ಡ್ರಗ್ಸ್ ಕೇಸ್ : ನವೆಂಬರ್ 1ಕ್ಕೆ ಆಡಿಯೋ ರಿವೀಲ್ ಮಾಡುವುದಾಗಿ ಪ್ರಶಾಂತ್ ಸಂಬರಗಿ ಹೇಳಿಕೆ!

ಡ್ರಗ್ಸ್ ಕೇಸ್ ನಲ್ಲಿ ಸಿಲುಕಿಕೊಂಡ ನಿರೂಪಕಿ ಅನುಶ್ರೀಗೆ ಮಾಜಿ ಸಿಎಂ ರಕ್ಷಣೆ ಇದೆ ಎಂದು ಹೇಳಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ತಮ್ಮೊಂದಿಗೆ ಮಾಜಿ ಸಿಎಂ ಮಾತನಾಡಿದ್ದರು ಎಂದು ಆರೋಪಿಸಿದ್ದಾರೆ. ಜೊತೆಗೆ ಆ ಆಡಿಯೋ ವನ್ನು ನವೆಂಬರ್ ಒಂದಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ನಟಿ ಮಣಿಗಳ ಹೆಸರು ಕೇಳಿರುತ್ತಿದ್ದು ಮಾದಕ ಲೋಕದ ಕನ್ಯಾರ ನಿದ್ದೆಗೆಡಿಸಿದೆ. ಮಾದಕ ವಸ್ತುವಿನ ಸೇವನೆ ಹಾಗೂ ಮಾರಾಟದಲ್ಲಿ ನಿರೂಪಕಿ ಅನುಶ್ರೀ ಹೆಸರು ಚಾರ್ಜ್ ಶೀಟ್ ನಲ್ಲಿ ದಾಖಲಾಗಿದ್ದು ಈಕೆಯ ಮೇಲೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅನೇಕ ಆರೋಪಗಳನ್ನು ಮಾಡಿದ್ದಾರೆ.

ಮಾಜಿ ಸಿಎಂರಿಂದ ಅನುಶ್ರೀ ಯನ್ನು ರಕ್ಷಣೆ ಮಾಡಲಾಗುತ್ತಿದೆ. ನನಗೆ ಕರೆ ಮಾಡಿದ ಮಾಜಿ ಸಿಎಂ ‘ಯಾವುದೇ ಕಾರಣಕ್ಕೂ ಮಂಗಳೂರು ಡ್ರಗ್ಸ್ ಬಗ್ಗೆ ಮಾತನಾಡಬೇಡಿ. ಬೆಂಗಳೂರು ಡ್ರಗ್ಸ್ ಬಗ್ಗೆ ಮಾತ್ರ ಮಾತನಾಡಿ’ ಎಂದು ಹೇಳಿದ್ದರು. ಆ ಕರೆ ಆಡಿಯೋವನ್ನು ಸಾಕ್ಷಿ ಸಮೇತ ನವೆಂಬರ್ ಒಂದಕ್ಕೆ ಲಿವೀಲ್ ಮಾಡುವುದಾಗಿ ಪ್ರಶಾಂತ್ ಹೇಳಿದ್ದಾರೆ.

ಜೊತೆಗೆ ಪ್ರಶಾಂತ್ ಸಂಬರಗಿ, ಅನುಶ್ರೀ ಕೋಟಿ ಕೋಟಿ ಒಡೆತನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಮಂಗಳೂರು, ಬೆಂಗಳೂರಿನಲ್ಲಿ ಅನುಶ್ರೀ ಮನೆ ಮಾಡಿದ್ದಾರೆ. 12 ಕೋಟಿ ಮನೆ ಹೇಗೆ ಸಾಧ್ಯವಾಯ್ತು? ಅದು ಹೇಗೆ ಬಂತು? ಇಷ್ಟೊಂದು ಒಡೆತನ ಹೇಗೆ ಬರಲು ಸಾಧ್ಯ?” ಎಂದು ಪ್ರಶ್ನೆ ಮಾಡಿದ್ದಾರೆ. ಅನುಶ್ರೀ ಅವರ ವಿಚಾರಣೆಯಲ್ಲೂ ಪೊಲೀಸರ ದೋಷಗಳು ಕಂಡು ಬರುತ್ತಿವೆ ಎಂದು ಆರೋಪ ಮಾಡಿದ್ದಾರೆ.

ಪೊಲೀಸರು ಕೂಡ ಗಂಭೀರವಾಗಿ ತನಿಖೆ ಮಾಡಿಲ್ಲ. ವಿಚಾರಣೆ ಮಾಡಿಲ್ಲ ಎಂದು ಪೊಲೀಸ್ ತನಿಖೆಯ ಮೇಲೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಪ್ರಶಾಂತ್ ಸಂಬರಗಿ ಹೇಳಿದ ಮಾಜಿ ಸಿಎಂ ಯಾರು..? ಯಾರಿಂದ ಅವರಿಗೆ ಕರೆ ಬಂದಿತ್ತು..? ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights