ವಿಧಾನಸೌಧದ 2ನೇ ಮಹಡಿಯಲ್ಲಿ ಎರಡು ಬಿಯರ್ ಬಾಟಲ್ ಪತ್ತೆ..!

ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ 2ನೇ ಮಹಡಿಯಲ್ಲಿ ಎರಡು ಬಿಯರ್ ಬಾಟಲ್ ಪತ್ತೆಯಾಗಿದೆ. ಇಲ್ಲಿ ಮದ್ಯದ ಬಾಟಲಿ ಹೇಗೆ ಬಂತು ಅನ್ನೋ ಪ್ರಶ್ನೆ ಸದ್ಯ ಹುಟ್ಟು ಹಾಕಿದೆ. ಶಕ್ತಿಸೌಧದಲ್ಲಿ ಮದ್ಯಪಾನ ಮಾಡಿ ಬಾಟಲಿ ಬಿಟ್ಟು ಹೋಗಲಾಗಿದಿಯಾ? ಅಥವಾ ಮದ್ಯಪಾನಕ್ಕಾಗಿ ಬಾಟಲಿ ತರಿಸಲಾಗಿತ್ತಾ? ಅನ್ನೋ ಅನುಮಾನ ಮೂಡಿದೆ.

ವಿಧಾನಸೌಧ 2ನೇ ಮಹಡಿಯಲ್ಲಿ ಕೊಠಡಿ ನಂಬರ್ 208ರ ಬಳಿ ಬಿಯರ್ ಬಾಟಲ್ ಇಂದು ಪತ್ತೆಯಾಗಿದೆ.

ಸಾಮಾನ್ಯವಾಗಿ ವಿಧಾನಸೌಧಕ್ಕೆ ಸುಲಭವಾಗಿ ಶಾಸಕರು, ಸಿಬ್ಬಂದಿಗಳು ಪ್ರವೇಶ ಮಾಡುತ್ತಾರೆ. ಅಪರಿಚಯಸ್ಥರು ಪ್ರವೇಶ ಮಾಡಬೇಕು ಅಂದ್ರೆ ಪರಿಶೀಲಿಸಿ ಒಳಗೆ ಬಿಡಲಾಗುತ್ತದೆ. ಹೀಗಿರುವಾಗ ಮದ್ಯದ ಬಾಟಲಿ ಹೇಗೆ ಬಂತು? ಅಲ್ಲಿನ ಸಿಬ್ಬಂದಿಗಳು ಎಣ್ಣೆ ಪಾರ್ಟಿ ಮಾಡಿದ್ರಾ? ಅನ್ನೋ ಅನುಮಾನ ಮೂಡಿದೆ. ಇದನ್ನೆಲಾ ನೋಡಿದರೆ ವಿಧಾನಸೌಧದಲ್ಲಿ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ.

ಈ ಆತಂಕಕಾರಿ ಬೆಳವಣಿಗೆ ನಿಜಕ್ಕೂ ನಾಚಿಕೆಗೇಡಿನ ವಿಚಾರ. ಪೊಲೀಸರು ಈ ಬಗ್ಗೆ ತನಿಖೆ ಮಾಡಬೇಕೆಂದು ಆಗ್ರಹಿಸಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.