ತಮಿಳುನಾಡು ಚುನಾವಣೆ: ನಟ ವಿಜಯ್ ಅಭಿಮಾನಿ ಸಂಘ 115 ಸ್ಥಾನಗಳಲ್ಲಿ ಗೆಲುವು!

ತಮಿಳುನಾಡಿನ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಮಕ್ಕಳ್ ನೀತಿ ಮೈಯಂ ಪಕ್ಷ ಶೂನ್ಯ ಸಾಧನೆ ಮಾಡಿದೆ. ಇದೇ ಸಂದರ್ಭದಲ್ಲಿ, ಯುವ ಸೂಪರ್ ಸ್ಟಾರ್ ತಲಪತಿ ವಿಜಯ್ ಅವರ ಅಭಿಮಾನಿ ಸಂಘವು 100 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ.

ರಾಜಕೀಯ ಪ್ರವೇಶದಿಂದ ವಿಜಯ್ ದೂರ ಉಳಿದ್ದರೂ, ಅವರ ಅಭಿಮಾನಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದರು.

ಇದೇ ಮೊದಲ ಬಾರಿಗೆ ವಿಜಯ್ ಅವರ ಅಭಿಮಾನಿಗಳ ಸಂಘ – ಅಖಿಲ ಭಾರತ ತಲಪತಿ ವಿಜಯ್ ಮಕ್ಕಳ ಇಯ್ಯಕಂ ಸಂಘವು ಒಂಬತ್ತು ಜಿಲ್ಲೆಗಳ ಗ್ರಾಮೀಣ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿತ್ತು.

ವಿಜಯ್ ಅವರ ಅಭಿಮಾನಿ ಸಂಘವು ಸ್ಪರ್ಧಿಸಿದ್ದ 169 ಸ್ಥಾನಗಳಲ್ಲಿ 115 ಸ್ಥಾನಗಳನ್ನು ಗೆದ್ದುಕೊಂಡಿದೆ. ಸಂಘದ ಅಭ್ಯರ್ಥಿಗಳು 13 ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 115 ವಿಜೇತರಲ್ಲಿ 45 ಮಹಿಳೆಯರಿದ್ದಾರೆ. ಅಲ್ಲದೆ, ಇತರ ವಿಜೇತರಲ್ಲಿ ರೈತರು, ಲ್ಯಾಬ್ ತಂತ್ರಜ್ಞರು, ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಮತ್ತು ವ್ಯಾಪಾರಿಗಳು ಸೇರಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ಪುದುಚೇರಿ ಮಾಜಿ ಶಾಸಕ ಬಸ್ಸಿ ಆನಂದ್ ತಿಳಿಸಿದ್ದಾರೆ.

ಈ ಫಲಿತಾಂಶಗಳು ವಿಜಯ್ ಅವರು ತಮಿಳುನಾಡಿನ ಭವಿಷ್ಯದ ರಾಜಕೀಯದಲ್ಲಿ ದೊಡ್ಡ ಪಾತ್ರವನ್ನು ಹೊಂದಲು ಕಾರಣವಾಗುತ್ತದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

“ವಿಜಯ್ ಕಣಕ್ಕೆ ಧುಮುಕುವ ಮೊದಲು ಸರಿಯಾದ ಸಂಶೋಧನೆ ನಡೆಸಿದ್ದಾರೆ. ಅವರು ತಮ್ಮ ಅಭಿಮಾನಿಗಳಿಗೆ ತಮ್ಮ ಹೆಸರು ಮತ್ತು ಧ್ವಜವನ್ನು ಬಳಸಲು ಅವಕಾಶ ಮಾಡಿಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಅವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಅವರು ಕೆಲವು ಸ್ಥಾನಗಳನ್ನು ಗೆಲ್ಲಬಹುದು ಎಂದು ತಿಳಿದಿದ್ದರು. ಅವರು ರಾಜಕೀಯದಲ್ಲಿ ಧುಮುಕುವ ಸಾಧ್ಯತೆಯಿದೆ. ತಮಿಳುನಾಡು ರಾಜ್ಯದಲ್ಲಿ ಜನಪ್ರಿಯ ನಾಯಕರಿಗೆ ಸ್ಪಷ್ಟ ಅವಕಾಶವಿದೆ” ಎಂದು ಮಧುರೈ ಮೂಲದ ಥಿಂಕ್ ಟ್ಯಾಂಕ್ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕ ಆರ್. ಪದ್ಮನಾಭನ್ ಹೇಳಿದ್ದಾರೆ.

ಇದನ್ನೂ ಓದಿ: ವಾಜಪೇಯಿ ಭಾಷಣದ ವಿಡಿಯೋ ಹಂಚಿಕೊಂಡು ಬಿಜೆಪಿಗೆ ತಿರುಗೇಟು ನೀಡಿದ ವರುಣ್‌ ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights