ಅಪ್ರಾಪ್ತ ಬಾಲಕಿಯ ಮೇಲೆ ಆರು ಮಂದಿ ಕಾಮುಕರಿಂದ ಅತ್ಯಾಚಾರ; ಮೂವರ ಬಂಧನ!

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ನಾಲ್ಕು ಆಟೋರಿಕ್ಷಾ ಚಾಲಕರು ಸೇರಿದಂತೆ ಆರು ಜನರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮನೆಯಲ್ಲಿ ಜಗಳವಾದ ಕಾರಣ ಮನೆಯಿಂದ ಹೊರಬಂದಿದ್ದ ಬಾಲಕಿಯ ಮೇಲೆ ಟಿಮ್ಕಿ ಪ್ರದೇಶದ ಕೊಠಡಿಯಲ್ಲಿ ಗುರುವಾರ ರಾತ್ರಿ ನಾಲ್ವರು ಅತ್ಯಾಚಾರ ಎಸಗಿದ್ದಾರೆ. ನಂತರ, ಇಬ್ಬರು ಪುರುಷರು ತಮ್ಮ ಆಟೋರಿಕ್ಷಾದಲ್ಲಿ ಮೇಯೊ ಆಸ್ಪತ್ರೆ ಚೌಕದ ಬಳಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಎಸ್ಸಿ ಸಮುದಾಯಕ್ಕೆ ಸೇರಿದ ಬಾಲಕಿ, ತನ್ನ ಅತ್ತಿಗೆ ಜೊತೆ ಜಗಳವಾಡಿಕೊಂಡ ನಂತರ ತನ್ನ ಮನೆ ಬಿಟ್ಟು ಬಂದಿದ್ದಳು.

ಆಕೆಯ ಪರಿಚಯಸ್ಥರೊಬ್ಬರು ಆಕೆಯನ್ನು ತನ್ನ ಆಟೋರಿಕ್ಷಾದಲ್ಲಿ ಲೋಹಾಪೂಲ್ ಪ್ರದೇಶಕ್ಕೆ ಕರೆತಂದಿದ್ದಾರೆ. ಅಲ್ಲಿ ಆತ ಇತರ ಆಟೋರಿಕ್ಷಾ ಚಾಲಕರನ್ನು ಭೇಟಿ ಮಾಡಿದ್ದು, ಕೃತ್ಯ ಎಸಗಿದ್ದಾರೆ. ಆತನನ್ನು ಶಹನವಾಜ್ ಅಲಿಯಾಸ್ ಸನಾ ಮೊಹಮದ್ ರಶೀದ್ (25) ಎಂದು ಗುರುತಿಸಲಾಗಿದೆ.

ಆತ, “ಆಕೆಗೆ ಆಶ್ರಯ ಒದಗಿಸುವ ನೆಪದಲ್ಲಿ ತನ್ನ ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದಾರೆ. ನಂತರ ಅಕ್ರಮ ಮದ್ಯದ ಅಂಗಡಿಗೆ ತರಳಿ ಮದ್ಯ ಸೇವಿಸಿದ್ದಾನೆ ಮತ್ತುಬಾಲಕಿಗೂ ಕುಡಿಯಲು ಒತ್ತಾಯಿಸಿದ್ದಾನೆ” ಎಂದು ಅಧಿಕಾರಿ ಹೇಳಿದ್ದಾರೆ.

ನಂತರ ಆತ ಆಕೆಯನ್ನು ನಾಗ್ಪುರ ರೈಲ್ವೇ ನಿಲ್ದಾಣದಲ್ಲಿ ಲೋಡರ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಇಬ್ಬರು ಸ್ನೇಹಿತರ ಬಾಡಿಗೆ ಮನೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಶಹನವಾಜ್, ಆತನ ಸ್ನೇಹಿತ ಮೊಹಮದ್ ತೌಶಿಫ್ ಮೊಹಮ್ಮದ್ ಯೂಸುಫ್ (26) ಮತ್ತು ಇಬ್ಬರು ಅತ್ಯಾಚಾರ ಎಸಗಿದ್ದಾರೆ. ನಂತರ, ಶಹನವಾಜ್ ತನ್ನ ಆಟೋದಲ್ಲಿ ಬಾಲಕಿಯನ್ನು ಮೇಯೊ ಆಸ್ಪತ್ರೆ ವೃತ್ತದ ಬಳಿ ಬಿಟ್ಟು ಹೋಗಿದ್ದಾನೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

ಆತ ಆಕೆಯನ್ನು ಬಿಟ್ಟು ಹೋದ ಬಳಿಕ, ಇನ್ನಿಬ್ಬರು ಆಟೋರಿಕ್ಷಾ ಚಾಲಕರು ಬಾಲಕಿಯನ್ನು ಬಲವಂತವಾಗಿ ತಮ್ಮ ಆಟೋದಲ್ಲಿ ಕರೆದೊಯ್ದಿದ್ದಾರೆ. ಅಲ್ಲಿ ಅವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶಿ ಮಹಿಳೆಯ ಮೇಲೆ ‘ಅತ್ಯಾಚಾರ’; ಬಿಎಸ್‌ಎಫ್ ಯೋಧನ ಬಂಧನ!

ಅದೃಷ್ಟವಶಾತ್ ತಡರಾತ್ರಿಯಲ್ಲಿ ಬಾಲಕಿ ಒಬ್ಬಳೆ ನಿಂತಿರುವುದನ್ನು ಗಮಸಿದ ಇಬ್ಬರು ಯುವಕರು ಆಕೆಗೆ ಸಹಾಯ ಮಾಡಿದ್ದು, ಆಕೆ ತಮ್ಮ ಮನೆಗೆ ತಲುಪಲು ಹಣ ನೀಡಿ, ರೈಲು ನಿಲ್ದಾಣಕ್ಕೆ ಕಳಿಸಿದ್ದಾರೆ.

ಆಕೆ ಟಿಕೆಟ್‌ ಖರೀದಿಸಿ ಫ್ಲಾಟ್‌ಫಾರಂಗೆ ಬಂದಾಗ ಗಸ್ತು ತಿರುಗುತ್ತಿದ್ದ ರೈಲ್ವೇ ಪೊಲೀಸರು (GRP) ಆಕೆಯನ್ನು ಗಮನಿಸಿದ್ದಾರೆ. ಆಕೆಗೆ ಏನೋ ಸಮಸ್ಯೆಯಾಗಿದೆ ಎಂದು ಅರಿತ ಅವರು,  ಬಾಲಕಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಕ್ಕಳ ಆರೈಕೆ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

ಜಿಆರ್‌ಪಿ ಭಾನುವಾರ ಮೊಮಿನ್ಪುರ ಪ್ರದೇಶದ ನಿವಾಸಿಗಳಾದ ಶಹನವಾಜ್, ಯೂಸುಫ್ ಮತ್ತು ಮೊಹಮದ್ ಮುಶೀರ್ ಎಂಬ ಆರೋಪಿಗಳನ್ನು ಬಂಧಿಸಿ ಸೀತಾಬುಲ್ಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇಬ್ಬರು ಲೋಡರ್‌ಗಳು ಸೇರಿದಂತೆ ಇತರ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಸೀತಾಬುಲ್ಡಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 366 ಎ (ಅಪ್ರಾಪ್ತ ವಯಸ್ಸಿನ ಬಾಲಕಿಯರ ಅಪಹರಣ), 376 (ಅತ್ಯಾಚಾರಕ್ಕೆ ಶಿಕ್ಷೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಎಸ್‌ಸಿ ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಪ್ರಕರಣ; ಅಪರಾಧಿ ಪಾದ್ರಯನ್ನೇ ವಿವಾಹವಾಗಲು ಸಂತ್ರಸ್ತೆ ಸುಪ್ರೀಂನಲ್ಲಿ ಮನವಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights