ಸಣ್ಣ ರೈತರಿಗೆ ಸಾಲದ ರಿಲೀಫ್: 20 ಲಕ್ಷ ಕೋಟಿ ಪ್ಯಾಕೇಜ್ ವಿವರಿಸಿದ ವಿತ್ತ ಸಚಿವೆ
ಕೊರೊನಾ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಮೊನ್ನೆ ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ಪ್ಯಾಕೇಜ್ ನ್ನು ಘೋಷಿಸಿದ್ದರು. ಈ ಪ್ರಾಕೇಜ್ ನ ವಿವರಣೆಯ ಕೊಂಚ ಭಾಗವನ್ನು ನಿನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾದ್ಯಮಗೋಷ್ಠಿಯಲ್ಲಿ ಪ್ರಕಟಿಸಿದ್ದರು. ಇಂದು ಮತ್ತೆ ಮಾದ್ಯಮಗೋಷ್ಠಿಯನ್ನು ಕರೆದು ಸಚಿವೆ ಯಾವ ಕ್ಷೇತ್ರಗಳಿಗೆ ನೆರವು ನೀಡಲಾಗಿದೆ ಎನ್ನುವ ವಿವರಣೆ ನೀಡಿದ್ದಾರೆ.
ಹೌದು ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಮಾದ್ಯಮಗೋಷ್ಠಿ ಶುರು ಮಾಡಿದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್, ಮೇ 31ರವರೆಗೆ ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಲ್ಲಿ ಕೇಂದ್ರ ರೈತರಿಗೆ ನೆರವಾಗಿದೆ ಎಂದರು.
ಇದು ಎರಡನೇ ಪ್ಯಾಕೇಜ್ ವಿವರಣೆಯಾಗಿದೆ. 9 ಹಂತದಲ್ಲಿ ಪ್ಯಾಕೇಜ್ ಘೋಷಣೆ ಮಾಡಲಿದ್ದೇವೆ. ಇದರಲ್ಲಿ ವಲಸೆ ಕಾರ್ಮಿಕರಿಗೆ, ಬೀದಿ ವ್ಯಾಪಾರಿಗಳಿಗೆ, ಸಣ್ಣ ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ನೆರವನ್ನು ನೀಡಿದೆ. ಪಿಎಂ ಗರೀಬ್ ಕಲ್ಯಾಣ ಯೋಜನೆ ಬಡವರಿಗಾಗಿ ಇದೆ. ಈಗಾಗಲೇ 3 ಕೋಟಿ ರೈತರು 4 ಲಕ್ಷ ಕೋಟಿ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲ ಪಡೆದಿದ್ದಾರೆ. ಈಗಾಗಲೇ ಸಾಲ ಪಡೆದ ರೈತರಿಗೆ ಅನುಕೂಲ ಮಾಡಲಾಗಿದೆ. 3 ತಿಂಗಳು ಇಎಂಐ ಪಾವತಿಸಬೇಕಾಗಿಲ್ಲ. 25 ಲಕ್ಷ ಕಿಸಾನ್ ಕ್ರಿಡಿಟ್ ಕಾರ್ಡ್ ವಿತರಿಸಲಾಗಿದೆ.
ಮಾರ್ಚ್ 1ರಿಂದ ಏಪ್ರಿಲ್ 30ರವರೆಗೆ ಎರಡು ತಿಂಗಳಲ್ಲಿ ರೈತರಿಗೆ ಹಾಗೂ ಗ್ರಾಮೀಣ ಪ್ರದೇಶಕ್ಕೆ ಹಣಕಾಸಿನ ಸಹಾಯ ಮಾಡಲಾಗಿದೆ. ನಬಾರ್ಡ್ ನಿಂದ 29 ಸಾವಿರದ 500 ಕೋಟಿ ಬಿಡುಗಡೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿಗೆ 4200 ಕೋಟಿ ಅನುದಾನ ನೀಡಲಾಗಿದೆ.
ಸದ್ಯ ಕೇಂದ್ರ ಸರ್ಕಾರ ಸಣ್ಣ ರೈತ ರಿಗೆ ಸಲಾದ ರಿಲೀಫ್ ಕೊಟ್ಟಿದೆ. ಮೇ 31ರವರೆಗೆ ಸಾಲದ ಮೇಲಿನ ಬಡ್ಡಿ ಮನ್ನ ಮಾಡಲಾಗಿದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.

