960 ಮುಗ್ದ ರೈತರ ಹೆಸರಿನಲ್ಲಿ 250 ಕೋಟಿ ಸಾಲ : ಸಚಿವ ಕಾರಜೋಳ ಆಪ್ತನಿಂದ ವಂಚನೆ!

960 ಮುಗ್ದ ರೈತರ ಹೆಸರಿನಲ್ಲಿ ಕೋಟಿ ಕೋಟಿ ಸಾಲ ಪಡೆದು ಸಚಿವ ಗೋವಿಂದ ಕಾರಜೋಳ ಆಪ್ತ ವಂಚನೆ ಮಾಡಿದ ಘಟನೆ ಬಾಗಲಕೋಟೆ ಮುಧೋಳದಲ್ಲಿ ನಡೆದಿದೆ.

1999ರಲ್ಲಿ ರೈತರು ದುಡಿದ ಹಣದಿಂದ ರನ್ನ ಕಾರ್ಖಾನೆ ಸ್ಥಾಪಿಸಲಾಯಿತು. ಆರಮಭದಲ್ಲಿ ರನ್ನ ಸಕ್ಕರೆ ಕಾರ್ಖಾನೆ ಯ ಗೋವಿಂದ್ ಕಾರಜೋಳ ಸಂಸ್ಥಾಪಕ ಅಧ್ಯಕ್ಷರಾಗಿದ್ದರು ನಂತರ ರಾಮಣ್ಣ ತಳೇವಾಡ ಅಧ್ಯಕ್ಷ ಆಗಿದ್ದರು. ಕಳೆದ 20 ವರ್ಷದಿಂದ ರಾಮಣ್ಣ ಕಾರ್ಖಾನೆಯಲ್ಲಿ ಅಧ್ಯಕ್ಷರಾಗಿದ್ದು ಕಾರ್ಖಾನೆಗಾಗಿ ರೈತರ ಹೆಸರಿನಲ್ಲಿ ಕೋಟಿ ಕೋಟಿ ಸಾಲ ಪಡೆದು ವಂಚಿಸಿದ್ದಾರೆ.

ಡಿಸಿಸಿ ಬ್ಯಾಂಖ್ ನಿಂದ 100 ಕೋಟಿ,  ಬ್ಯಾಂಕ್ ಆಫ್ ಇಂಡಿಯಾದಲ್ಲಿ 62 ಕೋಟಿ, ಅಪೆಕ್ಸ್ ಬ್ಯಾಂಕ್ ನಿಂದ 72 ಕೋಟಿ ಸಾಲ ಪಡೆದಿದ್ದಾರೆ. ಸುಮಾರು 250 ಕೋಟಿ ಧೋಕಾ ಮಾಡಿದ್ದಾರೆ.

ವಿವಿಧ ಕಾಮಗಾರಿಗಳ ವಿಚಾರವಾಗಿ ಮತ್ತು ಹೊಸ ಗೋಡನ್ ಕಟ್ಟುವುದಾಗಿ ಹೇಳಿ, ಹಳೆ ಗೋಡನ್ ತೋರಿಸಿ ಸಾಲಪಡೆದಿದ್ದಾರೆ. ಸಾಲ ಪಡೆದು ರಾಮಣ್ಣ ಮುದೋಳ ಸೌಹಾರ್ದ ಬ್ಯಾಂಕ್ ನಲ್ಲಿ ಪತ್ನಿ ಹೆಸರಿನಲ್ಲಿ ಹಣವನ್ನು ಇಟ್ಟಿದ್ದಾರೆ.

ರೈತ, ಕಾರ್ಮಿಕರು, ಷೇರುದಾರರ ಹೆಸರಿನಲ್ಲೂ ರಾಮಣ್ಣ ಸಾಲ ಪಡೆದು ರಾಮಣ್ಣ ಮಹಾ ಮೋಸ ಮಾಡಿದ್ದಾನೆ. ಬ್ಯಾಂಕ್ ಗಳಲ್ಲಿ ಸಾಲ ಪಡೆಯಲು ಬ್ಯಾಂಕ್ ಗೆ ಹೋದ ರೈತರು ಈಗಾಗಲೇ ತಮ್ಮ ಹೆಸರಿನಲ್ಲಿ ಸಾಲ ಇರುವುದು ಕೇಳಿ ಶಾಕ್ ಆಗಿದ್ದಾರೆ. ಹೀಗಾಗಿ ಒಂದು ವರ್ಷದಿಂದ ಕಾರ್ಖಾನೆ ಸಂಪೂರ್ಣ ಬಂದ್ ಆಗಿದೆ.

ಕಾರ್ಖಾನೆಗೆ ಕಬ್ಬು ಪೂರೈಸುತ್ತಿದ್ದ 611 ರೈತರು ಹಾಗೂ ಕಾರ್ಮಿಕರ ಜಮೀನಿನ ಮೇಲೆ ಮುಧೋಳ ಮತ್ತು ಬೆಳಗಾವಿಯ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿ ಬೆಳೆಸಾಲ 25 ಕೋಟಿ ರೂ  ಹಾಗೂ ಸಾರಿಗೆ ಮತ್ತು  ಕಟಾವ್​ಗೆಂದು 12 ಕೋಟಿ ರೂಪಾಯಿ ಸೇರಿ ಒಟ್ಟು 37 ಕೋಟಿ ರೂಪಾಯಿ ಸಾಲವನ್ನು ಸಕ್ಕರೆ ಕಾರ್ಖಾನೆ ಪಡೆದುಕೊಂಡಿದೆ.

ರೈತರು ಮತ್ತು ಕಾರ್ಮಿಕರ ಆಸ್ತಿ ಮೇಲೆ ಬ್ಯಾಂಕಿನಲ್ಲಿ ಸಾಲ ಪಡೆದ ಸಕ್ಕರೆ ಕಾರ್ಖಾನೆ, ಆ ಸಾಲವನ್ನು ಮರುಪಾವತಿಸಿರುವುದಿಲ್ಲ. ರೈತರು ಹಾಗೂ ಕಾರ್ಮಿಕರು ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳಲು ಹೋದರೆ ಬ್ಯಾಂಕಿನವರು ಸಾಲ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಇದರಿಂದ  ರೈತರು ಮತ್ತು ಕಾರ್ಮಿಕರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಬ್ಯಾಂಕ್ ಸಾಲ ಮರುಪಾವತಿ ಮಾಡಬೇಕೆಂದು ರೈತರು ಸಕ್ಕರೆ ಕಾರ್ಖಾನೆಗೆ ಆಗ್ರ‌ಹಿಸಿದ್ದಾರೆ.

ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯು  ಕಬ್ಬು ಪೂರೈಸಿದ ರೈತರಿಗೆ 30ಕೋಟಿ ಕಬ್ಬು ಬಾಕಿ ಉಳಿಸಿಕೊಂಡಿದೆ. ಈಗಾಗಲೇ ಜಿಲ್ಲಾಡಳಿತ ಕಾರ್ಖಾನೆಯಲ್ಲಿನ ಸಕ್ಕರೆ ಹರಾಜು ಮಾಡಿದ್ದು, ಅದರಿಂದ ಬಂದಿರುವ ಹಣದಿಂದ ರೈತರಿಗೆ ಬಾಕಿ ಬಿಲ್ ಪಾವತಿಸಲು ಮುಂದಾಗಿದೆ. ಇದರ ಮಧ್ಯೆ ಕಾರ್ಖಾನೆಗೆ ಸಾಲ ಪಡೆದ ಬ್ಯಾಂಕ್​ನವರು ಕೋರ್ಟ್ ಮೊರೆ ಹೋಗಿದ್ದಾರೆ. ಇದರ ಮಧ್ಯೆ ರೈತರ ಹೆಸರಲ್ಲಿ ಬೆಳೆಸಾಲ,ಹಾಗೂ ಸಾರಿಗೆ,ಕಟಾವು ವೆಚ್ಚಕ್ಕೆಂದು 37ಕೋಟಿ ಸಾಲವಿದ್ದು, ರೈತರು ಬ್ಯಾಂಕ್ ನಲ್ಲಿ ಸಾಲ ಪಡೆಯುವುದಕ್ಕೆ ತೊಂದರೆಯಾಗಿದೆ‌.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights