ಕಾಲೇಜು ಆವರಣದಲ್ಲಿ ತಲೆ ಕಡೆದು ವಿದ್ಯಾರ್ಥಿನಿಯ ಬರ್ಬರ ಕೊಲೆ!
ಕಾಲೇಜು ಆವರಣದಲ್ಲಿ ತಲೆ ಕಡೆದು ವಿದ್ಯಾರ್ಥಿನಿಯ ಬರ್ಬರ ಕೊಲೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.
ವಿದ್ಯಾರ್ಥಿನಿ ನಿತಿನಮೋಲ್ (22) ಕೊಲೆಯಾದ ವಿದ್ಯಾರ್ಥಿನಿ. ವೈಕಂನ ತಲೆಯೋಳಪರಂಬು ನಿವಾಸಿಯಾಗಿದ್ದ ನಿತಿನಮೋಲ್ ಕೊಟ್ಟಾಯಂನ ಸೇಂಟ್ ಥಾಮಸ್ ಕಾಲೇಜು ಕ್ಯಾಂಪಸ್ನಲ್ಲಿ ಮೂರನೇ ವರ್ಷದ ಬಿವಿಓಸಿ ಬ್ಯಾಚ್ಯುಲರ್ ಆಫ್ ವೆಕೇಷನ್ BVOC (Bachelor of Vocation) ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚೆಗೆ ತನ್ನ ಸಹಪಾಠಿಯ ಪ್ರೀತಿ ನಿರಾಕರಿಸಿದ್ದಳು. ಇದೇ ಕಾರಣಕ್ಕೆ ವಿದ್ಯಾರ್ಥಿನಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಭಿಷೇಕ್ ಬೈಜು ಕೊಲೆ ಮಾಡಿದ್ದಾನೆಂದು ಆರೋಪಿಸಲಾಗುತ್ತಿದೆ.
ಕೂತಟ್ಟುಕುಲಂನ ಉಪ್ಪಾಣಿ ನಿವಾಸಿಯಾದ ಅಭಿಷೇಕ್ ಬೈಜು ಎಂಬಾತ ಪರೀಕ್ಷಾ ಕೊಠಡಿಗೆ ಬರುವ ವೇಳೆ ನಿತಿನಮೋಲ್ ತಲೆ ಕಡಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಅಭಿಷೇಕ್ ಬೈಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.