ಬಟ್ಟೆ ಬ್ಯಾಗ್ ಖರೀದಿಯಲ್ಲಿ ರೋಹಿಣಿ ಸಿಂಧೂರಿ 6 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ: ಸಾರಾ ಮಹೇಶ್‌ ಆರೋಪ

ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಎಂಟು ಕೋಟಿ ಎಸ್‌ಎಸ್‌ಸಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಪ್ಲಾಸ್ಟಿಕ್ ಮುಕ್ತ ಮೈಸೂರು ನೆಪದಲ್ಲಿ ಹಣ ಲೂಟಿ ಮಾಡಿದ್ದಾರೆ ಎಂದು ಶಮಾಜಿ ಸಚಿವ ಸಾರಾ ಮಹೇಶ್‌ ಆರೋಪಿಸಿದ್ದಾರೆ.

ಬಟ್ಟೆ ಬ್ಯಾಗ್ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಅನುಮತಿ ಪಡೆಯದೆ ಬ್ಯಾಗ್ ಖರೀದಿ ಮಾಡಲಾಗಿದೆ. ಮಾತ್ರವಲ್ಲದೆ, ಉಪವಿಭಾಗಾಧಿಕಾರಿಯೊಬ್ಬರ ಪತಿಯೊಬ್ಬ ಬ್ಯಾಗ್ ಸರಬರಾಜು ಗುತ್ತಿಗೆದಾರರಾಗಿದ್ದು, ಅವರಿಂದ ಬ್ಯಾಕ್ ಖರೀದಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ನನ್ನ ವರ್ಗಾವಣೆ ಹಿಂದೆ ಭೂ ಮಾಫಿಯಾ ಪಿತೂರಿ ಇದೆ: ರೋಹಿಣಿ ಸಿಂಧೂರಿ

ಐದು ಕೆಜಿ ಅಳತೆಯ ಒಂದು ಬ್ಯಾಗ್‌ಗೆ 52 ರೂ ಬಿಲ್ ಮಾಡಲಾಗಿದೆ. ನಾವು ಖರೀದಿ ಮಾಡಿದ್ದ ಸಂದರ್ಭದಲ್ಲಿ ಕೇವಲ 13 ರೂ ಸಿಗುತ್ತಿತ್ತು. ಈಗ ಇಷ್ಟೊಂದು ದುಪ್ಪಟ್ಟಾಗಿದೆ. 14,71,458 ಬ್ಯಾಗ್‌ಗಳಿಗೆ 7.65 ಕೋಟಿ ರೂ ಬಿಲ್ ಮಾಡಲಾಗಿದೆ. ಆದರೆ, ಇವುಗಳ ವಾಸ್ತವ ಬೆಲೆ‌ 1.47,14,586 ರೂ. ಇದೆ. ಹೀಗಾಗಿ ಬ್ಯಾಗ್‌ ಖರೀದಿಯಲ್ಲಿ ಆರು ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಚಿವರು ಅರೋಪಿಸಿದ್ದಾರೆ.

ಇಂದು ಸಿಎಂ, ಸಿಎಸ್ ಭೇಟಿ ಮಾಡಿ ಈ ಬಗ್ಗೆ ಮಾತನಾಡುತ್ತೇನೆ. ಸಿಂಧೂರಿ ಅವರನ್ನು ಅಮಾನತ್ತಿನಲ್ಲಿಟ್ಟು ತನಿಖೆ ಮಾಡದಿದ್ದರೆ ಧರಣಿ ಕೂರುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ಅವರದ್ದೇ ತಪ್ಪು? ಹಲವು ಪ್ರಶ್ನೆಗಳೊಂದಿಗೆ ಸಿಂಧೂರಿ ವಿರುದ್ದ ಗುಡಿಗಿದ IPS ಡಿ ರೂಪಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights