ಅಫ್ಘಾನಿಸ್ತಾನ ಜೈಲಿನಿಂದ IS-K ಭಯೋತ್ಪಾದಕರ ಬಿಡುಗಡೆ : ಭಾರತದ ವಿರುದ್ಧ ದಾಳಿಗೆ ಬಳಸುವ ಸಾಧ್ಯತೆ!

ಅಫ್ಘಾನಿಸ್ತಾನ ಜೈಲಿನಿಂದ IS-K ಭಯೋತ್ಪಾದಕರ ಬಿಡುಗಡೆ ಮಾಡಲಾಗಿದ್ದು, ಭಾರತದ ವಿರುದ್ಧ ದಾಳಿಗಾಗಿ ಬಳಸುವ ಸಾಧ್ಯತೆ ಇದೆ ಎಂದು ಗುಪ್ತಚರ ಮಾಹಿತಿಗಳು ಸೂಚಿಸುತ್ತವೆ.

ಪಾಕಿಸ್ತಾನದ ISI ತಾಲಿಬಾನ್ ನಿಂದ ಪಡೆದಿರುವ ಶಸ್ತ್ರಾಸ್ತ್ರಗಳನ್ನು ಬಿಡುಗಡೆ ಮಾಡಿದ ಇಸ್ಲಾಮಿಕ್ ಸ್ಟೇಟ್-ಖೋರಾಸನ್ (IS-K) ಭಯೋತ್ಪಾದಕರಿಗೆ ಒದಗಿಸಿ ಭಾರತದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.

ಮೂಲಗಳ ಪ್ರಕಾರ ಐಎಸ್ ಈ ಭಯೋತ್ಪಾದಕರನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಕಳುಹಿಸಬಹುದು. ಅಲ್ಲಿಂದ ಅವರನ್ನು ಜಮ್ಮು ಮತ್ತು ಕಾಶ್ಮೀರ ಅಥವಾ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಬಳಸಬಹುದು ಎನ್ನಲಾಗುತ್ತಿದೆ.

ಇಂಡಿಯಾ ಟುಡೇ ಟಿವಿಯಿಂದ ಪಡೆದ ಮಾಹಿತಿಯ ಪ್ರಕಾರ, ಕೇರಳದ ಸುಮಾರು 25 ಯುವಕರು ಅಫ್ಘಾನಿಸ್ತಾನದಲ್ಲಿ ಐಎಸ್-ಕೆ ಸೇರಿದ್ದಾರೆ. ಭಾರತದ ಮೇಲೆ ದಾಳಿ ನಡೆಸಲು ಐಎಸ್ ಈ ಭಯೋತ್ಪಾದಕರನ್ನು ಬಳಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಿಂದ ಕಾರ್ಯಾಚರಣೆ ನಡೆಸುತ್ತಿರುವ ಐಎಸ್‌ಕೆಪಿ ಕಮಾಂಡರ್ ಮುನ್ಸಿಬ್, ಯುವಕರು ಐಎಸ್-ಕೆ ಸೇರಲು ಪ್ರಯತ್ನಿಸುತ್ತಿದ್ಧಾರೆ. ಹೀಗಾಗಿ ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವರದಿ ಬಹಿರಂಗಪಡಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights