ಸಹಿಷ್ಣುತೆ, ಧರ್ಮದ ಕುರಿತು ವಿವೇಕಾನಂದರ ಸಂದೇಶಗಳನ್ನು ಯುವಜನರು ಅರಿತು ಕೊಳ್ಳಬೇಕು: ಸಿಜೆಐ ರಮಣ

ಎಲ್ಲರಿಗೂ ಒಳ್ಳೆಯದನ್ನು ಬಯಸುವುದು ಮತ್ತು ಸಹಿಷ್ಣುತೆ ಧರ್ಮದ ನಿಜವಾದ ಸಾರವಾಗಿದೆ. ಧರ್ಮವು ಮೂಢನಂಬಿಕೆಗಳು ಮತ್ತು ಕಟ್ಟುನಿಟ್ಟುಗಳಿಂದ ಮೇಲಿರಬೇಕು ಎನ್ನುವುದು ಸ್ವಾಮಿ ವಿವೇಕಾನಂದರ ನಂಬಿಕೆಯಾಗಿತ್ತು. ಪಂಥೀಯ ಸಂಘರ್ಷಗಳು ಇಂದಿನ ಸಮಾಜದಲ್ಲಿ ಒಡ್ಡಿರುವ ಅಪಾಯಗಳ ಕುರಿತು ಸ್ವಾಮಿ ವಿವೇಕಾನಂದರ ಮಾತುಗಳತ್ತ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎನ್.ವಿ ರಮಣ ಅವರು ಹೇಳಿದ್ದಾರೆ.

ಹೈದರಾಬಾದ್‌ನಲ್ಲಿರುವ ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಎಕ್ಸೆಲೆನ್ಸ್‌ನ 22ನೇ ಸ್ಥಾಪನಾ ದಿನದ ಭಾಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು 1893ರಷ್ಟು ಹಿಂದೆಯೇ ಹೇಳಿದ್ದ ಮಾತುಗಳಿಗೆ ಗಮನ ನೀಡುವ ತುರ್ತು ಇಂದಿನ ಸಮಕಾಲೀನ ಭಾರತದಲ್ಲಿ ಅಗತ್ಯವಿದೆ. ಅವರು ಒಬ್ಬ ಪ್ರವಾದಿಯಾಗಿದ್ದರು. ಬಹುಹಿಂದೆಯೇ ಜಾತ್ಯತೀತತೆಯನ್ನು ವಿವೇಕಾನಂದರು ಪ್ರತಿಪಾದಿಸಿದ್ದರು ಎಂದು ಹೇಳಿದ್ದಾರೆ.

ಭಾರತದ ಬಗೆಗೆ ಅವರ ಕನಸನ್ನು ನನಸಾಗಿಸಲು ನಾವು ಇಂದಿನ ಯುವಜನರಲ್ಲಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಬೇಕು. ತಮ್ಮ ಕಾರ್ಯಗಳು ದೇಶನಿರ್ಮಾಣ ಪ್ರಕ್ರಿಯೆಯ ಭಾಗವಾಗಿವೆ ಎನ್ನುವುದನ್ನು ಯುವಜನರಿಗೆ ತಿಳಿಸುವ ಅಗತ್ಯವಿದೆ ಎಂದು ರಮಣ ಹೇಳಿದ್ದಾರೆ.

ಬ್ರಿಟಿಷರ ಕ್ರೂರ ಆಡಳಿತದ ವಿರುದ್ದ ಬುಡಕಟ್ಟು ಸಮುದಾಯವನ್ನು ಒಗ್ಗೂಡಿಸಿ ಅವರ ಭೂಮಿ ಹಕ್ಕುಗಳನ್ನು ಕೊಡಿಸಿದ್ದ ಯುವ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅಥವಾ ಸ್ವತಂತ್ರ ಭಾರತಕ್ಕಾಗಿ ತಮ್ಮ ಕೊನೆಯುಸಿರಿನವರೆಗೂ ಕೆಚ್ಚೆದೆಯಿಂದ ಹೋರಾಡಿ ಮಡಿದ ಭಗತ ಸಿಂಗ್, ಸುಖದೇವ ಮತ್ತು ರಾಜಗುರು ಅವರಂತಹ ಯುವ ನಾಯಕರ ಹೆಸರುಗಳಿಲ್ಲದಿದ್ದರೆ ಭಾರತದ ಸ್ವಾತಂತ್ರ್ಯ ಹೋರಾಟದ ಕಥೆಯು ಅಪೂರ್ಣವಾಗುತ್ತದೆ ಎಂದು ರಮಣ ಹೇಳಿದ್ದಾರೆ.

ನಗರ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ವರ್ಗ ವಿಭಜನೆಯ ಬಗ್ಗೆ ಪ್ರಜ್ಞೆ ಬೆಳೆಸಿಕೊಳ್ಳಲು ಯುವಜನರು ಕೊಳಗೇರಿಗಳಿಗೆ ಭೇಟಿ ನೀಡಬೇಕು. ಗ್ರಾಮೀಣ ಬದುಕಿನ ಬಗ್ಗೆ ತಿಳಿದುಕೊಳ್ಳಲು ಗ್ರಾಮಗಳಿಗೂ ಭೇಟಿ ನೀಡಬೇಕು ಎಂದು ರಮಣ ಅವರು ಯುವಜನರಿಗೆ ಕರೆಕೊಟ್ಟಿದ್ದಾರೆ.

ಇದನ್ನೂ ಓದಿ: ಮುಂಬೈ ದಾಳಿ ವೇಳೆ ಸಿಂಗ್‌ರನ್ನು ದುರ್ಬಲ ಎಂದ ಮಾಧ್ಯಮಗಳು ಪುಲ್ವಾಮ ದಾಳಿ ವೇಳೆ ಮೋದಿಯನ್ನು ಪ್ರಶ್ನಿಸಲಿಲ್ಲ: ರಾಹುಲ್‌ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights