ಪಿಪಿಲಿ ಉಪಚುನಾವಣೆಯಲ್ಲಿ ಬಿಜೆಪಿ ಸೋಲು; ನಿರಾಶರಾಗಲು ಏನೂ ಇಲ್ಲ ಎಂದ ಕೇಸರಿ ಪಕ್ಷ!
ಒಡಿಶಾ ರಾಜ್ಯದ ಪಿಪಿಲಿ ಉಪಚುನಾವಣೆಯಲ್ಲಿ ಸುಮಾರು 21,000 ಮತಗಳ ಅಂತರದಲ್ಲಿ ಬಿಜೆಪಿ ಸೋಲು ಕಂಡಿದೆ. ಆದರೂ, ಚುನಾವಣೆಯಿಂದ ಕೆಲವು ಸಕಾರಾತ್ಮಕ ಅಂಶಗಳನ್ನು ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನಿಸಿದೆ. ಕೊಲ್ಲಿ ಕರಾವಳಿ ಭಾಗದಲ್ಲಿ ತನ್ನ ಮತದ ಪಾಲನ್ನು ಹೆಚ್ಚಿಸಿಕೊಂಡಿದೆ ಎಂದು ಕೇಸರಿ ಪಡೆ ಹೇಳಿಕೊಂಡಿದೆ.
ಪಿಪಿಲಿ ಕ್ಷೇತ್ರವನ್ನು ಸುಮಾರು ಮೂರು ದಶಕಗಳಿಂದ ಬಿಜೆಡಿಯ ಭದ್ರಕೋಟೆಯೆಂದು ಪರಿಗಣಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಆಶ್ರಿತ್ ಪಟ್ಟನಾಯಕ್ ಆಡಳಿತಾರೂಢ ಬಿಜೆಡಿಗೆ ಭಾರೀ ಪೈಪೊಟೀ ನೀಡಿದ್ಧಾರೆ. ಹಾಗಾಗಿ, ಫಲಿತಾಂಶದಿಂದ ನಿರಾಶರಾಗಲು ಏನೂ ಇಲ್ಲ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
2009 ರಲ್ಲಿ ಕೇವಲ 7.39% ಮತಗಳನ್ನು ಪಡೆದಿದ್ದ ಕೇಸರಿ ಪಕ್ಷವು ಬಿಜೆಡಿ ಜೊತೆಗೆ ಮೈತ್ರಿ ಮುರಿದುಕೊಂಡ ನಂತರ ತನ್ನ ಪಾಲನ್ನು 42%ಗೆ ಏರಿಸಿಕೊಂಡಿದೆ. ಅಜಿತ್ ಮಂಗರಾಜ್ 2009 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು.
ಈ ಚುನಾವಣೆಯ ಫಲಿತಾಂಶವು ಕ್ಷೇತ್ರದ 42% ಮತದಾರರು ಬಿಜೆಡಿ ಸರ್ಕಾರದ ಬಗ್ಗೆ ಭ್ರಮನಿರಸನ ಹೊಂದಿದ್ದಾರೆ ಎಂಬುದನ್ನು ತೋರಿಸಿದೆ. ಹಣದ ಬಳಕೆಯ ಹೊರತಾಗಿಯೂ, ಬಿಜೆಪಿಯನ್ನು ಬೆಂಬಲಿಸಿದ ಮತದಾರರನ್ನು ಸೆಳೆಯಲು ಸರ್ಕಾರ ವಿಫಲವಾಗಿದೆ ಎಂಧು ರಾಜ್ಯ ಬಿಜೆಪಿ ಅಧ್ಯಕ್ಷ ಸಮೀರ್ ಮೊಹಂತಿ ಹೇಳಿದ್ದಾರೆ.
ಇದನ್ನೂ ಓದಿ: ಹಾನಗಲ್ ಬೈ ಎಲೆಕ್ಷನ್: ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ರಾಜಶೇಖರ ಕಟ್ಟೇಗೌಡ ಹೆಸರು ಮುನ್ನೆಲೆಗೆ!
ಬಿಜೆಡಿ ಗೆಲುವಿಗೆ ಕಾಂಗ್ರೆಸ್ ಕೂಡ ಕೊಡುಗೆ ನೀಡಿದೆ. ಕಾಂಗ್ರೆಸ್ನಂತಹ ರಾಷ್ಟ್ರೀಯ ಪಕ್ಷವು ಪಿಪಿಲಿ ಕ್ಷೇತ್ರದಲ್ಲಿ80ರ ದಶಕದವರೆಗೆ ತನ್ನ ಪ್ರಾಬಲ್ಯವನ್ನು ಹೊಂದಿತ್ತು. ಆದರೆ, ನಂತರದಲ್ಲಿ ಅದರ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಸತತ ಠೇವಣಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಬಿಜೆಪಿಯ ಗೆಲುವನ್ನು ತಡೆಯಲು ಕಾಂಗ್ರೆಸ್ ನಾಯಕತ್ವವು ಬಿಜೆಡಿಗೆ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 17 ರಂದು ನಡೆಯಬೇಕಿದ್ದ ಚುನಾವಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿತ್ತು. ಈ ಐದು ತಿಂಗಳುಗಳ ಸಮಯದಲ್ಲಿ ಆಡಳಿತ ಪಕ್ಷಕ್ಕೆ ಫಣಿ ನೆರವು ಮತ್ತು ಬೆಳೆ ವಿಮೆಯನ್ನು ವಿತರಿಸಲು ಅಧಿಕೃತ ಯಂತ್ರೋಪಕರಣಗಳನ್ನು ಬಳಸಲು ಸಾಕಷ್ಟು ಅವಕಾಶವತ್ತು. ದೀರ್ಘ ಅಂತರವು ಆಡಳಿತ ಪಕ್ಷಕ್ಕೆ ಸಹಾಯ ಮಾಡಿತು. ಇದರಿಂದಾಗಿ ಬಿಜೆಡಿ ಗೆಲುವು ಸಾಧಿಸಿತು ಎಂದು ಮೊಹಂತಿ ಹೇಳಿದ್ದಾರೆ.
ಕೇಸರಿ ಪಕ್ಷವು 1995 ರಲ್ಲಿ ಮೊದಲ ಬಾರಿಗೆ ಪಿಪಿಲಿ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆಗ, ಬಿಜೆಪಿ ಅಭ್ಯರ್ಥಿ ನಬಕಿಶೋರ್ ರೂಟ್ ಆಗ ಸುಮಾರು 16,000 ಮತಗಳನ್ನು ಪಡೆದಿದ್ದರು.
2014 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮತಗಳಿಕೆಯ ಶೇಕಡಾವಾರು ಪ್ರಮಾಣವು 4.75% ಇಳಿದಿತ್ತು, ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಆಶ್ರಿತ್ ಅವರು ಒಟ್ಟು ಮತದಾನದಲ್ಲಿ 11.16% ಮತಗಳನ್ನು ಪಡೆದಿದ್ದರು. 2019ರ ಚುನಾವಣೆಯಲ್ಲಿಯೂ ಅವರೇ ಅಭ್ಯರ್ಥಿಯಾಗಿದ್ದರು. ಆ ಚುನಾವಣೆಯಲ್ಲಿ ಅವರು 41% ಮತಗಳನ್ನು ಪಡೆದರು. ಇದೀಗ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 42% ಮತಗಳನ್ನು ಪಡೆದಿದ್ದಾರೆ. ಇದು ಬಿಜೆಪಿಯತ್ತ ಜನರು ಒಲವು ಹೊಂದಿರುವುದನ್ನು ಸಾಬೀತು ಪಡಿಸಿದೆ ಎಂದು ಮೊಹಂತಿ ಹೇಳಿದ್ದಾರೆ.
ಇದನ್ನೂ ಓದಿ: ಹಾನಗಲ್ ಬೈ ಎಲೆಕ್ಷನ್: ಜೆಡಿಎಸ್ ಅಭ್ಯರ್ಥಿ ಘೋಷಣೆ; ನಿಯಾಜ್ ಶೇಕ್ ಕಣಕ್ಕೆ!

