ಮೋದಿಯನ್ನು ತಿರಸ್ಕರಿಸುತ್ತಿದ್ದಾರೆ ಭಾರತೀಯ ಜನ; ಒಂದೇ ವರ್ಷದಲ್ಲಿ ಮೋದಿ ಜನಪ್ರಿಯತೆ 24%ಗೆ ಕುಸಿತ!

ಪ್ರಧಾನಿ ಮೋದಿಯವರ ಜನಪ್ರಿಯತೆಯ ರೇಟಿಂಗ್ ಒಂದೇ ವರ್ಷದಲ್ಲಿ 66% ರಿಂದ 24% ಕ್ಕೆ ಇಳಿದಿದೆ ಎಂದು ಇಂಡಿಯಾ ಟುಡೇ ನಡೆಸಿದ “ಮೂಡ್ ಆಫ್ ದಿ ನೇಷನ್” ಸಮೀಕ್ಷೆಯಲ್ಲಿ ತಳಿದು ಬಂದಿದೆ.

ಸೋಮವಾರ (ಆಗಸ್ಟ್ 16) ಇಂಡಿಯಾ ಟುಡೇ ತನ್ನ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದ್ದು, ದೇಶದಲ್ಲಿ ಕೋವಿಡ್ ಬಿಕ್ಕಟ್ಟನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೇ ಇರುವುದು ಪ್ರಧಾನಿ ಮೋದಿಯವರ ಜನಪ್ರಿಯತೆ ಕುಸಿತಕ್ಕೆ ಪ್ರಾಥಮಿಕ ಕಾರಣ ಎಂದು ಹೇಳಿದೆ.

“ಕೊರೊನಾ ಮೊದಲ ಅಲೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕಾಗಿ ಮೋದಿಯವರನ್ನು ಜನವರಿ 2021 ರಲ್ಲಿ ಪ್ರಶಂಸಿಸಲಾಗಿತ್ತು. ಇದಕ್ಕಾಗಿ ಶೇಕಡಾ 73% ರಷ್ಟು ಜನಪ್ರಿಯತೆ ಗಳಿಸಿದ್ದರು. ಆದರೆ, ಎರಡನೇ ಅಲೆಯನ್ನು ಸರಿಯಾಗಿ ನಿರ್ವಹಿಸದ ಕಾರಣ ಅವರ ಜನಪ್ರಿಯತೆಯ ಅಂಕಿ ಅಂಶವು 49% ಕ್ಕೆ ಇಳಿದಿದೆ” ಎಂದು ಇಂಡಿಯಾ ಟುಡೇ ವರದಿ ಹೇಳಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 27% ರಷ್ಟು ಜನರು ಚುನಾವಣಾ ರ್‍ಯಾಲಿಗಳು ಸೇರಿದಂತೆ ದೊಡ್ಡ ಸಭೆ-ಸಮಾರಂಭಗಳು ಭಾರತದಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಕಾರಣವೆಂದು ಹೇಳಿದ್ದಾರೆ. ಸುಮಾರು 26% ಜನರು ಕೋವಿಡ್ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದ್ದರಿಂದ ಕೊರೊನಾ ಅಲೆ ಹೆಚ್ಚಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೊರೊನಾ 2ನೇ ಅಲೆ ಕಾರಣ; ಮೋದಿ ಜಾಗತಿಕ ಜನಪ್ರಿಯತೆ ಭಾರೀ ಕುಸಿತ!

ದೇಶದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿರುವವರರ ಡೇಟಾ ಮತ್ತು ಕೊರೊನಾ ಸಾವುಗಳ ಡೇಟಾ ಬಗ್ಗೆ ಸರ್ಕಾರಿ ದತ್ತಾಂಶದಲ್ಲಿ ತಿಳಿವುದಕ್ಕಿಂತ ಹೆಚ್ಚಿನ ಕೇಸ್‌ಗಳು ಮತ್ತು ಸಾವುಗಳಾಗಿವೆ ಎಂದು 71% ರಷ್ಟು ಜನರು ಹೇಳಿದ್ದಾರೆ, ಇನ್ನು ಶೇಕಡಾ 44% ಜನರು ಈ ಆರೋಗ್ಯ ಬಿಕ್ಕಟ್ಟು ಉಂಟಾಗಲು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕಾರಣವೆಂದು ಹೇಳಿದ್ದಾರೆ.

ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ, 29% ರಷ್ಟು ಜನರು ಬೆಲೆ ಏರಿಕೆ ಮತ್ತು ಹಣದುಬ್ಬರವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರದ ದೊಡ್ಡ ವೈಫಲ್ಯವೆಂದು ತಿಳಿಸಿದ್ದಾರೆ. ಸುಮಾರು 23% ರಷ್ಟು ಜನರು ನಿರುದ್ಯೋಗ ದರವು ಮೋದಿ ಸರ್ಕಾರದ ಎರಡನೇ ಅತಿದೊಡ್ಡ ವೈಫಲ್ಯ ಎಂದು ಹೇಳಿದ್ದಾರೆ.

https://twitter.com/DilliDurAst/status/1427264871406604295?s=20

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮೋದಿ ನಂತರ ಪ್ರಧಾನಿ ಸ್ಥಾನಕ್ಕೆ ಶೇಕಡಾ 11% ರಷ್ಟು ಜನರು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 10% ರೇಟಿಂಗ್ ಹೊಂದಿದ್ದು, ಪ್ರಧಾನಿ ಸ್ಥಾನಕ್ಕೆ ಮೂರನೇ ಅತ್ಯಂತ ಜನಪ್ರಿಯ ಮುಖವಾಗಿ ಹೊರಹೊಮ್ಮಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು 2020 ರಲ್ಲಿ 8% ರಷ್ಟು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ 2019 ರಲ್ಲಿ 3% ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ, 11 ರಾಜ್ಯಗಳ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಆದಿತ್ಯನಾಥ್ ಏಳನೇ ಸ್ಥಾನದಲ್ಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಇಂಡಿಯಾ ಟುಡೇ ಸಮೀಕ್ಷೆಯನ್ನು ಜುಲೈ 10 ಮತ್ತು ಜುಲೈ 22 ರ ನಡುವೆ ನಡೆಸಿದ್ದುಉ, ಸಮೀಕ್ಷೆಯಲ್ಲಿ 14,599 ಮಂದಿ ಭಾಗವಹಿಸಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ 71% ಜನರು ಗ್ರಾಮೀಣ ಪ್ರದೇಶದ ಜನರು ಮತ್ತು 29% ನಗರ ಪ್ರದೇಶದ ಜನರಾಗಿದ್ದಾರೆ. ಸಮೀಕ್ಷೆಯು 19 ರಾಜ್ಯಗಳು, 115 ಸಂಸತ್ತು ಮತ್ತು 230 ವಿಧಾನಸಭಾ ಸ್ಥಾನಗಳ ಜನರನ್ನು ಒಳಗೊಂಡಿದೆ.

ಇದನ್ನೂ ಓದಿ: ಅಣ್ಣಾಮಲೈ ಹಾದಿಯಲ್ಲಿ ಮತ್ತೊಬ್ಬ IPS; ಬಿಜೆಪಿ ನಾಯಕರನ್ನು ಭೇಟಿಯಾದ ರವಿ ಚನ್ನಣ್ಣನವರ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights