ಪಾಕ್‌ಗೆ ಸೇನಾ ರಹಸ್ಯ ಪೂರೈಕೆ ಆರೋಪ; ಅಂಚೆ ಇಲಾಖೆ ಅಧಿಕಾರಿ ಬಂಧನ!

ಪಾಕಿಸ್ತಾನ ಏಜೆಂಟರಿಗೆ ಭಾರತೀಯ ಸೇನೆಯ ರಹಸ್ಯ ದಾಖಲೆಗಳನ್ನು ಪೂರೈಸಿದ ಆರೋಪದ ಮೇಲೆ ಭಾರತೀಯ ಅಂಚೆ ಕಚೇರಿ ವಿಭಾಗದ ಅಧಿಕಾರಿಯನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.

ರಾಜಸ್ಥಾನದ ಜೈಪುರದಲ್ಲಿ ಭಾರತೀಯ ರೇಲ್ವೇಯ ಅಂಚೆ ಕಚೇರಿ ವಿಭಾಗದ ಅಧಿಕಾರಿ ಭರತ್ ಬಾವರಿ ವಿರುದ್ಧ ಪ್ರಕರಣ ದಾಖಲಾಗಿದೆ.

ಈತ

ಪಾಕ್ ನ ಐಎಸ್‌ಐನೊಂದಿಗೆ ಸಂಪರ್ಕ‌ ಹೊಂದಿದ್ದಾನೆ. ಸಾಮಾಜಿಕ ಮಾಧ್ಯಮದ ಮೂಲಕ ಅವರು ಸಂವಹನ ನಡೆಸುತ್ತಾರೆ ಎಂದು

ಭಾರತೀಯ ಸೇನೆ ದಕ್ಷಿಣ ಕಮಾಂಡ್ ನ ಮಿಲಿಟರಿ ಇಂಟಲಿಜೆನ್ಸ್ ಮತ್ತು ರಾಜಸ್ಥಾನ ರಾಜ್ಯದ ಗುಪ್ತಚರ ಇಲಾಖೆ ಹೇಳಿದೆ.

ಭರತ್ ಬಾವರಿ ಅವರನ್ನು ಹನಿಟ್ರ್ಯಾಪ್ ಮೂಲಕ ಬ್ಲಾಕ್‌ಮೇಲೆ‌ಮಾಡಲಾಗಿದೆ. ಹೀಗಾಗಿ ಆತ ಜೈಪುರ ರೈಲ್ವೇ ನಿಲ್ದಾಣದ ಬಳಿ ಅಂಚೆ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾವರಿ, ಕಳೆದ 6 ತಿಂಗಳಿನಿಂದ ಐಎಸ್‌ಐಗೆ ರಾಷ್ಟ್ರೀಯ ಪ್ರಾಮುಖ್ಯತೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ವಿಚಾರಣೆ ವೇಳೆ, ಆರೋಪಿ ಬಾವರಿ ಮೂಲತಃ ಜೋಧಪುರದ ಖೇಡಪ ಗ್ರಾಮದವನೆಂದು ತಿಳಿದು ಬಂದಿದೆ.
ಸುಮಾರು 4-5 ತಿಂಗಳ ಹಿಂದೆ, ಈತನಿಗೆ ಫೇಸ್ ಬುಕ್ ಮೆಸೆಂಜರ್ ಗೆ ಮಹಿಳೆಯೊಬ್ಬಳು ಸಂದೇಶ ರವಾನಿಸಿದ್ದಾಳೆ. ನಂತರ ವಾಟ್ಸಾಪ್ ಚಾಟ್, ವಿಡಿಯೋ ಕರೆಗಳವರೆಗೆ ಇದು ಮುಂದುವರೆದಿದೆ. ಪಾಕಿಸ್ತಾನದ ಮಹಿಳಾ ಏಜೆಂಟ್ ಆಗಿರುವ ಈಕೆ, ಆರೋಪಿಯನ್ನು ಭೇಟಿ ಮಾಡಲು ಮತ್ತು ಆತನೊಂದಿಗೆ ಸುತ್ತಾಡಲು, ಜೊತೆಯಿರುವ ನೆಪದಲ್ಲಿ ತನ್ನ ನಕಲಿ ಫೋಟೋಗಳನ್ನು ಕಳುಹಿಸುತ್ತಿದ್ದಳು ಎಂದು ಆತ ಹೇಳಿಕೊಂಡಿದ್ದಾನೆ.

ಹನಿಟ್ರ್ಯಾಪ್ ಗೊಳಗಾದ ಬಾವರಿ ಬಳಿ ಸೇನಾ ಪತ್ರಗಳ ಫೋಟೋಗಳನ್ನು ಕೇಳಲಾಯಿತು. ಆರೋಪಿಯು ರಹಸ್ಯವಾಗಿ ಪೋಸ್ಟಲ್ ಪತ್ರಗಳ ಲಕೋಟೆಯನ್ನು ತೆರೆದು ಆ ಪತ್ರದ ಫೋಟೋಗಳನ್ನು ತೆಗೆದು ಕಳುಹಿಸುತ್ತಿದ್ದ. ಈ ಸಂಬಂಧ ಆರೋಪಿ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ 1923ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights