.ವಿ.ರವೀಂದ್ರ ನಾಥ್/ಬಿಸಿ ನಾಗೇಶ್
ಒಕ್ಕಲಿಗ ಸಮುದಾಯ:
ಸಿ.ಪಿ.ಯೋಗೇಶ್ವರ್
ಆರ್.ಅಶೋಕ್
ಅಶ್ವಥ್ ನಾರಾಯಣ್
ನಾರಾಯಣಗೌಡ
ಎಸ್.ಟಿ.ಸೋಮಶೇಖರ್
ಡಾ.ಕೆ.ಸುಧಾಕರ್
ಕೆ.ಗೋಪಾಲಯ್ಯ/ಎಸ್.ಆರ್.ವಿಶ್ವನಾಥ್
ಎಸ್ಸಿ-ಎಸ್ಟಿ ಸಮುದಾಯ:
ಶ್ರೀರಾಮುಲು
ರಮೇಶ್ ಜಾರಕಿಹೊಳಿ/ಬಾಲಚಂದ್ರ ಜಾರಕಿಹೊಳಿ
ಗೋವಿಂದ ಕಾರಜೋಳ/ಎಂ.ಪಿ.ಕುಮಾರಸ್ವಾಮಿ
ಅರವಿಂದ ಲಿಂಬಾವಳಿ
ಎಸ್.ಅಂಗಾರ
ರಾಜುಗೌಡ/ಶಿವನಗೌಡ ನಾಯಕ್
ಪಿ.ರಾಜೀವ್/ದುರ್ಯೋಧನ ಐಹೊಳೆ
ಹಿಂದುಳಿದ ವರ್ಗ:
ಎಂಟಿಬಿ ನಾಗರಾಜ್
ಭೈರತಿ ಬಸವರಾಜು
ಮುನಿರತ್ನಂ
ಆರ್.ಶಂಕರ್/ಕೆ.ಎಸ್.ಈಶ್ವರಪ್ಪ
ಸುನೀಲ್ ಕುಮಾರ್/ಕುಮಾರ ಬಂಗಾರಪ್ಪ
ಪೂರ್ಣಿಮಾ ಶ್ರೀನಿವಾಸ್
ಇತರೆ ಸಮುದಾಯ:
ಎಸ್.ಸುರೇಶ್ ಕುಮಾರ್
ಡಾ.ರಾಮದಾಸ್
ಆನಂದ್ ಸಿಂಗ್
ಶಿವರಾಂ ಹೆಬ್ಬಾರ್

