ರೋಹಿಣಿ ಸಿಂಧೂರಿ ಅವರದ್ದೇ ತಪ್ಪು? ಹಲವು ಪ್ರಶ್ನೆಗಳೊಂದಿಗೆ ಸಿಂಧೂರಿ ವಿರುದ್ದ ಗುಡಿಗಿದ IPS ಡಿ ರೂಪಾ!
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ಸ್ಥಳೀಯ ಶಾಸಕ, ಸಂಸದರ ಕಿತ್ತಾಟ, ಸಿಂಧೂರಿ ಅವರ ವರ್ಗಾವಣೆಯೊಂದಿಗೆ ಅಂತ್ಯವಾದಂತೆ ಕಾಣಿಸುತ್ತಿದೆ. ಆದರೂ, ಸಿಂಧೂರಿ ವಿರುದ್ದ ಆಗಾಗ ಹೇಳಿಕೆಗಳು ಕೇಳಿಬರುತ್ತಿವೆ. ಕಳೆದ ಎರಡು ದಿನಗಳ ಹಿಂದೆ ಮೈಸೂರಿನಲ್ಲಿರುವ ಜಿಲ್ಲಾಧಿಕಾರಿ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿಂಧೂರಿ ವಿರುದ್ದ ಕಿಡಿಕಾರಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ ಅವರು, ಇದೀಗ ಮತ್ತೆ ತಮ್ಮ ಫೇಸ್ಬುಕ್ನಲ್ಲಿ ಈ ಬಗ್ಗೆ ಮತ್ತೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ತಮ್ಮ ಫೇಸ್ಬುಕ್ ಪುಟದಲ್ಲಿ ಪ್ರಶ್ನೆಗಳು ಪೋಸ್ಟ್ ಮಾಡಿರುವ ಅವರು, ಈ ಪೇಪರ್ ಕ್ಲಿಪ್ಪಿಂಗ್ ಅನ್ನು ನನ್ನ ಸಂಬಂಧಿಕರೊಬ್ಬರು ಕಳಿಸಿದರು. ನನಗೆ ಕೇಳಿದರು, ಎಲ್ಲಾ ಪರ್ಮಿಷನ್ ಇದೆಯಲ್ಲ ಅಂತ. ಬಹುಶ: ಸಾಮಾನ್ಯ ಜನರಿಗೆ ಇದರಲ್ಲಿ ಇರುವ ಸಮಜಾಯಿಷಿ ಅರ್ಥ ಆಗದೇ ಇರುವುದರಿಂದಲೇ ಇದನ್ನು ಗೋಲ್ ಗೋಲ್ ಆಗಿ ಹೇಳಿ ಅಧಿಕಾರಿಯು ಜನರ ದಾರಿ ತಪ್ಪಿಸುತ್ತಿರುವ ಸಾಧ್ಯತೆ.
1. ನಿರ್ಮಿತಿ ಕೇಂದ್ರ ಆಯಾ ಜಿಲ್ಲೆಗಳಲ್ಲಿ ಇದ್ದು, ಅದಕ್ಕೆ ಡಿಸಿ ಅವರೇ ಅಧ್ಯಕ್ಷ ಆಗಿರುತ್ತಾರೆ. ಅವರ ಮನೆಯ ಅಂಗಳದಲ್ಲಿ ಈಜು ಕೊಳ ಕಟ್ಟಿಸುವುದು ಅವರಿಗೆ ಕಷ್ಟವೇ ಅಲ್ಲ. ಆದರೆ, ವಿಷಯ ಅದಲ್ಲ. ಕಾರ್ಪೋರೇಶನ್ ಪರವಾನಗಿ ಬೇಡವೇ? ಅದು ಇತ್ತೆ? ಇರಲಿಲ್ಲ. ತಪ್ಪಲ್ಲವೇ? ಜನ ಸಾಮಾನ್ಯನಿಗೆ ಒಂದು, ಡಿಸಿಗೆ ಬೇರೆ ನ್ಯಾಯವೇ? ಕಾರ್ಪೋರೇಶನ್ ಪರವಾನಗಿ ಇಲ್ಲ, ಹಾಗಾದ್ರೆ ಒಡೆದು ಹಾಕಬೇಕಲ್ಲ? ಅಥವಾ ದಂಡ ಕಟ್ಟಿಸಬೇಕಲ್ಲ? ಈ ಅಧಿಕಾರಿಯಿಂದ ದಂಡ ವಸೂಲಿ ಮಾಡುತ್ತಾರೆಯೇ?
2. ಈ ಅಧಿಕಾರಿಯು ಕೊಟ್ಟಿರುವ ಇನ್ನೊಂದು ದಾರಿ ತಪ್ಪಿಸುವ ಹೇಳಿಕೆ, ಇದು Covid ಸಮಯದಲ್ಲಿ ನಿರ್ಮಿಸಿಲ್ಲ. Covid ಮುಗಿದಿದೆ ಅಂತ ಸರ್ಕಾರ ಘೋಷಿಸಿದೆಯೇ? ಶಾಲಾ ಕಾಲೇಜು ತೆರೆದಿದೆಯೇ? ಮಾಸ್ಕ್ ಹಾಕೋದು ನಿಲ್ಲಿಸಿ ಅಂತ ಸರ್ಕಾರ ಹೇಳಿದೆಯೆ? ಮತ್ತೆ ಇವರು Covid ಸಮಯ ಇರಲಿಲ್ಲ ಅಂತ ಹೇಳೋದು ಒಪ್ಪಲು ಸಾಧ್ಯವೇ ಅಪಾರ್ಟ್ಮೆಂಟ್ ಗಳಲ್ಲೇ ಈಜುಕೊಳ ತೆಗೆಯಲು ಪರವಾನಗಿ ಇಲ್ಲ. ಡಿಸಿಗೊಂದು ನ್ಯಾಯ, ಜನರಿಗೊಂದು ನ್ಯಾಯವೇ?
— D Roopa IPS (@D_Roopa_IPS) June 24, 2021
3. ಒಬ್ಬ ಡಿಸಿ ಈಜುಕೊಳ ಕಟ್ಟಿದಾಗ, ಬಾಕಿ ಜಿಲ್ಲೆಯ ಡಿಸಿಗಳೂ ಕಟ್ಟಬಹುದಲ್ಲವೆ. ಅವರನ್ನು ನೋಡಿ SP ಗಳು ಅಂದರೆ ಪೊಲೀಸ್ ವರಿಷ್ಠ ಅಧಿಕಾರಿಗಳೂ ಕಟ್ಟಬಹುದಲ್ಲವೆ? ಹಾಗೆ ಎಲ್ಲರೂ ತಮ್ಮ ತಮ್ಮ ಬಂಗಲೆಯಲ್ಲಿ ಸಾರ್ವಜನಿಕ ಹಣ ಉಪಯೋಗಿಸಿ ಕಟ್ಟುವುದನ್ನು ಒಪ್ಪಲು ಸಾಧ್ಯವೇ? ಅದೂ ಇಂದಿನ ಪರಿಸ್ಥಿತಿಯಲ್ಲಿ? ಡಿಸಿ ಬಂಗಲೆಯಲ್ಲಿ ಸಾಮಾನ್ಯ ಜನರು ಉಪಯೋಗಿಸಲು ಅವಕಾಶ ಇದೆಯೇ? ಇಲ್ಲವಲ್ಲ?
ಇದನ್ನೂ ಓದಿ:ನನ್ನನ್ನು ಡೇ ಒನ್ ಇಂದಲೂ ಟಾರ್ಗೆಟ್ ಮಾಡಲಾಗಿದೆ; ಸಂಸದ ಪ್ರತಾಪ್ ಸಿಂಹ ವಿರುದ್ಧ ರೋಹಿಣಿ ಸಿಂಧೂರಿ ಕಿಡಿ!
ನೈತಿಕತೆ ಅಂದರೆ, ನಾನು ಮಾಡುವ ಕೆಲಸ ಬೇರೆಯವರೂ ಮಾಡಿದರೆ, ಅದು ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ಮನಗಂಡು ಇಡುವ ಹೆಜ್ಜೆಯೇ ನೈತಿಕ ಹೆಜ್ಜೆ.
ಎಲ್ಲರಿಗಿಂತ ನಾವು ನಿಸ್ಪೃಹರು, ನಮಗಿಂತ ಪ್ರಾಮಾಣಿಕರು ಬೇರೆ ಇಲ್ಲ ಎಂದು ತಿಳಿದು ಕೊಳ್ಳುವ( ಗ್ರಹಿಸುವ) ಅಧಿಕಾರಿಗಳು ತಮ್ಮ ಪ್ರತಿ ಹೆಜ್ಜೆಯನ್ನೂ ಗಮನಿಸಿ ಇಡಬೇಕಾಗುತ್ತದೆ. ಜನಪ್ರಿಯತೆ ಹೆಚ್ಚಿನ ಜವಾಬ್ದಾರಿ ತರುತ್ತದೆ. ನೀವು ನೈತಿಕವಾಗಿ ಬೇರೆಯವರಿಗಿಂತ ಮೇಲ್ಮಟ್ಟದಲ್ಲಿ ಇರಲೇ ಬೇಕಾಗುತ್ತದೆ. ಅಂಥವರಿಗೆ ಈ ಸಂದರ್ಭದಲ್ಲಿ ಈಜು ಕೊಳ ಬೇಕೋ ಬೇಡವೋ ಎಂಬುದು ತಿಳಿಯುವುದಿಲ್ಲವೇ? ಮಾನವೀಯತೆ, ಪ್ರಾಮಾಣಿಕತೆ, ನೈತಿಕತೆ ಇರುವ ಎಂಥವರಿಗೂ ತಿಳಿಯುವ ವಿಚಾರ ಇದು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನನ್ನ ವರ್ಗಾವಣೆಗೆ ಭೂ ಮಾಫಿಯಾ ಕಾರಣ; ದಾಖಲೆಗಳನ್ನು ಬಹಿರಂಗಪಡಿಸಿದ ಸಿಂಧೂರಿ!

