ಜ್ಯೂನಿಯರ್ ಚಿರು ಹೆಸರು ರಿವೀಲ್ : ಇನ್ಸ್ಟಾಗ್ರಾಮ್ನಲ್ಲಿ ಮಗನ ಹೆಸರು ಹಂಚಿಕೊಂಡ ಮೇಘನಾ!

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬ ಸೆ.3, 2021ರಂದು ಜ್ಯೂನಿಯರ್ ಚಿರುಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಮೇಘನಾ ಪುತ್ರನಿಗೆ ಆಯ್ಕೆ ಮಾಡಿರುವ ಹೆಸರು ಇಂದು ಬಹಿರಂಗಗೊಳಿಸಿದ್ದಾರೆ.

ಇಷ್ಟು ದಿನ ಜ್ಯೂನಿಯರ್ ಚಿರು ಎಂದು ಕರೆಯಲಾಗುತ್ತಿದ್ದ ಚಿರು ಪುತ್ರನಿಗೆ ಮುದ್ದಾದ ಹೆಸರು ಇಡಲಾಗಿದೆ. ಈ ಹೆಸರನ್ನು ಮೇಘನಾ ಇಂದು ರಿವೀಲ್ ಮಾಡಿದ್ದಾರೆ. ಜ್ಯೂನಿಯರ್ ಚಿರುಗೆ ಇಂದು ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ.

ಬೆಂಗಳೂರಿನ ಚಾನ್ಸರಿ ಪೆವಿಲಿಯನ್‌ ಹೋಟೆಲ್‌ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಜ್ಯೂನಿಯರ್ ಚಿರುಗೆ ರಾಯನ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಸಂಸ್ಕೃತದಲ್ಲಿ ರಾಯನ್ ಅಂದರೆ ಯುವರಾಜ್ ಎಂಬ ಅರ್ಥವಿದೆ.

ಚಿರು ಅಭಿಮಾನಿಗಳಿಂದ ಹಿಡಿದು ಕುಟುಂಬಸ್ಥರು, ಚಿರು ಸ್ನೇಹಿತರು ಜ್ಯೂನಿಯರ್ ಚಿರುನನ್ನು ಸಿಂಬಾ, ಪಾಪ ಕುಟ್ಟಿ, ಜ್ಯೂನಿಯರ್ ಸಿಂಗ್ ಹೀಗೆ ಹಲವಾರು ಹೆಸರುಗಳಿಮದ ಕರೆಯುತ್ತಿದ್ದರು. ಇಂದು ಮೇಘನಾ ರಾಜ್ ತಮ್ಮ ಪುತ್ರನ ಹೆಸರನ್ನು ರಿವೀಲ್ ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights