ಫೋಟೋ ವೈರಲ್ ಆದ್ರೆ ಏನು; ತಾಕತ್ತಿದ್ದರೆ ನನ್ನ ಸಿಡಿ ರಿಲೀಸ್ ಮಾಡಿ: ಯತ್ನಾಳ್ ಸವಾಲು
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಶ್ಲೀಲ ವಿಡಿಯೋದ್ದು ಎನ್ನಲಾದ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್, ಇದರ ಹಿಂದೆ ಯಾರ್-ಯಾರು ಇದ್ದಾರೆ ಅಂತ ನನಗೆ ಗೊತ್ತು. ಅವರಿಗೆ ತಾಕತ್ತಿದ್ದರೆ ನನ್ನ ಅಶ್ಲೀಲ ಸಿಡಿ ಇದ್ರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ನನ್ನ ಪೋಟೋ ವೈರಲ್ ಹಿಂದೆ ಎಲ್ಲಾ ಪಕ್ಷದವರು ಇದ್ದಾರೆ. ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಸಿಡಿ ಮಾಡೋ ಫ್ಯಾಕ್ಟರಿಯೇ ಇದೆ. ನನ್ನ ಮಾತು ಇಷ್ಟ ಪಡೆದವರು, ನನ್ನ ಏಳಿಗೆಯನ್ನು ಸಹಿಸದವರುಹೀಗೆ ಮಾಡಿದ್ದಾರೆ. ಇದಕ್ಕೆ ನಾನು ಹೆದರುವುದಿಲ್ಲ ಎಂದು ಯತ್ನಾಳ್ ಕಿಡಿಕಾರಿದ್ದಾರೆ.
ನಾನು ಭ್ರಷ್ಟಾಚಾರದ ವಿರುದ್ದ, ಹಿಂದೂತ್ವದ ಪರ ಮಾತನಾಡುತ್ತೇನೆ. ನನ್ನ ಮಾತು ಕೆಲವರಿಗೆ ಸಮಸ್ಯೆ ಆಗಿದೆ. ಹೀಗಾಗಿ ನನ್ನ ಪೋಟೋವನ್ನು ಹರಿಬಿಟ್ಟಿದ್ದಾರೆ. ಆ ಕಳ್ಳರು ಕೆಲವೇ ದಿನಗಳಲ್ಲಿ ಸಿಕ್ಕಿ ಬೀಳುತ್ತಾರೆ. ಅವರಿಗೆ ತಕ್ಕ ಶಾಸ್ತಿ ಆಗಲಿದೆ ಎಂದು ಅವರು ಹೇಳಿದ್ದಾರೆ.
ನನ್ನ ಕ್ಷೇತ್ರದ ಕಾರ್ಯಕರ್ತರು, ಜನರು ವೀಡಿಯೋ ಕಾಲ್ ಮಾಡ್ತಾ ಇರುತ್ತಾರೆ. ಆಗ ಅವರೊಂದಿಗೆ ಮಾತನಾಡಿ, ಸಮಸ್ಯೆಗೆ ಪ್ರತಿಸ್ಪಂದಿಸುವ ಕೆಲಸವನ್ನು ನಾನು ಮಾಡುತ್ತೇನೆ. ಅಂತಹ ಪೋಟೋ ಬಳಸಿಕೊಂಡು ನನ್ನ ಅಶ್ಲೀಲ ಸಿಡಿಯ ಪೋಟೋ ಎಂದು ವೈರಲ್ ಮಾಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಪೋಟೋ ವೈರಲ್ ಮಾಡಿ ನನ್ನನ್ನು ಎದುರಿಸಲು ಆಗುವುದಿಲ್ಲ. ಅವರಿಗೆ ತಾಕತ್ತಿದ್ದರೆ, ನನ್ನ ಸಿಡಿ ಇದ್ದರೆ ರಿಲೀಸ್ ಮಾಡಿ ಎಂದು ಅವರು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆ: ನಟ ವಿಜಯ್ ಅಭಿಮಾನಿ ಸಂಘ 115 ಸ್ಥಾನಗಳಲ್ಲಿ ಗೆಲುವು!

