ಬಿಗ್ ಬಾಸ್ ಮನೆಯಿಂದ ಶಮಂತ್-ಶುಭಾ ಪೂಂಜಾ ಔಟ್ : ಮುಂದಿನ ವಾರ ಗ್ರ್ಯಾಂಡ್ ಫಿನಾಲೆ!

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಇನ್ನೂ ಒಂದು ವಾರ ಮಾತ್ರ ಬಾಕಿ ಇದ್ದು, ಈ ವಾರ ಬಿಗ್ ಬಾಸ್ ಮನೆಯಿಂದ ಶಮಂತ್ ಬ್ರೋ ಗೌಡ ಔಟ್ ಆಗಿದ್ದಾರೆ.

ರೋಚಕ ಘಟ್ಟಕ್ಕೆ ತಲುಪಿರುವ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ವಾರ ಬಾಕಿ ಉಳಿದಿದೆ. ಸದ್ಯ ‘ಬಿಗ್ ಬಾಸ್’ ಮನೆಯಲ್ಲಿ ಒಟ್ಟು 6 ಸ್ಪರ್ಧಿಗಳಿದ್ದಾರೆ. ಎಂಟು ಸ್ಪರ್ಧಿಗಳ ಪೈಕಿ ಈ ಬಾರಿ ಇಬ್ಬರು ಮನೆಯಿಂದ ಹೊರಬಂದಿದ್ದಾರೆ. ಇನ್ನುಳಿದ ಆರು ಸ್ಪರ್ಧಿಗಳು ಡೇಂಜರ್ ಝೋನ್‌ನಲ್ಲಿದ್ದಾರೆ. ಈ ವಾರಾಂತ್ಯದಲ್ಲಿ ಶುಭಾ ಪೂಂಜಾ ಹಾಗೂ ಶಮಂತ್ ಬ್ರೋ ಗೌಡ ಔಟ್ ಆಗಿದ್ದು ಈ ಹಂತದಲ್ಲಿ ಟಾಪ್ 5 ಹಂತಕ್ಕೆ ಯಾರೆಲ್ಲಾ ಲಗ್ಗೆ ಇಡುತ್ತಾರೆ ಅಂತ ಪ್ರೇಕ್ಷಕರು ಲೆಕ್ಕ ಹಾಕುತ್ತಿದ್ದಾರೆ.

ಅರವಿಂದ್ ಕೆಪಿ,  ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಮಂಜು ಪಾವಗಡ, ಪ್ರಶಾಂತ್ ಸಂಬರಗಿ ಹಾಗೂ ವೈಷ್ಣವಿ ಮೇಲೆ ಎಲಿಮಿನೇಷನ್ ತೂಗುಕತ್ತಿ ನೇತಾಡುತ್ತಿದೆ.

‘ಬಿಗ್ ಬಾಸ್’ ಮನೆಯಲ್ಲಿ ಭರ್ಜರಿ ಮನರಂಜನೆ ನೀಡಿರುವ ಮಂಜು ಪಾವಗಡ, ಎಲ್ಲಾ ಆಟಗಳಲ್ಲೂ ಚೆನ್ನಾಗಿ ಪರ್ಫಾಮ್ ಮಾಡಿರುವ ಅರವಿಂದ್ ವೀಕ್ಷಕರ ಪಾಲಿಗೆ ಗೆಲುವಿನ ಫೇವರಿಟ್ ಸ್ಪರ್ಧಿಗಳಾಗಿದ್ದಾರೆ. ಈ ಮಧ್ಯೆ ನೇರವಾಗಿ ಮಾತನಾಡುವ ಪ್ರಶಾಂತ್ ಸಂಬರಗಿ, ಸದಾ ಸಂಯಮದಿಂದ ನಡೆದುಕೊಂಡ ವೈಷ್ಣವಿ, ತುಂಟಾಟ, ತರ್ಲೆ, ತಮಾಷೆ ಮಾಡಿಕೊಂಡು ವಿನ್ನರ್ ರೇಸ್‌ನಲ್ಲಿದ್ದಾರೆ. ಇನ್ನೂ, ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗಗೂ ಫ್ಯಾನ್ ಫಾಲೋವಿಂಗ್ ಏನೂ ಕಮ್ಮಿ ಇಲ್ಲ. ಏನೇ ಇದ್ದರೂ… ಯಾರಿಗೆ ಹೆಚ್ಚಿನ ಮತ ಸಿಗುತ್ತದೋ, ಅವರು ‘ಬಿಗ್ ಬಾಸ್’ ವಿನ್ನರ್ ಆಗುವುದು ಖಚಿತ. ಈ ಬಾರಿ ‘ಬಿಗ್ ಬಾಸ್’ ವಿನ್ನರ್ ಟ್ರೋಫಿಗೆ ಯಾರು ಮುತ್ತಿಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights