ಸಂಚಾರಿ ವಿಜಯ್ ಅಭಿನಯದ “ಪುಕ್ಸಟ್ಟೆ ಲೈಫು’ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ!
ದಿವಂಗತ ಸಂಚಾರಿ ವಿಜಯ್ ಅಭಿನಯದ “ಪುಕ್ಸಟ್ಟೆ ಲೈಫು’ ಸಿನಿಮಾ ಇಂದಿನಿಂದ (ಶುಕ್ರವಾರ) ರಾಜ್ಯಾದ್ಯಂತ ರಿಲೀಸ್ ಆಗಿದೆ. ದೈಹಿಕವಾಗಿ ಜೊತೆಗಿಲ್ಲದ ಸಂಚಾರಿ ವಿಜಯ್ ಅವರನ್ನು ಆನಿಮೇಶನ್ ಮೂಲಕ ಸೃಷ್ಟಿಸಿರುವ ಚಿತ್ರ ತಂಡ ಪ್ರಚಾರದಲ್ಲಿಆನಿಮೇಶನ್‌ನಲ್ಲಿರುವ ವಿಜಯ್ ಅವರು ಪ್ರಮೋಷನ್ ಸಮಯದಲ್ಲಿ ಜನರನ್ನು ಸೆಳೆಯುತ್ತಿದೆ.
“ಪುಕ್ಸಟ್ಟೆ ಲೈಫು’ ಚಿತ್ರದ ಪ್ರಮೋಶನ್‌ಗಾಗಿ ಚಿತ್ರತಂಡ ಸಂಚಾರಿ ವಿಜಯ್ ಅವರ ಆಯನಿಮೇಶನ್ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ನಟ ಸಂಚಾರಿ ವಿಜಯ್ ಅವರು ತಾವು ನಾಯಕನಾಗಿರುವ “ಪುಕ್ಸಟ್ಟೆ ಲೈಫು’ ಚಿತ್ರದ ಬಿಡುಗಡೆಯ ಬಗ್ಗೆ ಡಾ. ರಾಜ ಕುಮಾರ್, ಶಂಕರನಾಗ್, ವಿಷ್ಣುವರ್ಧನ್, ಅಂಬರೀಶ್, ಬಿ. ವಿ ಕಾರಂತ್, ಗಿರೀಶ್ ಕಾರ್ನಾಡ್ ಅವರ ಸಮ್ಮುಖದಲ್ಲಿ ಮಾತನಾಡುತ್ತಾರೆ.
ಇದಕ್ಕೆ ಹಿರಿಯ ನಟರು ಬೆಂಬಲ ನೀಡುವಂತೆ ವಿಡಿಯೋ ಚಿತ್ರಿಸಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಸಂಚಾರಿ ವಿಜಯ್ ಅವರ ಅನುಪಸ್ಥಿತಿಯಲ್ಲೂ ಚಿತ್ರತಂಡ ಇಂಥದ್ದೊಂದು ಕ್ರಿಯಾಶೀಲ ಪ್ರಯೋಗದ ಮೂಲಕ ಪ್ರಚಾರ ಕಾರ್ಯ ನಡೆಸುತ್ತಿರುವುದರ ಬಗ್ಗೆ ಚಿತ್ರರಂಗದಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಸಿನಿಮಾ ಸಂಕಷ್ಟಕ್ಕೆ ‘ತೆರೆ’? : ಇಂದು ಶೇ.50-50 ರೂಲ್ಸ್ ರದ್ದು ಸಾಧ್ಯತೆ!

