ಕೋರಮಂಗಲ ಭಯಾನಯ ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಶಿತಾ ಮತ್ತು ಬಿಂದು!

ಕೋರಮಂಗಲ ಭಯಾನಯ ಅಪಘಾತಕ್ಕೂ ಮುನ್ನ ಇಶಿತಾ ಮತ್ತು ಬಿಂದು ಬಿಜಿಯಿಂದ ಹತ್ತಿರದಲ್ಲಿರುವ ಬಾರ್ ಗೆ ಹೋಗಿ ಮದ್ಯ ಖರೀದಿ ಮಾಡಿ ಬ್ಯಾಗಿಗೆ ಹಾಕಿಕೊಂಡು ಹೋಗಿರುವ ದೃಶ್ಯ ಸೆರೆಯಾಗಿದೆ.

ನಿನ್ನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಏಳು ಜನ ಪಾರ್ಟಿ ಮಾಡಿದ್ದಾರೆನ್ನುವುದಕ್ಕೆ ಸಾಕ್ಷಿ ಲಭ್ಯವಾಗಿದೆ. ಜಾಲಿ ರೈಡ್ ಹೋಗುವ ಮುನ್ನ ಇವರು ಪಾರ್ಟಿ ಮಾಡಿದ್ದಾರೆನ್ನಲಾಗುತ್ತಿದೆ.

ಜಾಲಿ ರೈಡ್ ಗೂ ಹೋಗುವ ಮುನ್ನ ಐಷಾರಾಮಿ ಬಾರ್  ಶಾಪ್ ನಲ್ಲಿ ಇಶಿತಾ ಮತ್ತು ಬಿಂದು ಮದ್ಯ ಖರೀದಿ ಮಾಡಿದ್ದಾರೆ. ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಬಹುತೇಕ ಬೆಂಗಳೂರಿನ ಬಾರ್, ಪಬ್, ಕ್ಲಬ್ 9 ಗಂಟೆಗೇ ಕ್ಲೋಸ್ ಆಗುತ್ತವೆ. ಹೀಗಾಗಿ ನೈಟ್ ಕರ್ಫ್ಯೂ ಜಾರಿಗೂ ಮುನ್ನ ಇವರಿಬ್ಬರು ಮದ್ಯ ಖರೀದಿ ಮಾಡಿದ್ದಾರೆ. ಬಿಂದು ಮತ್ತು ಇಶಿತಾ ಇರುವ ಬಿಜಿಯಿಂದ 200 ಮೀಟರ್ ದೂರದಲ್ಲಿರುವ ಬಾರ್ ನಲ್ಲಿ ಮಧ್ಯೆ ಖರೀದಿ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾತ್ರಿ 8:40 ರಿಂದ 8:44ರ ವರೆಗೂ ಮದ್ಯ ಖರೀದಿ ಮಾಡಿದ್ದಾರೆ. ಜೊತೆಗೆ ಅವರು ಪಕ್ಕದಲ್ಲಿದ್ದ ಒಂದು ಪಬ್ ನೊಳಗೂ ಹೋಗಿದ್ದಾರೆ. ಆದರೆ ಪಬ್ ಒಳಗಡೆ ನವೀಕರಣ ಆಗುತ್ತಿದ್ದ ಕಾರಣ ವಾಪಸ್ ಬಂದಿದ್ದಾರೆ. ಹೀಗಾಗಿ ಇವರು ಕಾರಿನಲ್ಲೇ ಮಧ್ಯೆ ಸೇವಿಸಿರಬಹುದು ಎನ್ನಲಾಗುತ್ತಿದೆ.

ಮೇಲ್ನೋಟಕ್ಕೆ ಇವರೆಲ್ಲರೂ ಮಧ್ಯೆ ಸೇವಿಸಿದ್ದಾರೆನ್ನಲಾಗುತ್ತಿದೆ. ಪರೀಕ್ಷಾ ವರದಿ ಇಂದು ಬರಬೇಕಿದ್ದು ವರದಿ ಬಳಕವಷ್ಟೇ ನಿಖರವಾಗಿ ಮದ್ಯ ಸೇವನೆ ಬಗ್ಗೆ ಮಾಹಿತಿ ಸಿಗಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights