ಮೇಲ್ಜಾತಿಯವರ ಕಾಲಿಗೆ ಬಿದ್ದ ದಲಿತ ಸರ್ಕಾರಿ ನೌಕರ : ವಿಡಿಯೋ ವೈರಲ್!

ಕೊಯಮತ್ತೂರಿನ ಸರ್ಕಾರಿ ಕಚೇರಿಯಲ್ಲಿ ದಲಿತ ನೌಕರನೊಬ್ಬ ಮೇಲ್ಜಾತಿಯ ವ್ಯಕ್ತಿಯ ಕಾಲಿಗೆ ಬೀಳುವ ವೀಡಿಯೋ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದ್ದು, ತನಿಖೆಗೆ ಆದೇಶಿಸಲಾಗಿದೆ.

ಕೊಯಂಬತ್ತೂರಿನ ಅಣ್ಣೂರು ತಾಲ್ಲೂಕಿನ ಒಟ್ಟಾರಪಾಳ್ಯಂ ಗ್ರಾಮದಲ್ಲಿನ ಗ್ರಾಮ ಆಡಳಿತ ಕಚೇರಿಯಲ್ಲಿ ಶುಕ್ರವಾರ ಈ ಜಾತಿ ತಾರತಮ್ಯದ ಆಪಾದಿತ ಪ್ರಕರಣ ನಡೆದಿದೆ.

ಗ್ರಾಮ ಆಡಳಿತಾಧಿಕಾರಿ ಕಲೈ ಸೆಲ್ವಿ ಮತ್ತು ಸಹಾಯಕ ಅಧಿಕಾರಿ ಮುತ್ತುಸಾಮಿಯೊಂದಿಗೆ ಭೂ ದಾಖಲೆಗಳನ್ನು ಪರಿಶೀಲಿಸಲು ಕಚೇರಿಗೆ ಆಗಮಿಸಿದ್ದ ಗೋಪಾಲಸಾಮಿ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಮುತ್ತುಸ್ವಾಮಿ ಗೋಪಾಲಸಾಮಿಯನ್ನು ಅಗೌರವದಿಂದ ಮಾತನಾಡದಂತೆ ಕೇಳಿಕೊಂಡರು. ಮುತ್ತುಸ್ವಾಮಿ ಗೋಪಾಲಸಾಮಿಯನ್ನು ಎಳೆದಾಡಿದ್ದರಿಂದಾಗಿ ವಿಷಯ ಉಲ್ಬಣಗೊಂಡಿದೆ. ಗೋಪಾಲಸಾಮಿ ಅವರು ಮುತ್ತುಸ್ವಾಮಿ ವಿರುದ್ಧ ಜಾತಿ ನಿಂದನೆಗಳನ್ನು ಬಳಸಲಾರಂಭಿಸಿದ್ದಾರೆ.

ವೈರಲ್ ಆದ ವೀಡಿಯೋದಲ್ಲಿ ಗೋಪಾಲಸಾಮಿ ಅವರು ಮುತ್ತುಸಾಮಿಯನ್ನು ಕ್ಷಮಿಸುವಂತೆ ಕೇಳಿ ಕಾಲಿಗೆ ಬಿದ್ದಿದ್ದಾರೆ.

ಘಟನೆಯನ್ನು ಗಮನಿಸಿದ ಕೊಯಮತ್ತೂರು ಕಲೆಕ್ಟರ್ ತನಿಖೆಗೆ ಆದೇಶಿಸಿದ್ದಾರೆ. ವಿಎಒ ಕಚೇರಿಯಲ್ಲಿ ಏನಾಯಿತು ಎಂಬುದರ ಕುರಿತು ಕೊಯಮತ್ತೂರು ಜಿಲ್ಲೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ಎಸ್ಪಿ ಅವರಿಗೆ ಕೊಯಮತ್ತೂರು ಕಲೆಕ್ಟರ್ ಆದೇಶಿಸಿದ್ದಾರೆ.

https://trinityaudio.ai/?utm_source=https%3A%2F%2Fwww.indiatoday.in&utm_medium=player%2520lin

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights